ಇತ್ತೀಚಿನ ಸುದ್ದಿ
ಅಮೆರಿಕ ಉಪಾಧ್ಯಕ್ಷರ ಚುನಾವಣೆ: ಟ್ರಂಪ್ ವಿರುದ್ದ ಕಮಲಾ ಹ್ಯಾರಿಸ್ ಟೀಕಾ ಪ್ರಹಾರ
October 8, 2020, 9:04 AM

ವಾಷಿಂಗ್ಟನ್: ಅಮೆರಿಕ ಉಪಾಧ್ಯಕ್ಷರ ಹುದ್ದೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ನಡುವೆ ಸಾರ್ವಜನಿಕ ಸಂವಾದ ಇಂದು ನಡೆಯಿತು. ಡೆಮಾಕ್ರಟ್ ಅಭ್ಯರ್ಥಿ ಮೈಕ್ ಪೆನ್ಸ್ ಮತ್ತು ರಿಪಬ್ಲಿಕನ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಇದರಲ್ಲಿ ಭಾಗವಹಿಸಿದರು.. ಈ ಸಂದರ್ಭದಲ್ಲಿ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೊರೋನಾ ನಿಯಂತ್ರಿಸುವಲ್ಲಿ ಅಧ್ಯಕ್ಷ ಟ್ರಂಪ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಕಮಲಾ ಹ್ಯಾರಿಸ್ ಟೀಕೆಗಳ ಸುರಿ ಮಳೆ ಗೈದರು.. ಇದಕ್ಕೆ ಮೈಕ್ ಪೆನ್ಸ್ ತೀವ್ರ ವಿರೋಧ ವ್ಯಕ್ತಪಡಿಸಿದರು