ಇತ್ತೀಚಿನ ಸುದ್ದಿ
ಹಾಸನ ಬಳಿ ಭೀಕರ ರಸ್ತೆ ಅಪಘಾತ: ಟ್ರಕ್- ಕಾರು ಡಿಕ್ಕಿ; ಬಾಲಕ ಸಹಿತ 6 ಮಂದಿ ಸ್ಥಳದಲ್ಲೇ ಸಾವು
26/05/2024, 12:05

ಹಾಸನ(reporterkarnataka.com): ಹಾಸನ ಜಿಲ್ಲೆಯ ಹೊರವಲಯದಲ್ಲಿ ಭಾನುವಾರ ನಡೆದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತಪಟ್ಟವರನ್ನು ಹೊಸಕೋಟೆ ತಾಲೂಕಿನ ದೇವನಹಳ್ಳಿ, ಅಂದರಹಳ್ಳಿ ಮತ್ತು ಕಾರಹಳ್ಳಿಯ ಸುನಂದಾ, ನೇತ್ರಾ, ನಾರಾಯಣಪ್ಪ, ರವಿ ಕುಮಾರ್, ಚಾಲಕ ರಾಕೇಶ್ ಹಾಗೂ ಬಾಲಕ ಚೇತನ್ ಎಂದು ತಿಳಿದು ಬಂದಿದೆ.
ಟ್ರಕ್ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿ ಈ ಘೋರ ದುರಂತ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ನಜ್ಜುಗುಜ್ಜಾಗಿದೆ. ಕಾರಿನಿಂದ ಮೃತದೇಹಗಳನ್ನು ಹೊರಗೆ ತೆಗೆಯಲು ಹರಸಾಹಸ ಪಡಬೇಕಾಯಿತು. ಕಾರಿನಲ್ಲಿದ್ದ ಇಬ್ಬರು ಪುರುಷರು ಹಾಗೂ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂಬಂಧಿಕರನ್ನು ನೋಡಿ ವಾಪಸ್ ಊರಿಗೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.