ಇತ್ತೀಚಿನ ಸುದ್ದಿ
ಡಿವೈಎಫ್ ಐ ಕಾರ್ಯಕರ್ತರ ಹತ್ಯೆ: ಆರು ಮಂದಿ ವಶಕ್ಕೆ , ಹಲವೆಡೆ ಹಿಂಸಾಚಾರ
September 1, 2020, 5:20 AM

ತಿರುವನಂತಪುರಂ(reporterkarnataka news): ಕೇರಳದ ತಿರುವನಂತಪುರಂನಲ್ಲಿ ಇಬ್ಬರು ಡಿವೈಎಫ್ ಐ ಕಾರ್ಯಕರ್ತರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆರೋಪಿಗಳನ್ನು ಇಂದು ಅಧಿಕೃತವಾಗಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.
ಈ ಮಧ್ಯೆ ಹತ್ಯೆ ಖಂಡಿಸಿ ಕೇರಳದಲ್ಲಿ ಹಿಂಸಾಚಾರ ಕೂಡ ಸಂಭವಿಸಿದೆ. ಹಲವೆಡೆ ಕಾಂಗ್ರೆಸ್ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ. ಹತ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಪಾತ್ರವನ್ನು ಕೈ ಮುಖಂಡರು ತಳ್ಳಿಹಾಕಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.