12:58 AM Sunday24 - January 2021
ಬ್ರೇಕಿಂಗ್ ನ್ಯೂಸ್
ವಿ.ವಿ ಕಾಲೇಜಿನಲ್ಲಿ ಪ್ರೌಢ ಶಾಲಾ ರಾಷ್ಟ್ರೀಯ ಸೇವಾಯೋಜನೆಯ ಯೋಜನಾಧಿಕಾರಿಗಳಿಗೆ ರಾಜ್ಯ ಮಟ್ಟದ ಕಾರ್ಯಾಗಾರ ಬಲ್ಯ ಸಮೀಪ ಕಾರು- ಬೊಲೆರೋ ಅಪಘಾತ:  ಒಬ್ಬ ಸಾವು, 4 ಮಂದಿ ತೀವ್ರ… ಕಾಸರಗೋಡು: ಮೆಡಿಕಲ್ ಶಾಪ್ ಗೆ ಔಷಧ ಖರೀದಿಸಲು ಬಂದ ವ್ಯಕ್ತಿಯನ್ನು ಗುಂಪೊಂದು ಥಳಿಸಿ… ಕಾಳು ಹಾಕಿ ಕೋಳಿ ಕದಿಯುವ ಭಿಕ್ಷುಕರಿದ್ದಾರೆ ಎಚ್ಚರಿಕೆ: ನಿಮ್ಮ ಮನೆಗೂ ಬಂದಾರು ಜೋಕೆ!… ವಿವಾದಾತ್ಮಕ ವಾಟ್ಸಾಪ್ ಚಾಟ್ : ಮಹಾರಾಷ್ಟ್ರ ಸರಕಾರದಿಂದ ಅರ್ನಾಬ್ ಮತ್ತೆ ಬಂಧನ ಸಾಧ್ಯತೆ ವೈರಲ್ ಆಗುತ್ತಿದೆ ಕೆ.ಎಲ್. ರಾಹುಲ್ – ಆಶಿಕಾ ರಂಗನಾಥ್ ಜೋಡಿಯ ಫೋಟೋ: ನೆಟ್ಟಿಗರಿಂದ… ಗಣರಾಜ್ಯೋತ್ಸವ ದಿನ ಬೆಂಗಳೂರಿನಲ್ಲೂ ನಡೆಯಲಿದೆ ರೈತ- ಕಾರ್ಮಿಕರ ಟ್ರ್ಯಾಕ್ಟರ್ ಪರೇಡ್  ಕಟೀಲು ಮೇಳ ಸೇವೆ ಆಟಗಳು: ಇಂದು ಎಲ್ಲೆಲ್ಲಿ? ನೀವೇ ನೋಡಿ ಕೆಪಿಎಸ್ ಇ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ: ಬಂಧಿತರಿಂದ 24 ಲಕ್ಷ ರೂ.… ಕಾಫಿನಾಡು ಚಿಕ್ಕಮಗಳೂರಿನಲ್ಲಿ ನಡೆಯಿತೇ ರಹಸ್ಯ ಸಭೆ: ಬಿಜೆಪಿಯೊಳಗಿನ ಮುನಿಸು ತಣ್ಣಗಾಗಿಲ್ವೇ? 

ಇತ್ತೀಚಿನ ಸುದ್ದಿ

ಗ್ಲೋಬಲ್ ಎಕ್ಸ್ ಲೆನ್ಸ್  ಬುಕ್ ಆಫ್  ರಿಕಾರ್ಡ್ ಸೇರಿದ ಬಹುಮುಖ ಪ್ರತಿಭೆಯ ಪುಟಾಣಿ ಈ ಲಾಲಿತ್ಯ !

December 7, 2020, 5:47 PM

ಮಂಗಳೂರು(reporterkarnataka news): ಶಿಲ್ಪಕಲೆಗಳ ತವರೂರಾದ ಬೇಲೂರಿನ ಈ ಮುದ್ದು ಮುದ್ದಾದ ಪುಟಾಣಿ ಇಡೀ ರಾಜ್ಯ ತುಂಬಾ ಫೇಮಸ್. ವಯಸ್ಸು ಬರೇ ಎಂಟು. ಆದರೆ ಸಂಗೀತ, ನೃತ್ಯ, ನಟನೆ, ಕರಾಟೆ, ಯೋಗ ಇವೆಲ್ಲದರಲ್ಲಿ ಈಕೆ ಎತ್ತಿದ ಕೈ. ನೋಡೋಕೆ ಕೂಡ ಬೇಲೂರು ಶಿಲಾಬಾಲಿಕೆ ತರಹ ಸುಂದರವಾಗಿದ್ದಾಳೆ. ಈಕೆಯ ಹೆಸರು ಲಾಲಿತ್ಯ ಕುಮಾರ್.

ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಬ್ಯಾಂಕ್ ಉದ್ಯೋಗಿ ಕುಮಾರ್  ಹಾಗೂ ಶೋಭಾರಾಣಿ ದಂಪತಿಯ ಎರಡನೇ ಪುತ್ರಿ ಈ ಲಾಲಿತ್ಯ. ಇದೀಗ ಬೇಲೂರು ವಿದ್ಯಾವಿಕಾಸ ಪಬ್ಲಿಕ್ ಶಾಲೆಯಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ. ಭರತನಾಟ್ಯ, ಜಾನಪದ ನೃತ್ಯ ,ಸಂಗೀತ, ಕರಾಟೆ ಹಾಗೂ ಯೋಗ ಇವಳ ಹವ್ಯಾಸಗಳು.ಲಾಲಿತ್ಯ ನಾಲ್ಕು ವರ್ಷದಿಂದ ಭರತನಾಟ್ಯ ಅಭ್ಯಾಸ ಮಾಡುತ್ತಿದ್ದಾಳೆ.

