ಇತ್ತೀಚಿನ ಸುದ್ದಿ
ಗಡಿಯಲ್ಲಿ ಭಾರತದ ರಸ್ತೆ ಸ್ಥಗಿತಕ್ಕೆ ಒತ್ತಾಯ: ಇಂದು ಭಾರತ- ಚೀನಾ 8ನೇ ಕಮಾಂಡರ್ ಸಭೆ
November 6, 2020, 7:51 AM

ಬೀಜಿಂಗ್: ಭಾರತ ಚೀನಾ ಗಡಿ ವಿವಾದ ಬಗೆಹರಿಸುವ ಸಂಬಂಧ ಕಮಾಂಡರ್ ಗಳ ಮಟ್ಟದ ಮಾತುಕತೆ ಇಂದು ನಡೆಯಲಿದೆ. ಇದು ಉಭಯ ದೇಶಗಳ ಸೇನಾ ಅಧಿಕಾರಿಗಳ ಮಟ್ಟದ ಎಂಟನೆ ಸುತ್ತಿನ ಮಾತುಕತೆಯಾಗಿದೆ.
ಪೂರ್ವಲಡಾಕ್ ನಿಂದ ಚೀನಾ ತನ್ನ ಈ ಹಿಂದಿನ ನೆಲೆಗಳಿಗೆ ಮರಳಬೇಕು ಎಂದು ಭಾರತ ಆಗ್ರಹಿಸಿದೆ. ಇದೇ ವೇಳೆ ಗಡಿಯಲ್ಲಿ ಭಾರತ ರಸ್ತೆ ಕಾಮಗಾರಿ ಸ್ಥಗಿತಗೊಳಿಸಬೇಕು ಎಂದು ಚೀನಾ ಒತ್ತಾಯಿಸಿದೆ.