12:06 AM Tuesday24 - November 2020
ಬ್ರೇಕಿಂಗ್ ನ್ಯೂಸ್
ನಿವಾರ್ ಚಂಡಮಾರುತ: ರಾಜ್ಯದ ಹಲವೆಡೆ ಇನ್ನೆರಡು ದಿನ ಭಾರೀ ಮಳೆ ನಿರೀಕ್ಷೆ, ಯಲ್ಲೋ… ಅಂತಾರಾಷ್ಟ್ರೀಯ ಡ್ರಗ್ಸ್ ಜಾಲ ಬಯಲು: ಬೆಂಗಳೂರಿನಲ್ಲಿ ಬೃಹತ್  ಪ್ರಮಾಣದ ಮಾದಕ ದ್ರವ್ಯ ವಶ ಒಂದೇ ದಿನ ಮಾರಕ ಕೊರೊನಾಕ್ಕೆ 480 ಬಲಿ: 86,04,955 ಮಂದಿ ಗುಣಮುಖ ರೆಬೆಲ್ ಸ್ಟಾರ್  ಅಂಬರೀಷ್ ಎರಡನೆ ಪುಣ್ಯತಿಥಿ ಇಂದು ವಾರಣಾಸಿ ಕ್ಷೇತ್ರದಿಂದ ಪ್ರಧಾನಿ ಮೋದಿ ಆಯ್ಕೆ ಪ್ರಶ್ನಿಸಿ ಅರ್ಜಿ: ಇಂದು ಸುಪ್ರೀಂ ಕೋರ್ಟ್… ಸಹಕಾರ ಹಾಲು ಡೈರಿಗೆ ಕ್ಷೀರ ನೀಡುವ ಮೂಲಕ ವಿವಿಧ ಸೌಲಭ್ಯ ಪಡೆಯಲು ಸಲಹೆ ಮಾಜಿ ಸಭಾಪತಿ ರಮೇಶ್ ಕುಮಾರ್ ಹುಟ್ಟುಹಬ್ಬ ಪ್ರಯುಕ್ತ ಕಾಂಗ್ರೆಸ್ ನಿಂದ ಅನ್ನಸಂತರ್ಪಣೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ತರುಣ್ ಗೊಗಯ್ ನಿಧನ ಶಾಲೆ ಆರಂಭ ಪ್ರಸ್ತಾಪ: ಸಿಎಂ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ  ಉದಯೋನ್ಮುಖ ಕ್ರಿಕೆಟಿಗ ನವದೀಪ್ ಸೈನಿಗೆ ಹುಟ್ಟುಹಬ್ಬದ ಶುಭ ಕೋರಿದ ಕೊಹ್ಲಿ

ಇತ್ತೀಚಿನ ಸುದ್ದಿ

ಬೆಳ್ತಂಗಡಿ ವೀರಾಂಜನೇಯ ಸೇವಾ ಸಮಿತಿಯಿಂದ ಬಡ ಕುಟುಂಬಕ್ಕೆ 38ನೇ ಸೇವಾ ಯೋಜನೆ ಹಸ್ತಾಂತರ

November 5, 2020, 9:11 AM

ಬೆಳ್ತಂಗಡಿ(reporterkarnatakanews): ವಿದ್ಯದಾನ ಹಾಗೂ ಬಡವರ  ಸೇವೆಯೇ ನಮ್ಮ ಧ್ಯೇಯ ಎಂಬ ಪರಿಕಲ್ಪನೆಯೊಂದಿಗೆ 3 ವರ್ಷ 9 ತಿಂಗಳ ಪಯಣದ ಸಾರ್ಥಕತೆಯೊಂದಿಗೆ ಸುಮಾರು 42 ಸೇವಾರ್ಶಿತರಿಗೆ ಸಹಾಯಹಸ್ತವ ನೀಡಿ ಯುವಕರ ಸ್ಪೂರ್ತಿಯ ಚಿಲುಮೆಯಾದ ಬೆಳ್ತಂಗಡಿಯ ವೀರಾಂಜನೇಯ ಸೇವಾ ಸಮಿತಿ ಮತ್ತೆ ಒಂದು ಬಡ ಕುಟುಂಬಕ್ಕೆ ಸಹಾಯಹಸ್ತ ನೀಡಿದೆ.

ಹಸ್ತಾಂತರ: ಬಂಟ್ವಾಳ ತಾಲೂಕಿನ ವಿಟ್ಲದ ಶೋಭಾ ಅವರು ಜಾರಿ ಬಿದ್ದು ಕಾಲು ಮುರಿತಕ್ಕೊಳಗಾಗಿದ್ದರು. ಇವರ ಗಂಡ ಕೂಡ ಒಂದು ತಿಂಗಳ ಹಿಂದೆ ಕಿಡ್ನಿ ವೈಫಲ್ಯದಿಂದ ಧೈವಧೀನರಾಗಿದ್ದಾರೆ. ಇವರು ತೀರಾ ಬಡತನದಿಂದ ಎರಡು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿದ್ದಾರೆ.ಈ ಬಡಕುಟುಂಬದ ಕಷ್ಟಗಳನ್ನು ಗುರುತಿಸಿದ ಶ್ರೀ ವೀರಾಂಜನೇಯ ಸೇವಾ ಸಮಿತಿಯು ತಮ್ಮ ತಂಡದಿಂದ ಸಂಗ್ರಹಿಸಿದ 15,000 ರೂ. ಸಹಾಯಧನದ ಚೆಕ್ಕನ್ನು ತಂಡದ ಸದಸ್ಯರ ಸಮ್ಮುಖದಲ್ಲಿ ಶೋಭಾ ಅವರ ಬಡಕುಟುಂಬಕ್ಕೆ ಹಸ್ತಾಂತರಿಸಲಾಗಿದೆ.

ಈ ಯೋಜನೆಯ ಯಶಸ್ಸಿನೊಂದಿಗೆ 38ನೇ ಮಾಸಿಕ ಸಹಾಯ ಯೋಜನೆ ಹಾಗೂ 5 ತುರ್ತು ಯೋಜನೆ ಯಶಸ್ವಿಯಾಗಿ ತಲುಪಿದ್ದು, ಈ ಯಶಸ್ಸಿನ ಸರ್ವಪಾಲನ್ನೂ ಯೋಜನೆಯ ಯಶಸ್ಸಿಗೆ ಕಾರಣಕರ್ತರಾದ ಸೇವಾ ಸಮಿತಿ

ಸರ್ವಸದಸ್ಯರಿಗೂ ಸಲ್ಲುತ್ತದೆ.

ಇತ್ತೀಚಿನ ಸುದ್ದಿ

ಜಾಹೀರಾತು