ಸುಮಾರು 120ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಕೊಟ್ಟಿದ್ದಾಳೆ. 6 ದಾಖಲೆಗಳನ್ನು ಪಡೆದಿದ್ದಾಳೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ  ಹಲವಾರು ಪ್ರಶಸ್ತಿಗಳು ಹಾಗೂ ಗಣ್ಯ ವ್ಯಕ್ತಿಗಳ ಪ್ರಶಸ್ತಿ ಲಭಿಸಿದೆ. ಕರ್ನಾಟಕ ರಾಜ್ಯ ಕಲಾವಿದರ ರಕ್ಷಣಾ ವೇದಿಕೆ ನಡೆಸಿದ ಕರ್ನಾಟಕ ಕಲಾ ಪ್ರತಿಭೋತ್ಸವದಲ್ಲಿ ನಾಟ್ಯ ಶಾಂತಲೆ ಪ್ರಶಸ್ತಿ, ಚಿಕ್ಕಮಗಳೂರು ಜಿಲ್ಲೆಯ ನೃತ್ಯೋತ್ಸವದಲ್ಲಿ ನಾಟ್ಯ ಚತುರೆ ಪ್ರಶಸ್ತಿ, ಚಿಕ್ಕಬಳ್ಳಾಪುರದಲ್ಲಿ ರಾಷ್ಟ್ರೀಯ ಅಖಿಲ ಭಾರತ ನೃತ್ಯೋತ್ಸವ  ಕಾರ್ಯಕ್ರಮದಲ್ಲಿ ರಾಷ್ಟ್ರೀಯ ನಾಟ್ಯ  ಕಲರವಳಿ ಪ್ರಶಸ್ತಿ ಈಕೆಗೆ ಬಂದಿದೆ. ಹಾಗೆ ಕರ್ನಾಟಕ ಜನಸ್ಪಂದನಾ ಟ್ರಸ್ಟ್ ವತಿಯಿಂದ ಕಲಾರತ್ನ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಹಾಸನ, ಚಿತ್ರದುರ್ಗ, ಮಂಗಳೂರು, ಕುದುರೆಮುಖ, ಚಿಕ್ಕಬಳ್ಳಾಪುರ, ಹಾವೇರಿ, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಕಾರ್ಯಕ್ರಮ ನೀಡಿದ್ದಾಳೆ.


ಪ್ರತಿಭಾ ಪ್ರದರ್ಶನಕ್ಕೆ ಯಾವುದೇ ಭಾಷೆ -ಗಡಿಗಳ ವ್ಯಾಪ್ತಿ ಇರುವುದಿಲ್ಲ ಎನ್ನುವುದಕ್ಕೆ ಈ ಪುಟ್ಟ ಕುವರಿ ಸಾಕ್ಷಿ. ಈಕೆ ಆಂಧ್ರದ ತಿರುಪತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ಲೋಬಲ್ ಎಕ್ಸ್ ಲೆನ್ಸ್ ಬುಕ್ ಆಫ್  ರಿಕಾರ್ಡ್ ಗೆ ಸೇರ್ಪಡೆಯಾಗಿದ್ದಾಳೆ.ಹಾವೇರಿ ಜಿಲ್ಲೆಯ ಜನಮನ ಫೌಂಡೇಶನ್ ಸಂಸ್ಥೆಯವರು ನೀಡುವ ಕರ್ನಾಟಕ ಸ್ಟೇಟ್ ಅಚಿವರ್ಸ್  ರೆಕಾರ್ಡ್ಸ್ ಈಕೆಗೆ ಬಂದಿದೆ. Maltiple Props Records  ( ಸುಮಾರು Prosps use  ಮಾಡಿ Ullahoop, Deep,Mudpot , Nail bed etc )ಹಾಗೂ   ನ್ಯಾಷನಲ್ ರೆಕಾರ್ಡ್, Childrens Record, Super Achiver’s Record ಗೆ ಸೇರ್ಪಡೆಯಾಗಿದ್ದಾಳೆ. ತೆಲಂಗಾಣದ ರಾಯಲ್ಸ್  ಸಕ್ಸಸ್ ಇಂಟರ್ ನ್ಯಾಷನಲ್ ಬುಕ್ಸ್ ಆಫ್  ರೆಕಾರ್ಡ್ ಸಂಸ್ಥೆಯು ಕ್ಲಾಸಿಕಲ್ ಡ್ಯಾನ್ಸ್ ಐಕಾನ್  ಎಂಬ ಪ್ರಶಸ್ತಿ ನೀಡಿ ಲಾಲಿತ್ಯಳನ್ನು ಹರಸಿದೆ. ಅಷ್ಟೇ ಅಲ್ಲದೆ ದೇಶಾದ್ಯಂತ ಕೊರೊನಾ ಎಂಬ ಮಹಾಮಾರಿ ಬಂದು  ಶಾಲೆಗಳು ಮುಚ್ಚಿರುವ ಸಮಯದಲ್ಲಿ Voice Off Aradhana ಎಂಬ ಸಂಸ್ಥೆಯು ಪ್ರತಿ ದಿನವೂ ನಡೆಸುತ್ತಿದ್ದ fb ಲೈವ್ ಕಾರ್ಯಕ್ರಮದಲ್ಲಿ ಹಲವು ಕಾರ್ಯಕ್ರಮಗಳನ್ನು ನೀಡಿ ಜನ ಮೆಚ್ಚುಗೆ ಪಡೆದಿದ್ದಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು