ಇತ್ತೀಚಿನ ಸುದ್ದಿ
ಸಿಸಿಬಿ ದಾಳಿ: ಭಾರಿ ವೇಶ್ಯಾವಟಿಕೆ ಜಾಲ ಬಯಲು, 6 ಮಂದಿ ಯುವತಿಯರ ರಕ್ಷಣೆ
November 6, 2020, 9:03 AM

ಬೆಂಗಳೂರು(reporterkarnataka news): ರಾಜಧಾನಿ ಬೆಂಗಳೂರಿನಲ್ಲಿ ಬೃಹತ್ ವೇಶ್ಯಾವಟಿಕೆ ಜಾಲವನ್ನು ಸಿಸಿಬಿ ಪೊಲೀಸರು ಭೇದಿಸಿದ್ದಾರೆ. ಕಾಟನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಧಿಕಾರಿಗಳು ಈ ಸಂಬಂಧ ದಾಳಿ ನಡೆಸಿದ್ದಾರೆ. ಆರು ಯುವತಿಯರನ್ನು ರಕ್ಷಿಸಲಾಗಿದೆ. ವೇಶ್ಯಾವಟಿಕೆ ಜಾಲದಲ್ಲಿ ನಿರತರಾಗಿದ್ದ ಆರು ಆರೋಪಿಗಳನ್ನು ಬಂಧಿಸಲಾಗಿದೆ.
ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸಾಮಾಜಿಕ ಜಾಲ ತಾಣದ ಮೂಲಕ ಈ ಮಾಹಿತಿ ನೀಡಿದ್ದಾರೆ.