ಇತ್ತೀಚಿನ ಸುದ್ದಿ
ಡ್ರಗ್ಸ್ ಜಾಲ: ಸ್ಯಾಂಡಲ್ ವುಡ್ ತಲ್ಲಣ, ಇಂದ್ರಜಿತ್
August 31, 2020, 1:45 AM

ಬೆಂಗಳೂರು(reporterkarnataka news):
ಸ್ಯಾಂಡಲ್ ವುಡ್ ನ ನಟ ನಟಿಯರು ಡ್ರಗ್ಸ್ ಜಾಲದಲ್ಲಿ ಶಾಮೀಲಾಗಿದ್ದಾರೆ ಎಂಬ ಆರೋಪದ ನಡುವೆ ಚಲನಚಿತ್ರ ನಿರ್ದೇಶಕ, ಪತ್ರಕರ್ತ ಇಂದ್ರಜಿತ್ ಲಂಕೇಶ್ ನೀಡಿದ ಹೇಳಿಕೆ ಚಂದನವನದಲ್ಲಿ ತಲ್ಲಣವನ್ನೇ ಸೃಷ್ಟಿಸಿದೆ. ಯಾವೆಲ್ಲ ನಟ ನಟಿಯರು ಭಾಗಿಯಾಗಿದ್ದಾರೆ ಎನ್ನುವ ಕುತೂಹಲ ಜನರಲ್ಲಿ ಕಾಡಲಾರಂಭಿಸಿದೆ.
ನಶಕನ್ಯೆ ಅನಿಕಾ ಬಂಧನದ ಬಳಿಕ ಡ್ರಗ್ಸ್ ಜತೆ ಸ್ಯಾಂಡಲ್ ವುಡ್ ನಂಟು ಬಿಚ್ಚಿಕೊಳ್ಳಲಾರಂಭಿಸಿದೆ. ಇದರೊಂದಿಗೆ ಇಂದ್ರಜಿತ್ ಲಂಕೇಶ್ ಅವರ ಹೇಳಿಕೆ ಬೆಂಕಿಗೆ ತುಪ್ಪ ಸುರಿದಾಗೆ ಆಗಿದೆ. ಇಂದ್ರಜಿತ್ ಹೇಳಿಕೆಗೆ ನಟ ಶಿವರಾಜ್ ಕುಮಾರ್, ಸುಂದರ್ ರಾಜ್, ಸೋನು ಗೌಡ, ಪತ್ರಕರ್ತ ರವಿ ಬೆಳಗರೆ ಗರಂ ಆಗಿದ್ದಾರೆ. ಈ ನಡುವೆ ಇಂದ್ರಜಿತ್ ಅವರು ಪೊಲೀಸ್ ರಕ್ಷಣೆ ನೀಡಿದರೆ ಎಲ್ಲವನ್ನೂ ಹೇಳುವೆ ಎಂದು ಮತ್ತೊಂದು ಬಾಂಬ್ ಎಸೆದಿದ್ದಾರೆ. ಈ ನಡುವೆ ಸಿಸಿಬಿ ಪೊಲೀಸರು ಡ್ರಗ್ಸ್ ಕುರಿತು ಮಾಹಿತಿ ನೀಡುವಂತೆ ಇಂದ್ರಜಿತ್ ಲಂಕೇಶ್ ಅವರಿಗೆ ನೋಟಿಸ್ ಜಾರಿಗೊಳಿಸಿದೆ. ಇಂದ್ರಜಿತ್ ಅವರು ಇಂದು ಸಿಸಿಬಿ ಮುಂದೆ ಹಾಜರಾಗುವ ಸಾಧ್ಯತೆಗಳಿವೆ.