7:12 AM Sunday3 - March 2024
ಬ್ರೇಕಿಂಗ್ ನ್ಯೂಸ್
ದ. ಕ. ಮತ್ತು ಉಡುಪಿ ಪಂಚಾಯತ್‌ರಾಜ್ ಹಾಗೂ ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡೋತ್ಸವ… ನವ ಮಂಗಳೂರು ಬಂದರು: 270 ಪ್ರಯಾಣಿಕರ ಹೊತ್ತ 5ನೇ ಕ್ರೂಸ್ ಹಡಗು ಆಗಮನ ಪಾಲಿಕೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ ಅಂಗಳಕ್ಕೂ ತೆರಿಗೆ: ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ… ಅಗಲಿದ ಹಿರಿಯ ಪತ್ರಕರ್ತ, ಸುದ್ದಿಲೋಕದ ಮೇರು ಪರ್ವತ ಮನೋಹರ್ ಪ್ರಸಾದ್ ಗೆ ಮಾಜಿ… ಹುಳಗಳಿದ್ದ ಅಕ್ಕಿಯಿಂದಲೇ ಬಿಸಿಯೂಟ ತಯಾರಿ: ವಡೇರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆ ವಿರುದ್ಧ ಗ್ರಾಮಸ್ಥರ… ಕ್ಯಾರಟ್‌ಲೇನ್: ತನಿಷ್ಕ್ ಪಾಲುದಾರಿಕೆಯಲ್ಲಿ ಮಂಗಳೂರಿನಲ್ಲಿ 2ನೇ ಮಳಿಗೆ ಆರಂಭ ಸುದ್ದಿಲೋಕದ ಮೇರು ಪರ್ವತ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇನ್ನಿಲ್ಲ 44 ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಮಮತಾ ಗಟ್ಟಿಗೆ ಗೇರು, ಸದಾಶಿವ ಉಳ್ಳಾಲ್… ಬಲ್ಲಾಳರಾಯ ದುರ್ಗ: ಚಾರಣಕ್ಕೆ ಬಂದು ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ: 3 ತಾಸಿಗೂ… ಶಕ್ತಿನಗರ: ಪೈಟಿಂಗ್ ಮಾಡುತ್ತಿದ್ದಾಗ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ದಾರುಣ ಮೃತ್ಯು

ಇತ್ತೀಚಿನ ಸುದ್ದಿ

ನಂಜನಗೂಡು: ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿನಿಬ್ಬಣ ಕಾರ್ಯಕ್ರಮ; ಪ್ರತಿಮೆಗೆ ಮಾಲಾರ್ಪಣೆ

06/12/2023, 23:43

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ನಂಜನಗೂಡಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ 67ನೇ ಪರಿನಿಬ್ಬಣ ಕಾರ್ಯಕ್ರಮ ನಡೆಯಿತು.
ನಂಜನಗೂಡು ಪಟ್ಟಣದ ಬೈಪಾಸ್ ರಸ್ತೆಯಲ್ಲಿರುವ ಅಂಬೇಡ್ಕರ್ ಪ್ರತಿಮೆ ಬಳಿ ಕಾರ್ಯಕ್ರಮ ಆಯೋಜನೆ ಮಾಡಲಾಯಿತು.
ತಾಲೂಕು ಆಡಳಿತದ ವತಿಯಿಂದ ನಡೆದ 67ನೆಯ ಪರಿನಿಬ್ಬಣ ಕಾರ್ಯಕ್ರಮದಲ್ಲಿ
ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರ್ ಅಧ್ಯಕ್ಷತೆ ವಹಿಸಿದ್ದರು. ವರುಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಆಶ್ರಯ ಸಮಿತಿಯ ಅಧ್ಯಕ್ಷ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ದಸಂಸ ಸಂಘಟನೆಯ ಹಲವಾರು ಮುಖಂಡರು ಸೇರಿದಂತೆ ಪುರಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಡಾ.ಬಿ.ಆರ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಲಾರ್ಪಣೆ ಹಾಗೂ ಪುಷ್ಪಾರ್ಚನೆ ಮಾಡಿ ಮಾತನಾಡಿದ ಡಾ. ಯತೀಂದ್ರ ಸಿದ್ದರಾಮಯ್ಯ, ದೇಶಾದ್ಯಂತ ಇಂದು ಅಂಬೇಡ್ಕರ್ ಅವರ ಪರಿ ನಿಬ್ಬಣ ಕಾರ್ಯಕ್ರಮಗಳು ನಡೆಯುತ್ತಿವೆ. ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪಾಲನೆ ಮಾಡಿ ಮುಂದಿನ ಪೀಳಿಗೆಗೆ ಮಾದರಿ ಆಗುವಂತೆ ನಡೆದುಕೊಳ್ಳಬೇಕು. ದೇಶದಲ್ಲಿ ಸಂವಿಧಾನ ಬದ್ಧವಾಗಿ ಪ್ರತಿಯೊಂದು ಕೆಲಸ ಕಾರ್ಯಗಳು ನಡೆಯುತ್ತಿವೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾದಿಯಲ್ಲಿ ಸಾಗಿದರೆ ದೇಶ ಪ್ರಬುದ್ಧತೆಯಲ್ಲಿ ಉತ್ತಮ ಸ್ಥಾನಮಾನದಲ್ಲಿರುತ್ತದೆ ಎಂದರು.
ಈ ದೇಶವು ಕೋಮುವಾದಿ ಶಕ್ತಿಯಿಂದ ನಲುಗಿ ಹೋಗುತ್ತಿದೆ ಇನ್ನು ಮುಂದಾದರು ಶಾಂತಿ ನೆಲೆಸುವಂತಾಗಲಿ ಎಂದು ದಸಂಸ ಮುಖಂಡ ಶಂಕರಪುರ ಸುರೇಷ್ ಹಾಗು ಮಲ್ಲಳ್ಳಿ ನಾರಾಯಣ್ ಮಾತನಾಡಿದರು.


ಇದೇ ಸಂದರ್ಭ ಡಾ ಬಿ. ಆರ್. ಅಂಬೇಡ್ಕರ್ ಅವರಿಗೆ ಜಯಕಾರದ ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ವಾಲ್ಮೀಕಿ ನಿಗಮದ ಮಾಜಿ ಅಧ್ಯಕ್ಷ ಎಸ್. ಸಿ. ಬಸವರಾಜು , ಮುಖಂಡರಾದ ಮಲ್ಲಹಳ್ಳಿ ನಾರಾಯಣ್, ಬೊಕ್ಕಹಳ್ಳಿಲಿಂಗಯ್ಯ,ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸ್ನೋರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಜೆರಾಲ್ಡ್ ರಾಜೇಶ್ ಹಾಗೂ ತಾಲೂಕು ಮಟ್ಟದ ವಿವಿದ ಇಲಾಖೆಯ ಅಧಿಕಾರಿಗಳು ದಸಂಸ ಸಂಘಟಕರು ,ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು