ಇತ್ತೀಚಿನ ಸುದ್ದಿ
ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
01/10/2023, 12:57

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕೆಜೆ ಹಳ್ಳಿ-ಡಿಜೆಹಳ್ಳಿ-ಹುಬ್ಬಳ್ಳಿ ಕೇಸ್ ಆದ ಸಂದರ್ಭದಲ್ಲಿ ಕಾಂಗ್ರೆಸ್ ದೇಶದ್ರೋಹಿಗಳ ಪರ ನಿಂತಿತ್ತು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾಧ್ಯಮ ಜತೆ ಮಾತನಾಡಿದ ಅವರು,
ಕೆಜೆ ಹಳ್ಳಿ-ಡಿಜೆಹಳ್ಳಿ ಕೇಸಲ್ಲಿ ಅವರದ್ದೇ ಶಾಸಕರಿಗೆ ಕಾಂಗ್ರೆಸ್ ಬೆಂಬಲ ಕೊಡ್ಲಿಲ್ಲ. ಕಾಂಗ್ರೆಸ್ ಶಾಸಕರ ಮನೆ ಸುಟ್ರು ಯಾರೂ ಹೋಗಲಿಲ್ಲ, ನಾವೇ ಹೋಗಿದ್ದು. ಕಾಂಗ್ರೆಸ್ ತನ್ನ ಶಾಸಕರಿಗೆ ನೈತಿಕ ಬೆಂಬಲವನ್ನೂ ಕೊಡ್ಲಿಲ್ಲ ಎಂದರು.
ಅಲ್ಲಿ ತಪ್ಪು ಮಾಡಿದ್ದಾರೆ ಎಂದು ಕಾಂಗ್ರೆಸ್ಸಿಗೆ ಇಂದು ಅರಿವಾಗ್ತಿದೆ.
ಪೊಲೀಸ್ ಸ್ಟೇಷನ್, ಮನೆ, ವಾಹನ ಎಲ್ಲವನ್ನೂ ಸುಟ್ಟರು.
ಕೆಜೆ ಹಳ್ಳಿ-ಡಿಜೆಹಳ್ಳಿ ಒಂದು ರೀತಿ ಸ್ಮಶಾನವಾಗಿತ್ತು, ಅದಕ್ಕೆ ಕಾಂಗ್ರೆಸ್ ಕುಮ್ಮಕ್ಕಿತ್ತು. ಆಗಿನ ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರೋದ್ರ ಜೊತೆ ಒಂದು ಸಮುದಾಯದ ಓಲೈಕೆಗೆ ಮುಂದಾಗಿದ್ದರು. ಇವತ್ತು ನ್ಯಾಯುತವಾದ ತನಿಖೆ ಮಾಡಿದರೆ ತಪ್ಪು ಮಾಡಿದ್ದು ಯಾರೆಂದು ಗೊತ್ತಾಗುತ್ತೆ ಎಂದು ಶೋಭಾ ನುಡಿದರು.