ಇತ್ತೀಚಿನ ಸುದ್ದಿ
ಸ್ವಚ್ಛ ಭಾರತ ಅಭಿಯಾನ: ಸಿಂಧನೂರು ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಶ್ರಮದಾನ
01/10/2023, 21:10

ಶರಣ್ ಗೋರೆಬಲ್ ಸಿಂಧನೂರು ರಾಯಚೂರು
info.reporterkarnataka@gmail.com
ಗಾಂಧಿ ಜಯಂತಿ ಪ್ರಯುಕ್ತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಸ್ವಚ್ಛ ಭಾರತ ಅಭಿಯಾನ’ ನಿಮಿತ್ಯ ಇಂದು ನಗರದ ಸಾರ್ವಜನಿಕ ಆಸ್ಪತ್ರೆ ಆವರಣವನ್ನು ಶ್ರಮದಾನ ಮೂಲಕ ಸ್ವಚ್ಛಗೊಳಿಸಲಾಯಿತು.
ಈ ಸಂದರ್ಭದಲ್ಲಿ ಹಿರಿಯ ನಾಯಕರಾದ ಮದ್ವರಾಜ್ ಆಚಾರ್ಯ, ನಗರ ಮಂಡಲ ಅಧ್ಯಕ್ಷ ನಿರೂಪಾದಪ್ಪ ಜೋಳದರಾಶಿ, ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್ ಹರಾಸೂರ್, ರವಿ ರಾಠೋಡ್, ಗ್ರಾಮೀಣ ಮಂಡಲ ಯುವ ಮೋರ್ಚಾ ಅಧ್ಯಕ್ಷರದ ಸಿದ್ದು ಹೂಗಾರ್, ರೈತ ಮೋರ್ಚಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಕಾಟಗಲ್, ಎಸ್ಸಿ ಮೋರ್ಚಾ ಅಧ್ಯಕ್ಷರಾದ ಕೃಷ್ಣಪ್ಪ ರಾಠೋಡ್, ಎಸ್ಟಿ ಮೋರ್ಚಾ ಅಧ್ಯಕ್ಷರಾದ ಪಂಪಪಾತಿ ನಾಯಕ್, ಉಪಾಧ್ಯಕ್ಷರಾದ ನಾಗರಾಜ ನಾಯಕ, ಅಲ್ಪ ಸಂಖ್ಯಾತ ಮೋರ್ಚಾ ಅಧ್ಯಕ್ಷರಾದ ಸಿರಾಜ್ ಪಾಷ,ಆನಂದ್ ಗೊರ್ಕರ್, ಮೌನೇಶ್ ಹೊಸಮನಿ, ಕಾಶೀನಾಥ್ ಹಿರೇಮಠ್ ಹಾಗೂ ಮುಂತಾದ ಪಕ್ಷದ ಪ್ರಮುಖರು, ಕಾರ್ಯಕರ್ತರು ಉಪಸ್ಥಿತರಿದ್ದರು.