11:07 AM Friday4 - December 2020
ಬ್ರೇಕಿಂಗ್ ನ್ಯೂಸ್
ಹಿಂಸಾಚಾರ: ಶಿವಮೊಗ್ಗದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿ, ಬಿಗಿ ಬಂದೋಬಸ್ತ್  ಮಾರಕ ಕೊರೊನಾಕ್ಕೆ ಒಂದೇ ದಿನ 540 ಮಂದಿ ಬಲಿ: 42, 916 ಮಂದಿ… ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: 30 ವಾರ್ಡ್ ಗಳಲ್ಲಿ ಬಿಜೆಪಿ ಮುನ್ನಡೆ ದುರ್ಬಲವಾಗುತ್ತಿರುವ ಬುರೆವಿ ಚಂಡಮಾರುತ: ನಿಟ್ಟುಸಿರು ಬಿಟ್ಟ ಕೇರಳದ ಜನತೆ ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣ: ಇಂದು ಪ್ರಧಾನಿ ಸರ್ವ ಪಕ್ಷ ಸಭೆ ಪ್ರತಿಷ್ಠಿತ ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಬಿಗಿ ಭದ್ರತೆಯಲ್ಲಿ ಇಂದು ಮತ ಎಣಿಕೆ ಸುಪ್ರೀಂ ಕೋರ್ಟ್ ನಲ್ಲಿ ಸ್ಯಾಂಡಲ್ ವುಡ್ ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ… ಗೋ ಹತ್ಯೆ ನಿಷೇಧ ಕಾನೂನು ಜಾರಿಗೆ ತರಲು ತಡವೇಕೆ?: ಮಾಜಿ ಸಚಿವ ಖಾದರ್… ದೋಣಿ ದುರಂತದಲ್ಲಿ ಮೃತಪಟ್ಟ ಮೀನುಗಾರರ ಕುಟುಂಬಕ್ಕೆ ತಲಾ 6 ಲಕ್ಷ ರೂ. ಪರಿಹಾರ… ರೈತರ ಬೆಂಬಲಕ್ಕೆ ನಿಂತ ಅಕಾಲಿ ನಾಯಕ  ಬಾದಲ್ :  ಪದ್ಮವಿಭೂಷಣ ಪ್ರಶಸ್ತಿ ವಾಪಸ್

ಇತ್ತೀಚಿನ ಸುದ್ದಿ

ಸಿವಿಲ್ ಎಂಜಿನಿಯರ್ ವಸಂತ ಗೋಲ್ತಮಜಲ್ ಇನ್ನಿಲ್ಲ

October 29, 2020, 10:00 AM

ಬಂಟ್ವಾಳ(reporterkarnataka news): ಕಲ್ಲಡ್ಕದಲ್ಲಿ ಬುಧವಾರ ನಡೆದ ರಸ್ತೆ ಅಪಘಾತದಲ್ಲಿ ಸಿವಿಲ್ ಎಂಜಿನಿಯರ್ ವಸಂತ (53) ಮೃತಪಟ್ಟಿದ್ದಾರೆ.

ಬಿ.ಸಿ. ರೋಡ್ ನಲ್ಲಿ ಕಚೇರಿ ಹೊಂದಿದ್ದ ವಸಂತ ಅವರು ತನ್ನ ದ್ವಿಚಕ್ರ ವಾಹನದಲ್ಲಿ ಗೋಲ್ತಮಜಲಿನ ತನ್ನ ಮನೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಕಲ್ಲಡ್ಕ ಬಳಿಯ ವಿಟ್ಲ-  ಪುತ್ತೂರು ರಸ್ತೆ ಕವಲೊಡೆಯುವ ಜಂಕ್ಷನ್ ನಲ್ಲಿ ದುರಂತ ನಡೆದಿದೆ. ಬುಧವಾರ ಸಂಜೆ ಸುಮಾರು 6.30ರ ವೇಳೆಗೆ ವಸಂತ ಅವರು ತನ್ನ ಬಿ.ಸಿ.ರೋಡ್ ನ ಕಚೇರಿಯಿಂದ ಮನೆಗೆ ತೆರಳುತ್ತಿದ್ದಾಗ ಕಲ್ಲಡ್ಕ ಜಂಕ್ಷನ್ ಬಳಿ  ಗೂಡ್ಸ್ ಟೆಂಪೊ ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರನ್ನು ತುಂಬೆ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿ ಮಧ್ಯೆ ಅವರು ಕೊನೆಯುಸಿರೆಳೆದರು.

ಮೃತ ವಸಂತ ಅವರು ಕಳೆದ 25 ವರ್ಷಗಳಿಂದ ಸಿವಿಲ್ ಎಂಜಿನಿಯರಿಂಗ್ ವೃತ್ತಿ ಮಾಡುತ್ತಿದ್ದರು. ಬಿ.ಸಿ. ರೋಡ್ ನಲ್ಲಿ ಸ್ವಂತ ಆಫೀಸ್ ಹೊಂದಿದ್ದರು. ಯುವವಾಹಿನಿ ಸೇರಿದಂತೆ ಹಲವು ಸಂಘಟನೆಗಳಲ್ಲಿ ಅವರು ಸಕ್ರಿಯವಾಗಿದ್ದರು. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು