ಇತ್ತೀಚಿನ ಸುದ್ದಿ
ಸಿಸಿಬಿ ಕಾರ್ಯಾಚರಣೆ: ಮೀಟರ್ ಬ಼ಡ್ಡಿ ದಂಧೆ ಆರೋಪಿ ಬಂಧನ, 164 ಚೆಕ್, ದಾಖಲೆ ವಶ
December 6, 2020, 12:15 PM

ಬೆಂಗಳೂರು(reporterkarnataka news): ನಗರದಲ್ಲಿ ಮೀಟರ್ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಸಿಸಿಬಿ ತೀವ್ರ ಕಾರ್ಯಾಚರಣೆ ಆರಂಭಿಸಿದೆ. ವೈಯಾಲಿಕಾವಲ್ ನಲ್ಲಿ ದಾಳಿ ನಡೆಸಿದ ಸಿಸಿಬಿ ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿದೆ.
ಸಾಲ ಪಡೆದವರಿಂದ ವಶಪಡಿಸಿಕೊಳ್ಳಲಾದ 164 ಚೆಕ್ ಗಳು, ಅಡವಿಟ್ಟ ಜಮೀನು ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೇವಲ ಬೆಂಗಳೂರು ಮಾತ್ರವಲ್ಲ ಮಂಗಳೂರಿನಲ್ಲಿ ಕೂಡ ಮೀಟರ್ ಬಡ್ಡಿದಂಧೆ ವ್ಯಾಪಕವಾಗಿದೆ. ಪೊಲೀಸರು ಮಾತ್ರ ಇದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ..
ಆರೋಪಿಯಿಂದ 22 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದೆ