ಇತ್ತೀಚಿನ ಸುದ್ದಿ
ಲಿಂಗಸಗೂರು: ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಶಾಸ್ತ್ರೀ ಜನ್ಮದಿನಾಚರಣೆ
02/10/2023, 17:35

ಶರಣು ಗೋರೆಬಾಳ ಸಿಂಧನೂರು ರಾಯಚೂರು
info.reporterkarnataka@gmail.com
ಲಿಂಗಸಗೂರು ಸಮೀಪದ ಈಚನಾಳ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹನೀಯರ ಜಯಂತಿ ಆಚರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗ್ರಾಪಂ ಕಾರ್ಯದರ್ಶಿ ಶಿವಪ್ಪ, ಗ್ರಾಮಗಳು ಅಭಿವೃದ್ದಿಯಾದರೆ ದೇಶದ ಅಭಿವೃದ್ದಿ ಎಂದು ಸಾರಿದ ಮಹಾತ್ಮ ಗಾಂಧೀಜಿ ಮತ್ತು ಜೈ ಜವಾನ ಜೈ ಕಿಸಾನ್ ಎಂಬ ಘೋಷ ವಾಕ್ಯದೊಂದಿಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ ವಿಚಾರಧಾರೆಗಳು ನಮಗೆಲ್ಲ ದಾರಿದೀಪವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಆದಪ್ಪ ಮೇಟಿ, ಗ್ರಾಪಂ ಸದಸ್ಯರಾದ ಮರಿಯಪ್ಪ ಕಟ್ಟಿಮನಿ, ಅಮರಪ್ಪ ದಳಪತಿ, ಅಂಗನವಾಡಿ ಶಿಕ್ಷಕರಾದ ಸರಸ್ವತಿ ಬಡೀಗೆರ್ , ಶರಣಮ್ಮ, ಅನುಸೂಯಾ, ಗ್ರಾಮಸ್ಥರಾದ ಅಯ್ಯಪ್ಪ ಗಾಳಪೂಜಿ, ಹುಲಗಪ್ಪ ಕಟ್ಟಿಮನಿ, ಗ್ರಾಪಂ ಸಿಬ್ಬಂದಿಗಳಾದ ಸುರೇಶ, ಅಮರೇಶ, ವಿಜಯಲಕ್ಷ್ಮಿ,ಅಂಗನವಾಡಿ ಕೇಂದ್ರದ ಮಕ್ಕಳು ಇದ್ದರು.