ಇತ್ತೀಚಿನ ಸುದ್ದಿ
ಬಿಹಾರ ಚುನಾವಣೆ: ಬಿಜೆಪಿ ಪ್ರಣಾಳಿಕೆ ಬಿಡುಗಡೆ; ಭರಪೂರ ಭರವಸೆ
October 22, 2020, 11:27 AM

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆ ಸಂಬಂಧ ಬಿಜೆಪಿ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಭರಪೂರ ಭರವಸೆ ನೀಡಲಾಗಿದೆ. ಸ್ವಾವಲಂಬಿ ಬಿಹಾರದ ನಿರ್ಮಾಣ ಪಕ್ಷದ ಗುರಿ ಎಂದು ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿದೆ.
ರಾಜ್ಯವನ್ನು ಅಭಿವೃದ್ದಿಪಥದತ್ತ ಮುನ್ನೆಡೆಸುವುದು ಮತ್ತು ಉದ್ಯೊಗ ಸೃಷ್ಟಿಗೆ ಆದ್ಯತೆ ಎಂದು ಬಿಜೆಪಿ ಹೇಳಿದೆ.
ಇದೇ ವೇಳೆ ಲೋಕ ಜನ ಶಕ್ತಿ ಅಧಿಕಾರಕ್ಕೆ ಬಂದರೆ ಭವ್ಯ ಸೀತಾಮಂದಿರ ನಿರ್ಮಿಸುವುದಾಗಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ ಹೇಳಿದ್ದಾರೆ.