5:04 AM Wednesday6 - December 2023
ಬ್ರೇಕಿಂಗ್ ನ್ಯೂಸ್
ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ಸೇರಿದಂತೆ ವಿವಿಧ ಬೇಡಿಕೆ ಆಗ್ರಹಿಸಿ ಇಂದಿನಿಂದ ತರಗತಿ… ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಉದ್ಯಮಿಗೆ 5 ಕೋಟಿ ವಂಚನೆ ಪ್ರಕರಣ: ಚೈತ್ರಾ ಸೇರಿದಂತೆ… ವಾಹನ ಕಳ್ಳತನ ಪ್ರಕರಣದ ಕುಖ್ಯಾತ ಆರೋಪಿಯ ಸೆರೆ: 68,000/- ಮೌಲ್ಯದ ಸೊತ್ತು ವಶಕ್ಕೆ ಮಂಗಳೂರು: 4 ತಿಂಗಳ ಹಸುಗೂಸಿನ ಕೊಂದು ತಾನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ… ಚಿಕ್ಕಮಗಳೂರು: ಅಮಾನತುಗೊಂಡ ಪೊಲೀಸರ ಕುಟುಂಬದಿಂದ ಠಾಣೆ ಮುಂಭಾಗ ಪ್ರೊಟೆಸ್ಟ್ ಬೆಳಗಾವಿ ಸುವರ್ಣಸೌಧಕ್ಕೆ ಬೆಳಕಿನ ಖದರ್: ವೀಕೆಂಡ್ ನಲ್ಲಿ ಬಣ್ಣದ ಬೆಳಕಿನಲ್ಲಿ ಬೆಳಗುವ ಯೋಜನೆಗೆ… ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಡಿ. 9ರಂದು ಕಲ್ಲಡ್ಕಕ್ಕೆ: ಶ್ರೀರಾಮ ವಿದ್ಯಾಕೇಂದ್ರ ಕ್ರೀಡೋತ್ಸವದಲ್ಲಿ ಭಾಗಿ ಯುವ ನ್ಯಾಯವಾದಿ ಮೇಲೆ ಪೊಲೀಸರ ಅಮಾನುಷ ಹಲ್ಲೆ: ವಕೀಲರಿಂದ ಭಾರೀ ಪ್ರತಿಭಟನೆ; ಎಸ್ಪಿ… ದಕ್ಷಿಣ ಕನ್ನಡ ಜಿಲ್ಲಾ ಬಲ್ಯಾಯ ಸಂಘದ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಉಮಾಲಕ್ಷ್ಮೀ ಕುಡುಪು… ಪುತ್ತೂರು: ಚೆನ್ನರಾಯಪಟ್ಟಣದ ಮಹಿಳೆಗೆ ಮದ್ಯ ಕುಡಿಸಿ ನಿರ್ಜನ ಪ್ರದೇಶದಲ್ಲಿ ಅತ್ಯಾಚಾರ; ಆರೋಪಿ ಬಂಧನ

ಇತ್ತೀಚಿನ ಸುದ್ದಿ

ಜೆಡಿಎಸ್- ಬಿಜೆಪಿ ಸಖ್ಯ: ಕೇಸರಿ ಪಾಳಯ ತೊರೆದು ದಳ ಸೇರಿದ್ದ ಮೂಡಿಗೆರೆ ಮಾಜಿ ಶಾಸಕ ಕುಮಾರಸ್ವಾಮಿ ಮತ್ತೆ ಪೇಚಿಗೆ; ಸೇರ್ತಾರಾ ಕಾಂಗ್ರೆಸ್ಸಿಗೆ?

