1:40 AM Saturday18 - October 2025
ಬ್ರೇಕಿಂಗ್ ನ್ಯೂಸ್
ಕಾರ್ಮಿಕ ಅಧಿಕಾರಿ ಸೋಗಿನಲ್ಲಿ ವಸೂಲಿಗೆ ಯತ್ನ: ಸಾರ್ವಜನಿಕರು ಎಚ್ಚರದಿಂದಿರಲು ಇಲಾಖಾ ಅಧಿಕಾರಿಗಳ ಮನವಿ Mysore | ಎಚ್. ಡಿ. ಕೋಟೆಯಲ್ಲಿ ಹುಲಿ ದಾಳಿ: ಎರಡೂ ಕಣ್ಣು ಕಳೆದುಕೊಂಡ… ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಪೋಸ್ಟ್: ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಹಿತ 5… Kodagu | ಪವಿತ್ರ ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ: ಸಾಕ್ಷಿಯಾಗಲಿರುವ ಡಿಸಿಎಂ, ಸಚಿವರು, ಶಾಸಕರು ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್ ಹಾಡು ನಿಲ್ಲಿಸಿದ ಯಕ್ಷ ಕೋಗಿಲೆ: ತೆಂಕುತಿಟ್ಟಿನ ಖ್ಯಾತ ಭಾಗವತ ದಿನೇಶ್ ಅಮ್ಮಣ್ಣಾಯ ಇನ್ನಿಲ್ಲ ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ Kodagu | ತುಲಾ ಸಂಕ್ರಮಣ: ತಲಕಾವೇರಿಗೆ ಭಾಗಮಂಡಲದ ಭಗಂಡೇಶ್ವರ ದೇವಾಲಯದಿಂದ ಆಭರಣ ಕಾವೇರಿಮನೆ ಚಂದನ್ ಗೆ ಯುಎನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪ್ರಶಸ್ತಿ ಪ್ರದಾನ ಇಡೀ ರಾಜ್ಯಕ್ಕೆ ಸುಭಿಕ್ಷೆ, ಶಾಂತಿ, ನೆಮ್ಮದಿ, ಮಳೆ- ಬೆಳೆ-ರೈತರ ಸಮೃದ್ಧಿಗಾಗಿ ಹಾಸನಾಂಬೆಗೆ ಪ್ರಾರ್ಥನೆ…

ಇತ್ತೀಚಿನ ಸುದ್ದಿ

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಪಕ್ಷದ ಪ್ರಮುಖರಿಂದ ಮತ ಚಲಾವಣೆ

10/05/2023, 12:56

ಮಂಗಳೂರು(reporterkarnataka.com): ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹಿತ ಪಕ್ಷದ ಪ್ರಮುಖರು ಹಾಗೂ ಅಭ್ಯರ್ಥಿ ಗಳು ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಇಂದು ತಮ್ಮ ಹಕ್ಕು ಚಲಾಯಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಬೂತ್ ಸಂಖ್ಯೆ 90- ಸೈಂಟ್ ಅಲೋಶಿಯಸ್ ಇಂಗ್ಲಿಷ್ ಮೀಡಿಯಂ ಹೈಯರ್ ಪ್ರೈಮರಿ ಸ್ಕೂಲ್ ಉರ್ವದಲ್ಲಿ ಬೆಳಗ್ಗೆ 8:30ಕ್ಕೆ ಮತದಾನ ಮಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದ್ರೆ ಅವರು ಬೂತ್ ಸಂಖ್ಯೆ 63- ದ.ಕ. ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ಮಾರ್ಪಾಡಿಯಲ್ಲಿ ಬೆಳಗ್ಗೆ 7:15, ಮಂಗಳೂರು ದಕ್ಷಿಣ ಅಭ್ಯರ್ಥಿ ಡಿ. ವೇದವ್ಯಾಸ ಕಾಮತ್- ಬೂತ್ ಸಂಖ್ಯೆ 82- ದ.ಕ ಜಿ.ಪಂ. ಹಿ.ಪ್ರಾ ಶಾಲೆ, ಗಾಂಧಿನಗರ- ಬೆಳಗ್ಗೆ 8:00ಕ್ಕೆ, ಮಂಗಳೂರು ಉತ್ತರ ಅಭ್ಯರ್ಥಿ ಡಾ. ವೈ. ಭರತ್ ಶೆಟ್ಟಿ- ಬೂತ್ ಸಂಖ್ಯೆ 132- ಕೆಪಿಟಿ ಕದ್ರಿ, ಸುಳ್ಯ ಅಭ್ಯರ್ಥಿಭಾಗೀರಥಿ ಮುರುಳ್ಯ- ಬೂತ್ ಸಂಖ್ಯೆ 84- ದ.ಕ ಜಿಪಂ ಹಿ.ಪ್ರಾ ಶಾಲೆ, ಶಾಂತಿನಗರ, ಮುರುಳ್ಯ- ಬೆಳಗ್ಗೆ 7:00 ಗಂಟೆಗೆ, ಪುತ್ತೂರು ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ- ಬೂತ್ ಸಂಖ್ಯೆ 128- ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಂತೂರುಪದವು- ಬೆಳಗ್ಗೆ 7:00ಕ್ಕೆ, ಮಂಗಳೂರು ಅಭ್ಯರ್ಥಿ ಸತೀಶ್ ಕುಂಪಲ- ಬೂತ್‌ ಸಂಂಖ್ಯೆ 128- ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕುಂಪಲದಲ್ಲಿ ಬೆಳಗ್ಗೆ 7:30, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್- ಬೂತ್ ಸಂಖ್ಯೆ 95- ರತ್ನವರ್ಮ ಹೆಗ್ಗಡೆ ಸ್ಟೇಡಿಯಂ ಉಜಿರೆಯಲ್ಲಿ ಬೆಳಗ್ಗೆ 7:00 ಗಂಟೆಗೆ ಮತದಾನ ಮಾಡಿದರು.

ಇತ್ತೀಚಿನ ಸುದ್ದಿ

ಜಾಹೀರಾತು