8:35 AM Thursday3 - July 2025
ಬ್ರೇಕಿಂಗ್ ನ್ಯೂಸ್
ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಪೈಪೋಟಿಯಿಲ್ಲ: ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ Accident | ಸುರತ್ಕಲ್ ಬಳಿ ಎರಡು ಖಾಸಗಿ ಬಸ್ಸುಗಳು ಮುಖಾಮುಖಿ ಡಿಕ್ಕಿ: 28… Chikkaballapura | ರಾಜ್ಯ ಸಚಿವ ಸಂಪುಟ ಸಭೆ: ಮುಖ್ಯಮಂತ್ರಿ ಘೋಷಿಸಿದ ಯೋಜನೆ, ತೀರ್ಮಾನಗಳೇನು? JDS Protest | ರಾಜ್ಯದಲ್ಲಿ ಆರ್ಥಿಕ ಅರಾಜಕತೆ: ಬೆಂಗಳೂರು ಪ್ರತಿಭಟನೆಯಲ್ಲಿ ಜೆಡಿಎಸ್ ಆರೋಪ Dharwad | ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ: ಕಾರ್ಮಿಕ… ಬೆಂಗಳೂರು ಕಾಲ್ತುಳಿತದ ಪ್ರಕರಣ; ಸಿಎಟಿ ಆದೇಶ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶವಿದೆ: ಮುಖ್ಯಮಂತ್ರಿ Karnataka CM | ಮಾಧ್ಯಮಗಳು ನನ್ನನ್ನೂ ಸೇರಿ ಅಧಿಕಾರಸ್ಥರ ಓಲೈಕೆ ಮಾಡಬಾರದು: ಮುಖ್ಯಮಂತ್ರಿ… Kodagu | ಕುಶಾಲನಗರದ ಕೂಡಿಗೆಯಲ್ಲಿ ಚಿನ್ನದಂಗಡಿ ಮಾಲೀಕನ ಮನೆಗೆ ಕನ್ನ: 14 ಲಕ್ಷ… ಕವಿಕಾದಲ್ಲಿ 14 ಕೋಟಿ ರೂ. ವೆಚ್ಚದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ: ಇಂಧನ… Kodagu Crime | ಸುಳ್ಳು ಕೊಲೆ ಕೇಸ್ ಮೂಲಕ ಅಮಾಯಕ ಜೈಲಿಗೆ: ಇನ್ಸ್​ಪೆಕ್ಟರ್,…

ಇತ್ತೀಚಿನ ಸುದ್ದಿ

ದೇಶದಲ್ಲಿ ಹಿಂದೂ -ಮುಸ್ಲಿಂ- ಕ್ರೈಸ್ತ ಎಂಬ ಮನೋಭಾವ ತೊಲಗಿಸಿ: ಮಾಜಿ ಸಿಎಂ ಯಡಿಯೂರಪ್ಪ

01/12/2022, 19:34

ಶಿವಮೊಗ್ಗ(reporterkarnataka.com): ವಿದ್ಯಾವಂತ, ವಾಗ್ಮಿ, ವಾಲ್ಮೀಕಿ ಜನಾಂಗದ ಮುಖಂಡ ಹೆಚ್.ಟಿ.ಬಳಿಗಾರ್‌ ಅವರು ಹಾಗೂ ಅವರ ಬೆಂಬಲಿಗರ ಆಗಮನದಿಂದ ಬಿಜೆಪಿಗೆ ಬಲ ಬಂದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿಕಾರಿಪುರ ಬಿಜೆಪಿ ಕಚೇರಿಯಲ್ಲಿ ಎಚ್.ಟಿ.ಬಳಿಗಾರ್‌ರವರನ್ನು ಹಾಗೂ ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆಗೊಳ್ಳುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶದಲ್ಲಿ ಹಿಂದೂ -ಮುಸ್ಲಿಂ- ಕ್ರೈಸ್ತ ಎಂಬ ಮನೋಭಾವ ತೊಲಗಿಸಿ ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳಿ ಬದುಕುವಂತಹಾ ವ್ಯವಸ್ಥೆ ನಿರ್ಮಾಣವಾಗಬೇಕಾಗಿದೆ. ವಿಧಾನ ಸಭಾ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ೧೪-೧೫ ಸಾವಿರ ಮತಗಳನ್ನು ಪಡೆದು ಈಗ ವಾಲ್ಮೀಕಿ ಜನಾಂಗ ಹಾಗೂ ಮುಸಲ್ಮಾನರನ್ನೊಳಗೊಂಡಂತೆ ಅನೇಕ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿ ಪಕ್ಷಕೆ ಸೇರ್ಪಡೆಯಾಗುತ್ತಿರುವ ಎಚ್.ಟಿ.ಬಳಿಗಾರ್‌ರವರು ಹಾಗೂ ಅವರ ಬೆಂಬಲಿಗರ ಆಗಮನದಿಂದ ನಮ್ಮ ಪಕ್ಷಕ್ಕೆ ಬಲ ಬಂದಂತಾಗಿದೆ ಎಂದರು.
