ಇತ್ತೀಚಿನ ಸುದ್ದಿ
Mangaluru | ಪಾದುವಾ ಶಿಕ್ಷಣ ಸಂಸ್ಥೆಗಳಲ್ಲಿ ನ. 14 ಮತ್ತು 15ರಂದು ‘ಪಾದುವಾ ಸಂಭ್ರಮ – 2025’
12/11/2025, 13:04
Mangaluru | ಪಾದುವಾ ಶಿಕ್ಷಣ ಸಂಸ್ಥೆಗಳಲ್ಲಿ ನ. 14 ಮತ್ತು 15ರಂದು ‘ಪಾದುವಾ ಸಂಭ್ರಮ – 2025’
ಮಂಗಳೂರು(reporterkarnataka.com):
ಪಾದುವಾ ಶಿಕ್ಷಣ ಸಂಸ್ಥೆಗಳಲ್ಲಿ ‘ಪಾದುವಾ ಸಂಭ್ರಮ -2025’
ನವೆಂಬರ್ 14 ಮತ್ತು 15ರಂದು ಆಯೋಜಿಸಲಾಗಿದೆ.
ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಪಾದುವಾ ಸಂಭ್ರಮ ಪಾದುವಾ ಶಿಕ್ಷಣ ಸಂಸ್ಥೆಯಲ್ಲಿ ಪರಂಪರೆಯಂತೆ ವರ್ಷಾವರ್ತಿ ಆಯೋಜಿಸುತ್ತಿದ್ದು, ಮುಖ್ಯವಾಗಿ ವಿದ್ಯಾರ್ಥಿಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ, ವೇದಿಕೆ ನಿರ್ಮಿಸುವ ಉದ್ದೇಶವನ್ನು ಹೊಂದಿದೆ.
ಪಾದುವಾ ಸಂಭ್ರಮ – 2025ರಲ್ಲಿ, ಪುಟಾಣಿಗಳ ರ್ಯಾಂಪ್ ವಾಕ್, ಪ್ರಾಥಮಿಕ ವಿದ್ಯಾರ್ಥಿಗಳ ನೃತ್ಯ ಸ್ಪರ್ಧೆ, ಪ್ರೌಢ ಶಾಲಾ ವಿದ್ಯಾರ್ಥಿಗಳ ಛದ್ಮವೇಷ ಸ್ಪರ್ಧೆ; ಪದವಿ ಪೂರ್ವ ಮತ್ತು ಕಾಲೇಜು ವಿದ್ಯಾರ್ಥಿಗಳಿಗಾಗಿ ಟ್ರೆಡೀಶನಲ್ ಕಿಂಗ್ ಆ್ಯಂಡ್ ಕ್ಲೀನ್ ಹಾಗೂ ಪಾದುವಾ ಡಾನ್ಸ್ ಲೀಗ್ ಅನ್ನುವ ನೃತ್ಯ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಶಾಲಾ ವಿದ್ಯಾರ್ಥಿಗಳ ಹಾಗೂ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ವಾರ್ಷಿಕ ದಿನವನ್ನು ಆಚರಿಸಲಾಗುತ್ತದೆ. ಈ ಎಲ್ಲವುಗಳ ಜೊತೆಗೆ, ಆಸಕ್ತಿ ಹೆಚ್ಚಿಸುವ ಆಟಗಳು, ಫುಡ್ ಸ್ಟಾಲ್ಗಳು ಮುಖ್ಯ ಆಕರ್ಷಣೆಯಾಗಿರುತ್ತವೆ.
ನವೆಂಬರ್ 14ರಂದು, ಬೆಳಗ್ಗೆ ಉದ್ಘಾಟನೆಗೊಳ್ಳಲಿರುವ ಪಾದುವಾ ಸಂಭ್ರಮ 20280 ಅಧ್ಯಕ್ಷತೆಯನ್ನು ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ವಂದನೀಯ ಸ್ವಾಮಿ ಡಾ. ಅಲೋಶಿಯಸ್ ಪೌಲ್ ಡಿಸೋಜ ವಹಿಸಲಿದ್ದಾರೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಮಾಜಸೇವಾ ಧುರೀಣ ಹಾಗೂ ಉದ್ಯಮಿ ಮೈಕಲ್ ಡಿಸೋಜ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಾಟಕ ನಿರ್ದೆಶಕ ದೇವದಾಸ್ ಕಾಪಿಕಾಡ್, ಕ್ಯಾಥೋಲಿಕ್ ಎಜ್ಯುಕೇಶನ್ ಬೋರ್ಡ್ನ ಕಾರ್ಯದರ್ಶಿ ವಂದನೀಯ ಸ್ವಾಮಿ ಪ್ರವೀಣ್ ಲಿಯೋ ಲಸ್ರಾದೊ, ಕದ್ರಿ ಪೊಲಿಸ್ ಸ್ಟೇಶನ್ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಬೆಂದೂರ್ ಪೇರಿಶ್ನ ಉಪಾಧ್ಯಕ್ಷರಾದ ವಿನೋದ್ ಡಿಸೋಜ, ಬೆಂದೂರ್ ಪೇರಿಶ್ನ ಕಾರ್ಯದರ್ಶಿಯಾದ ಪಾಟ್ಟಿ ಬ್ರಿಡ್ಜ್ ಮೊದಲಾದವರು ಭಾಗವಹಿಸಲಿದ್ದಾರೆ. ಪಾದುವಾ ಸಮೂಹ ಶಿಕ್ಷಣ ಸಂಸ್ಥೆಗಳ ಕರೆಸ್ಪಾಂಡೆಂಟ್ ವಂದನೀಯ ಸ್ವಾಮಿ ವಾಲ್ಟರ್ ಡಿಸೋಜ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಗುರು ಅರುಣ್ ವಿಲ್ಸನ್ ಲೋಬೊ ಉಪಸ್ಥಿತರಿರುವರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಹೆಸರು ದಾಖಲಿಸಿರುವ ಪಾಡುವಾ ಕಾಲೇಜಿನ ಹಳೆ ವಿದ್ಯಾರ್ಥಿಗಳಾದ ರೂಬೆನ್ ಜಾಸನ್ ಮಜಾದೊ ಹಾಗೂ ರೆಮೊನ ಪಿರೆರಾ ಇವರು ಸನ್ಮಾನ ಸ್ವೀಕರಿಸಲಿದ್ದಾರೆ. ಅಂತೆಯೇ ಪಾದುವಾ ಸಂಭ್ರಮದಲ್ಲಿ ಸನ್ಮಾನ ಸ್ವೀಕರಿಸಲಿದ್ದಾರೆ.












