ಇತ್ತೀಚಿನ ಸುದ್ದಿ
ಕೋವಿಡ್ ಕರ್ತವ್ಯದ ವೇಳೆ ಬಲಿ: ಕೆಎಎಸ್ ಅಧಿಕಾರಿ ಕುಟುಂಬಕ್ಕೆ ಸಿಎಂ ಪರಿಹಾರ
September 30, 2020, 1:55 PM

ಬೆಂಗಳೂರು(reporterkarnataka news): ಮಾರಕ ಕೊರೋನಾ ನಿಯಂತ್ರಣದಲ್ಲಿ ತೊಡಗಿದ್ದ ವೇಳೆ ಮೃತಪಟ್ಟ ಕೆ ಎ ಎಸ್ ಅಧಿಕಾರಿ ಗಂಗಾಧರಯ್ಯ ಕುಟಂಬಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಪರಿಹಾರ ಧನ ವಿತರಿಸಿದರು. ಅವರ ಪತ್ನಿ ಮಮತಾ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ 25 ಲಕ್ಷ ರೂಪಾಯಿಗಳ ಚೆಕ್ ವಿತರಿಸಿದರು.
ಸರಕಾರದ ವತಿಯಿಂದ ಎಲ್ಲ ನೆರವು ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ , ಗಂಗಾಧರಯ್ಯ ಅವರ ಕುಟುಂಬ ಸದಸ್ಯರಿಗೆ ಭರವಸೆ ನೀಡಿದರು.