ನಾನು ಯಾವುದೇ ರೀತಿಯ ಜಾತಿ ರಾಜಕಾರಣ ಮಾಡದೆ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜಾತಿ- ಧರ್ಮ ಭೇದವಿಲ್ಲದೆ ಎಲ್ಲರನ್ನೂ ಸಮಾನವಾಗಿ ಕಂಡು ಎಲ್ಲರಿಗೂ ಸಮಬಾಳು ಎಲ್ಲರಿಗೂ ಸಮಪಾಲು ಎಂಬ ಧ್ಯೇಯಯೊಂದಿಗೆ ಆಡಳಿತ ನಡೆಸಲಾಯಿತು. ಅದರ ಮೂಲಕ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕೊಂಡೊಯ್ಯುವ ಇಚ್ಛೆಯಿದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆ ಯಾರು ಯಾರು ಕಣದಲ್ಲಿರಬೇಕು ಎಂಬ ತೀರ್ಮಾನವನ್ನು ತೆಗೆದುಕೊಳ್ಳುವಂತಹ ಸಂಸದೀಯ ಮಂಡಳಿಯ ಸಮಿತಿಯಲ್ಲಿ ಆಯ್ಕೆ ಮಾಡುವ ಜವಾಬ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿಯವರು ನನಗೆ ಗೌರವ ನೀಡಿದ್ದಾರೆಂದರೆ, ಅದಕ್ಕಿಂತ ದೊಡ್ಡ ಗೌರವ ಬೇಕಾಗಿಲ್ಲ. ಅದಕ್ಕೆ ಒಪ್ಪಿ ಮುಂದಿನ ಲೋಕಸಭಾ ಚುನಾವಣೆಗೆ ಈಗಿನ ಬಿಜೆಪಿ ಪಕ್ಷದ ಲೋಕಸಭಾ ಸದಸ್ಯರಿಗಿಂತ ಹೆಚ್ಚಿನ ಸಂಖ್ಯೆಯ ಸದಸ್ಯರನ್ನು ಆಯ್ಕೆ ಮಾಡುವ ಮೂಲಕ ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವುದಕ್ಕಾಗಿ ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗು, ಈ ಸಂದರ್ಭದಲ್ಲಿ ಇನ್ನು ಮೂರು, ನಾಲ್ಕು ದಿನಗಳಲ್ಲಿ ನಾನು ಮುಖ್ಯಮಂತ್ರಿಯೊಂದಿಗೆ ಮಾತನಾಡಿ ಬಳಿಗಾರ್‌ರವರಿಗೆ ಇಡೀ ರಾಜ್ಯದಲ್ಲಿ ಓಡಾಡುವ ಮೂಲಕ ಪಕ್ಷವನ್ನು ಬಲಪಡಿಸುವಂತಹಾ ಉತ್ತಮ ಸ್ಥಾನ ಮಾನವಿರುವಂತಹಾ ಬಹಳ ದೊಡ್ಡ ಜವಾಬ್ದಾರಿಯನ್ನು ನೀಡುವುದಾಗಿ ಭರವಸೆ ನೀಡಿದ ಅವರು, ಯಾರು ನಾನೇ ಮುಖ್ಯಮಂತ್ರಿ ಎಂದು ಬೀರುತ್ತಿದ್ದಾರೋ ಅವರು ಹಗಲುಗನಸು ಕಾಣುತ್ತಿದ್ದಾರೆ. ನಾನು ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಕನಿಷ್ಠ ೧೪೦ ರಿಂದ ೧೫೦ ಸ್ಥಾನಗಳಿಸುವ ಮೂಲಕ ಮತ್ತೊಮ್ಮೆ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಾಗಿ ಹೇಳಿದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಬಳಿಗಾರ್ ಒಂದು ಸಮಾಜಕ್ಕೆ ಸೀಮಿತವಲ್ಲ ಬಸವಣ್ಣ ಹಾಕಿಕೊಟ್ಟ ದಾರಿಯಲ್ಲಿ ಸಾಗುತ್ತಿದ್ದಾರೆ. ತಾಲ್ಲೂಕಿನ ನೀರಾವರಿ ಯೋಜನೆಗೆ ನಿಮ್ಮ ಚಿಂತನೆ ಶ್ರಮ ಒಳ್ಳೆಯದು ನೀವಿರುವ ಜಾಗ ಸರಿಯಿಲ್ಲ ನಮ್ಮ ಪಕ್ಷಕ್ಕೆ ಆಗಮಿಸಿ ಇನ್ನಷ್ಟು ಜನಪರ ಕೆಲಸಮಾಡಿ ಎಂದು ಹೇಳಿದಾಗ ಸಂತೋಷದಿಂದ ಒಪ್ಪಿ ನಮ್ಮ ಪಕ್ಷಕ್ಕೆ ಬಂದಿದ್ದಾರೆ. ಅವರು ಯಾವುದೇ ರೀತಿಯ ಕೆಲಸವನ್ನು ಕೈಗೊಂಡರೆ ಛಲ ಬಿಡದೆ ಕಾರ್ಯರೂಪಕ್ಕೆ ತರುವ ಮನೋಭಾವ ಉಳ್ಳವರು. ತಾಲ್ಲೂಕಿನ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಇವರ ಸಲಹೆ ಸಹಕಾರ ಅಗತ್ಯವಾಗಿದ್ದು, ಹಾಗಾಗಿ ಅವರ ಗೌರವಕ್ಕೆ ಚ್ಯುತಿಬಾರದಂತೆ ನಡೆಸಿಕೊಳ್ಳುತ್ತೇವೆ ಎಂದು ತಿಳಿಸಿದರು.
ಬಿ.ವೈ.ವಿಜಯೇಂದ್ರ ಮಾತನಾಡಿ, ಬಿ.ಎಸ್.ವೈ ಚಂತನೆ, ಹೋರಾಟ, ಅಧಿಕಾರ, ಅಭಿವೃದ್ಧಿ, ಸರ್ವರಿಗೂ ಸಮಬಾಳು ಸಮಪಾಲು ಎನ್ನುವಂತೆ ನಡೆದುಕೊಂಡಿದ್ದಾರೆ. ನಾನು ಪಕ್ಷದ ಸಂಘಟನೆ ಮಾಡಿದ್ದೇನೆ ಅತಂತ್ರ ವಿಧಾನಸಭೆ ಆಗಿದ್ದಾಗ ಅವರಿಗೆ ಅಧಿಕಾರ ಪಡೆಯುವ ರೀತಿಯಲ್ಲಿ ಕೆಲಸ, ಅದೇ ರೀತಿ ವಿವಿಧ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಿದ್ದೇನೆ. ಶಿರಾ, ಕೆಆರ್ ಪೇಟೆ ಗೆಲುವಿನ ಪರಿಣಾಮ ನಾನು ಹಳೇ ಮೈಸೂರು ಭಾಗದಲ್ಲಿ ಚುನಾವಣೆ ನಿಲ್ಲಬೇಕು ಎನ್ನುವ ಒತ್ತಡವಿತ್ತು. ಇಲ್ಲಿನ ಕಾರ್ಯಕರ್ತರ ಮನವಿ ಮೇರೆಗೆ ಬಿಎಸ್‌ವೈ ನನ್ನ ಹೆಸರು ಘೋಷಣೆ ಮಾಡಿದ್ದಾರೆ.

ಅದಕ್ಕೆ ಬದ್ಧನಾಗಿ ಕೆಲಸ ಮಾಡಲು ಆರಂಭಿಸಿದ್ದು, ತಾಲ್ಲುಕಿನ ವಿಧಾನಸಭಾ ಚುನಾವಣೆಯಲ್ಲಿ ನನಗೆ ೫೦ ಸಾವಿರ ಮತಗಳ ಅಮತರದಲ್ಲಿ ಗೆಲ್ಲಿಸಿ ಎಂದು ಮನವಿ ಮಾಡಿದರು.
