ಇತ್ತೀಚಿನ ಸುದ್ದಿ
ಭಾರತ ಯಾರ ಮುಂದೆಯೂ ತಲೆತಗ್ಗಿಸಲ್ಲ, ಪ್ರಸಕ್ತ ಬಿಕ್ಕಟ್ಟಿಗೆ ಚೀನಾವೇ ಹೊಣೆ: ರಾಜನಾಥ್ ಸಿಂಗ್
September 17, 2020, 1:56 PM

ನವದೆಹಲಿ(reporterkarnataka news): ಭಾರತ- ಚೀನಾ ಗಡಿಯಲ್ಲಿನ ವಾಸ್ತವ ನಿಯಂತ್ರಣ ರೇಖೆಯಲ್ಲಿ ನ ಪರಿಸ್ಥಿತಿ ಕುರಿತು ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಇಂದು ರಾಜ್ಯಸಭೆಗೆ ಮಾಹಿತಿ ನೀಡಿದರು. ಪ್ರಸಕ್ತ ಬಿಕ್ಕಟ್ಟಿಗೆ ಚೀನಾವೇ ಹೊಣೆ ಎಂದು ಅವರು ಟೀಕಿಸಿದರು.
1993 ಮತ್ತು 1996ರಲ್ಲಿ ಮಾಡಿಕೊಳ್ಳಲಾದ ದ್ವಿಪಕ್ಷೀಯ ಒಪ್ಪಂದವನ್ನು ಚೀನಾ ಉಲ್ಲಂಘಿಸಿದೆ ಎಂದು ರಾಜನಾಥ್ ಸಿಂಗ್ ಗಂಭೀರ ಆರೋಪ ಮಾಡಿದರು..
ದೇಶದ ಸಾರ್ವಭೌಮತ್ವ ವಿಷಯದಲ್ಲಿ ಯಾವುದೇ ರಾಜಿ ಇಲ್ಲ. ಭಾರತ ಎಂದಿಗೂ ಯಾರ ಮುಂದೆಯೂ ತಲೆಬಾಗುವುದಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.
ಶಾಂತಿಯುತವಾಗಿ ಎಲ್ಲವನ್ನೂ ಬಗೆಹರಿಸಲು ಭಾರತ ಇಚ್ಚಿಸುತ್ತಿದೆ. ಆದರೆ ಇದು ದೇಶದ ದೌರ್ಬಲ್ಯವಲ್ಲ. ಎಂದು ರಾಜನಾಥ್ ಸಿಂಗ್ ಘೋಷಿಸಿದರು.