ಇತ್ತೀಚಿನ ಸುದ್ದಿ
ಸಜೀಪನಡು ಶಣ್ಮುಖ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಶಿಲಾನ್ಯಾಸ
October 22, 2020, 8:11 AM

ಬಂಟ್ವಾಳ(reporterkarnataka news):
ಸಜಿಪನಡು ಗ್ರಾಮದ ಶ್ರೀ ಶಣ್ಮುಖ ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಶ್ರೀ ಗಣಪತಿ ದೇವರ ಗರ್ಭಗುಡಿ ಹಾಗೂ ನೂತನವಾಗಿ ನಿರ್ಮಾಣಗೊಳ್ಳಲಿರುವ ಸುತ್ತು ಗೋಪುರಕ್ಕೆ ಶಿಲಾನ್ಯಾಸವನ್ನು ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕೆ. ಪ್ರಭಾಕರ್ ಭಟ್ ನೆರವೇರಿಸಿದರು.
ಧಾರ್ಮಿಕ ವಿಧಿ-ವಿಧಾನಗಳನ್ನು ಸಜಿಪ ಮಗಣೆತಂತ್ರಿ ಸುಬ್ರಹ್ಮಣ್ಯ ಭಟ್ ನೆರವೇರಿಸಿದರು ವೆಂಕಟೇಶ್ವರ ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರಸಾದ್ ಮುನಿಯಂಗಳ ವಾಸ್ತು ಶಾಸ್ತ್ರಜ್ಞ, ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಜಯಶಂಕರ ಬಾಶ್ರೀತಾಯ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಸಜೀಪಗುತ್ತು ಗಡಿ ಪ್ರಧಾನರಾದ ಮುಂಡಪ್ಪ ಶೆಟ್ಟಿ, ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ, ಮಾಜಿ ಮುಕ್ತೇಶ್ವರ ಶಿವರಾಮ ಭಂಡಾರಿ ದಿಶಾ ಎಲೆಕ್ಟ್ರಿಕಲ್ಸ್ ಗಣೇಶ್. ಯಶವಂತ ದೇರಾಜೆ ಕೆಟಿ ಸುಧಾಕರ್ ತಾಲೂಕು ಪಂಚಾಯತ್ ಸದಸ್ಯ ನಮಿತಾ ಕರ್ಕೇರ. ಪ್ರವೀಣ್ ಆಳ್ವ, ರಾಮಕೃಷ್ಣ ಭಟ್, ವಸಂತ್ ಪೆರಾಜೆ ಮೊದಲಾದವರು ಉಪಸ್ಥಿತರಿದ್ದರು.