ಹೆಚ್.ಟಿ.ಬಳಿಗಾರ್ ಮಾತನಾಡಿ, ಪ್ರಸ್ತುತ ರಾಜಕೀಯ ಬೆಳವಣಿಗೆ ಕಂಡು ಬಿಜೆಪಿಗೆ ಬಂದಿದ್ದೇನೆ. ಯಡಿಯೂರಪ್ಪನವರು ರೋಚಕ ಹೊರಾಟದ ಮೂಲಕ ರಾಜಕಿಯಕ್ಕೆ ಬಂದಿದ್ದು, ಅವರು ಅನೇಕ ಬಾರಿ ವಿಧಾನಸಭೆಯಲ್ಲಿ ಗಂಭೀರ ಸಮಸ್ಯೆಗಳ ಬಗ್ಗೆ ಚರ್ಚೆಮಾಡಿ ಉತ್ತರ ಕೊಟ್ಟಿದ್ದಾರೆ. ಅನೇಕ ಕಲ್ಲುಮುಳ್ಳು ದಾರಿಯಲ್ಲಿ ಹಲವು ಸವಾಲನ್ನು ಎದುರಿಸಿ ನಿಂತಿದ್ದಾರೆ. ಜಿಲ್ಲೆಯಲ್ಲಿ ವಿಮಾನ, ತಾಲ್ಲೂಕಿನಲ್ಲಿ ರೈಲು, ನೀರಾವರಿ ಯೋಜನೆ ಸೇರಿದಂತೆ ಸಮಗ್ರ ಅಭಿವೃದ್ಧಿ ಮಾಡಿದ್ದಾರೆ. ಬಿಎಸ್‌ವೈರವರನ್ನು ಕೇಂದ್ರದ ಸಂಸದೀಯ ಮಂಡಳಿಯ ಸಮಿತಿಯಲ್ಲಿ ಆಯ್ಕೆ ಮಾಡಿಕೊಂಡಿರುವುದು ನಮಗೆ ಹೆಮ್ಮೆಯ ಸಂಗತಿಯಾಗಿದೆ.
ಮೋದಿಗೆ ವಿಶ್ವವೇ ಗೌರವ ಕೊಡುತ್ತದೆ ಅದು ಸಹ ಹೆಮ್ಮೆಯಾಗಿದೆ. ಈ ಹಿಂದಿನ ಪಕ್ಷದಲ್ಲೇ ಇದ್ದು ಅಭಿವೃದ್ಧಿ ಕಾರ್ಯಗಳಿಗೆ ವಿರೋಧ ಮಾಡುತ್ತಾ ಹೋದರೆ ತಾಲ್ಲೂಕಿನಲ್ಲಿ ಸಾಧನೆ ಮಾಡುವುದು ಯಾವಾಗ ಅದಕ್ಕಾಗಿ ಅವಕಾಶ ಸಿಕ್ಕಿದ್ದನ್ನು ಬಳಸಿಕೊಳ್ಳುತ್ತೇನೆ. ನಾನು ಇದ್ದ ಪಕ್ಷ ದಾರಿ ವಿಭಿನ್ನವಾದದ್ದು ಆರಂಭದಲ್ಲಿ ಮುಜುಗರ ಎದುರಿಸಿದೆ ಬೆಂಬಲಿಗರಿಗೆ ವಿಶ್ವಾಸ ಅವಕಾಶ ನೀಡಿ ಕಲ್ಪಿಸುವ ಅವರ ಬೇಡಿಕೆಗಳನ್ನು ಈಡೇರಿಸಿಲು, ರೈತರ ಕೂಲಿಕಾರ್ಮಿಕರ ಪರವಾದ ನೀತಿ ಎಂದಿಗೂ ಅನುಸರಿಸಲು ಅದು ಬಿಜೆಪಿಗೆ ಮಾತ್ರ ಸಾಧ್ಯ. ನಮ್ಮ ಕಾರ್ಯಕರ್ತರನ್ನು ಜೊತೆಗೆ ಕರೆದುಕೊಂಡು ಹೋಗಿರಿ ಎಂದ ಅವರು, ಬಿವೈವಿ ಗೆಲ್ಲಿಸಿ ವಿಧಾನಸಭೆಯಲಿ ಕೂರಿಸುವ ಕೆಲಸ ಆಗಬೇಕು ಅದಕ್ಕೆ ಎಲ್ಲರೂ ಕೈಜೋಡಿಸಿ ಎಂದು ಸಭೆಯಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಎಮ್.ಎ.ಡಿ.ಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ತಾಲ್ಲೂಕು ಬಿಜೆಪಿ ಅಧ್ಯಕ್ಷ ವೀರೇಂದ್ರ ಪಾಟೀಲ್ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೆ.ರೇವಣಪ್ಪ, ಮುಖಂಡರಾದ ಟಿ.ಎಸ್.ಮೋಹನ್, ರುದ್ರಪ್ಪಯ್ಯ, ವಸಂತ್ ಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು