ಇತ್ತೀಚಿನ ಸುದ್ದಿ
ಕರಾವಳಿಗೂ ತಟ್ಟಿದ ಬೆಂಗಳೂರಿನ ಸಾರಿಗೆ ಸಿಬ್ಬಂದಿ ಮುಷ್ಕರ: ಕೆಎಸ್ಸಾರ್ಟಿಸಿ ಬಸ್ ಸಂಖ್ಯೆ ಇಳಿಮುಖ
December 12, 2020, 2:06 PM

ಮಂಗಳೂರು(reporterkarnataka news): ಬೆಂಗಳೂರಿನಲ್ಲಿ ಸಾರಿಗೆ ಸಿಬ್ಬಂದಿಗಳು ನಡೆಸುತ್ತಿರುವ ಮುಷ್ಕರ ಬಿಸಿ ದೂರದ ಮಂಗಳೂರು ಹಾಗೂ ಪುತ್ತೂರಿಗೂ ತಟ್ಟಲಾರಂಭಿಸಿದೆ. ಕರಾವಳಿ ಭಾಗದಲ್ಲಿ ಯಾವುದೇ ಮುಷ್ಕರ ಇಲ್ಲದಿದ್ದರೂ ಬೆಂಗಳೂರಿನಿಂದ ಯಾವುದೇ ಸರಕಾರಿ ಬಸ್ ಗಳು ಇಲ್ಲಿಗೆ ಬರುತ್ತಿಲ್ಲ. ಜನರು ಪ್ರಯಾಣಕ್ಕಾಗಿ ರೈಲಿನ ಮೊರೆ ಹೋಗುತ್ತಿದ್ದಾರೆ.
ಮಂಗಳೂರಿನ ಬಸ್ ನಿಲ್ದಾಣದಲ್ಲಿ ಬಸ್ ಗಳ ಸಂಖ್ಯೆ ಶನಿವಾರ ಬೆಳಗ್ಗಿನಿಂದಲೇ ತೀರಾ ಇಳಿಮುಖವಾಗಿದೆ. ಬೆಳಗ್ಗೆ ಪೊಲೀಸ್ ಭದ್ರತೆಯಲ್ಲಿ ಮೈಸೂರಿಗೆ ಬಸ್ ಕಳುಹಿಸಲಾಗಿದೆ. ಬೆಂಗಳೂರಿಗೂ ಒಂದೆರಡು ರೆಡ್ ಬೋರ್ಡ್ ಬಸ್ ಗಳು ಹಾಗೂ
ವೋಲ್ವೊ ಬಸ್ ಸಂಚಾರ ನಡೆಸಿವೆ. ಸ್ಥಳೀಯ ರೂಟ್ ನ ಬಸ್ ಗಳು ಕೆಲವು ಮಾತ್ರ ಬಸ್ ನಿಲ್ದಾಣದಲ್ಲಿವೆ. ದೂರದ ಊರಿಗೆ ತೆರಳುವ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಬಸ್ ಗಾಗಿ ಕಾಯುತ್ತಿದ್ದಾರೆ.
ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿಯೂ ಶನಿವಾರ ಬೆಳಗಿನಿಂದ ಬಸ್ ಗಳ ಸಂಖ್ಯೆ ಇಳಿಮುಖವಾಗಿದೆ. ಇದರಿಂದ ಸಾಮಾನ್ಯ ಪ್ರಯಾಣಿಕರು ತೊಂದರೆ ಅನುಭವಿಸಬೇಕಾಯಿತು. ಬೆಂಗಳೂರಿನಿಂದ ಯಾವುದೇ ಕೆಎಸ್ಸಾರ್ಟಿಸಿ ಬಸ್ ಗಳು ಮಂಗಳೂರು, ಪುತ್ತೂರಿಗೆ ಸಂಚಾರ ನಡೆಸದ ಹಿನ್ನೆಲೆಯಲ್ಲಿ ಪ್ರಯಾಣಿಕರು ರೈಲಿನ ಮೂಲಕ ಆಗಮಿಸಿದರು.