01/10/2023, 11:50

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ತೊರೆದು ಜನತಾ ದಳ ಸೇರಿದ್ದ ಮೂಡಿಗೆರೆಯ ಮಾಜಿ ಶಾಸಕ ಕುಮಾರಸ್ವಾಮಿ ಮತ್ತೆ ಪೇಚಿಗೆ ಸಿಲುಕಿದ್ದಾರೆ. ಅವರು ಸೇರಿದ್ದ ಜಾತ್ಯತೀತ ಜನತಾ ದಳವನ್ನು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಿಜೆಪಿ ಜತೆ ಮೈತ್ರಿ ಮಾಡಿಸಿಕೊಂಡಿದ್ದಾರೆ.
ಮೂಡಿಗೆರೆ ಕುಮಾರಸ್ವಾಮಿ ಜನತಾ ದಳದಲ್ಲಿ ಉಳಿದರೆ ಮತ್ತೆ ಅವರು ಸಿ.ಟಿ. ರವಿ, ಶೋಭಾ ಕರಂದ್ಲಾಜೆ ಮುಂತಾದ ಬಿಜೆಪಿ ನಾಯಕರಿಗೆ ಮುಖಾಮುಖಿಯಾಗಬೇಕಾಗುತ್ತದೆ. ಬಿಜೆಪಿ ಸಂಗ ಬೇಡವೆಂದು ಜನತಾದಳ ಸೇರಿದ ಕುಮಾರಸ್ವಾಮಿ ಅವರಿಗೆ ‘ಹೋದೆಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷಿ’ ಎನ್ನುವ ಸನ್ನಿವೇಶ ಎದುರಾಗಿದೆ.
ಕುಮಾರಸ್ವಾಮಿ ಅವರು ಬಿಜೆಪಿ ಶಾಸಕರಾಗಿರುವಾಗಲೇ ಬಿಜೆಪಿಯ ಒಂದು ಗುಂಪು ಅವರ ವಿರುದ್ದ ಹಲ್ಲು ಮಸೆಯುತ್ತಿತ್ತು. ಕುಮಾರಸ್ವಾಮಿ ಕಮುನಿಸ್ಟ್ ಎಂಬ ಪುಕಾರು ಎಬ್ಬಿಸಿದ್ದರು. ಹಲ್ಲೆ ಕೂಡ ನಡೆದಿತ್ತು. ಇಷ್ಟೆಲ್ಲ ನಡೆದ ಮೇಲೆ ವಿಧಾನಸಭೆ ಚುನಾವಣೆಯಲ್ಲಿ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಯಿತು. ಕಾಂಗ್ರೆಸ್ ಗೆ ಹೋಗೋಣ ಅಂದ್ರೆ ಅಲ್ಲಿ ನಯನಾ ಮೋಟಮ್ಮ ಅವರಿಗೆ ಟಿಕೆಟ್ ಫೈನಲ್ ಆಗಿತ್ತು. ನಂತರ ಉಳಿದಿರುವ ರಾಜಕೀಯ ಆಸರೆ ಎಂದರೆ ಜಾತ್ಯತೀತ ಜನತಾ ದಳ ಮಾತ್ರ. ಹಾಗೆ ಕುಮಾರಸ್ವಾಮಿ ಅವರು ಮತ್ತೊಬ್ಬ ಕುಮಾರಸ್ವಾಮಿಯ ಜನತಾ ದಳ ಬಸ್ಸನ್ನು ಏರಿಯೇ ಬಿಟ್ಟರು. ಈಗ ವಿಧಾನಸಭೆ ಚುನಾವಣೆ ಮುಗಿದು 4 ತಿಂಗಳು ಕಳೆದಿವೆ. ರಾಜಕೀಯ ಸ್ಥಿತ್ಯಂತರ ಮತ್ತೆ ರಾಜ್ಯದಲ್ಲಿ ಪ್ರಾರಂಭವಾಗಿದೆ. ಜನತಾ ದಳ ಲೋಕಸಭೆ ಚುನಾವಣೆಗೆ ಪೂರ್ವಭಾವಿಯಾಗಿ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದೆ. ವಿಧಾನಸಭೆ ಚುನಾವಣೆಯಲ್ಲಿ 40+ ಸೀಟುಗಳ ಕನಸು ಕಂಡಿದ್ದ ಜನತಾ ದಳಕ್ಕೆ ಸಿಕ್ಕಿದ್ದು ಬರೇ 19 ಸೀಟು. ಅದಲ್ಲದೆ ತಮ್ಮ ರಾಜಕೀಯ ವಿರೋಧಿ ಸಿದ್ದರಾಮಯ್ಯ ಅವರು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಇವೆಲ್ಲದರ ಫಲಶೃತಿ ಜನತಾ ದಳ ಮತ್ತು ಬಿಜೆಪಿಯ ಮೈತ್ರಿ ಆಗಿದೆ.
ಕುಮಾರಸ್ವಾಮಿ ಮತ್ತು ಜೆ.ಪಿ. ನಡ್ಡಾ ಅವರ ನಡುವೆ ಒಡಂಬಡಿಕೆ ಏನೋ ನಡೆದು ಮೈತ್ರಿ ಮಾಡಿಕೊಂಡಿದ್ದಾರೆ. ಆದರೆ ಬಿಜೆಪಿ ಸಂಗ ಬೇಡವೆಂದು ಜನತಾ ದಳ ಸೇರಿದ ಮೂಡಿಗೆರೆಯ ಕುಮಾರಸ್ವಾಮಿ ಪಾಡೇನು? ಇವೆಲ್ಲದಕ್ಕೆ ಉತ್ತರ ಕಾಂಗ್ರೆಸ್ ಸೇರ್ಪಡೆ ಆಗಿದೆ. ಸದ್ಯದಲ್ಲೇ ಕುಮಾರಸ್ವಾಮಿ ಅವರು ಕೈ ಪಾಳಯ ಸೇರುವುದು ಬಹುತೇಕ ಗ್ಯಾರಂಟಿಯಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು