10:23 AM Friday24 - May 2024
ಬ್ರೇಕಿಂಗ್ ನ್ಯೂಸ್
ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ;… ಕುಡುಕ ಪತಿಯಿಂದ ಪತ್ನಿಯ ಬರ್ಬರ ಹತ್ಯೆ: ಮಕ್ಕಳ ಕಣ್ಣೆದುರೇ ಸಲಾಕೆಯಿಂದ ಹೊಡೆದು ಕೊಲೆ… ಪೂರ್ವ ಮುಂಗಾರು: ದ.ಕ., ಉಡುಪಿ ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ… ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಮಂಗಳೂರಿನಲ್ಲಿ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ!: ಆದ್ಯತೆ ಮೇರೆಗೆ ನಿರ್ಮಾಣ ಎನ್ನುತ್ತಾರೆ ನೂತನ ಮೇಯರ್

29/09/2023, 18:33

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com
ಸ್ಮಾರ್ಟ್ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 50ಕ್ಕೂ ಹೆಚ್ಚು ಸ್ಥಳಗಳಲ್ಲಿ ಪ್ರಯಾಣಿಕರಿಗೆ ಸರಿಯಾದ ಬಸ್ ಶೆಲ್ಟರ್ ವ್ಯವಸ್ಥೆ ಇಲ್ಲ ಅಂದ್ರೆ ನಿಮಗೆಲ್ಲ ಆಶ್ಚರ್ಯವಾಗಬಹುದು. ಆದರೆ ಇದು ನಿಜ. ಈ ಕಡೆಗಳೆಲ್ಲ ಹಿರಿಯ ನಾಗರಿಕರು, ಮಕ್ಕಳು, ಮಹಿಳೆಯರು ಬಿಸಿಲು- ಮಳೆಯಲ್ಲೇ ರಸ್ತೆ ಬದಿಯಲ್ಲಿ ಬಸ್ಸಿಗೆ ಕಾದು ಗಮ್ಯ ಸ್ಥಾನವನ್ನು ಸೇರಿಕೊಳ್ಳುತ್ತಾರೆ.

ಬಹುಕೋಟಿಯ ಸ್ಮಾರ್ಟ್ ಸಿಟಿ ಯೋಜನೆ ಮಂಗಳೂರಿನಲ್ಲಿ ಅನುಷ್ಠಾನಗೊಂಡಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಈ ಬಹುಕೋಟಿಯಲ್ಲಿ ಹಲವು ಕೋಟಿಯನ್ನು ರಸ್ತೆ, ಫುಟ್ ಪಾತ್ ನುಂಗಿ ಹಾಕಿದೆ. ಹಾಗೆಂತ ಮಂಗಳೂರಿನ ಎಲ್ಲ ರಸ್ತೆಗಳು ಫಳ ಫಳ ಹೊಳೆಯುತ್ತಿದೆ ಎಂದು ಅರ್ಥವಲ್ಲ. ಅಭಿವೃದ್ಧಿ ಎನ್ನುವುದು ಹಂಚಿ ಹೋಗದೆ ಕೆಲವೇ ವಾರ್ಡ್ ಗಳಿಗೆ ಸೀಮಿತವಾಗಿದೆ. ಕೆಲವರ ಪ್ರತಿಷ್ಠಿಗೆ ತಲೆಬಾಗಿದೆ. ಗಟ್ಟಿಮುಟ್ಟಾದ ರಸ್ತೆಯನ್ನು ಅಗೆದು ಸ್ಮಾರ್ಟ್ ಸಿಟಿ ಕಾಸಿನಲ್ಲಿ ಕಾಂಕ್ರೀಟ್ ಹಾಕಿದ್ದೂ ಉಂಟು. ಕಲ್ಲು ಚಪ್ಪಡಿ ತೆಗೆದು ಫುಟ್ ಪಾತ್ ಗಳಿಗೆ ಬಣ್ಣದ ಹಾಸು ಹಾಸಲು ಸ್ಮಾರ್ಟ್ ಸಿಟಿ ಫಂಡ್ ಬಳಸಿದ್ದೂ ಉಂಟು. ವಾಸ್ತವದಲ್ಲಿ ಸ್ಮಾರ್ಟ್ ಸಿಟಿ ಫಂಡ್ ಬಳಕೆ ಇಲ್ಲಿನ ಜನರ ಸುಸ್ಥಿರ ಅಭಿವೃದ್ಧಿಗೆ ಬಳಕೆಯಾಗಬೇಕಿತ್ತು. ಇಷ್ಟೆಲ್ಲ ಫಂಡ್ ಬಳಸಿದರೂ ಜನರ ಮೂಲಭೂತ ಅವಶ್ಯಕತೆಗಳಾದ ಬಸ್ ಶೆಲ್ಟರ್ ನಿರ್ಲಕ್ಷಿಸಲಾಗಿದೆ ಎನ್ನುತ್ತಾರೆ ಮಂಗಳೂರಿನ ಪ್ರಜ್ಞಾವಂತ ನಾಗರಿಕರು.

ಸ್ಮಾರ್ಟ್ ಸಿಟಿ ಫಂಡ್ ಬಿಡಿ, ಪಾಲಿಕೆಯ ಫಂಡ್ ನಿಂದಾದರೂ ಬಸ್ ಶೆಲ್ಟರ್ ನಿರ್ಮಿಸುವ ಉತ್ಸುಕತೆಯನ್ನು ಕಳೆದ ಹಲವು ವರ್ಷಗಳಿಂದ ಪಾಲಿಕೆ ಆಡಳಿತ ತೋರಿಸಿಲ್ಲ. ಜನಪ್ರತಿನಿಧಿಗಳಿಗೆ,
ದೊಡ್ಡ ದೊಡ್ಡ ಅಧಿಕಾರಿಗಳಿಗೆ ಸರಕಾರಿ ಕಾರು ಇದೆ. ಆಯಕಟ್ಟಿನ ಅಧಿಕಾರಿಗಳಿಗೂ ಸರಕಾರದ ವಾಹನವಿದೆ. ಹತ್ತಿರದಲ್ಲೇ ಇಂಟರ್ ನ್ಯಾಷನಲ್ ಏರ್ ಫೋರ್ಟ್ ಇದೆ. ಮತ್ಯಾಕೆ ಬೇಕು ಬಡವರಿಗೆ ಹಾಗೂ ಮಧ್ಯಮ ವರ್ಗದವರಿಗೆ ಅನುಕೂಲವಾಗುವ ಬಸ್ ಶೆಲ್ಟರ್? ಎನ್ನುವ ಮನಸ್ಥಿತಿ ಇವರದ್ದಾಗಿದೆ.
ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯಲ್ಲಿ ಸುಮಾರು 53 ಕಡೆಗಳಲ್ಲಿ ಪ್ರಯಾಣಿಕರಿಗೆ ಬಸ್ ಶೆಲ್ಟರ್ ವ್ಯವಸ್ಥೆ ಇಲ್ಲ ಎನ್ನುವುದು ಪೊಲೀಸ್ ಇಲಾಖೆ ನಡೆಸಿದ ಸರ್ವೇಯಲ್ಲಿ ಗೊತ್ತಾಗಿದೆ. ಸಂತ್ರಸ್ತ ಪ್ರಯಾಣಿಕರಿಂದ ಬಂದ ದೂರಿನ ಅನ್ವಯ ಪೊಲೀಸ್ ಕಮಿಷನರ್ ಕಚೇರಿಯಿಂದ ಬಸ್ ಶೆಲ್ಟರ್ ಇಲ್ಲದ ಸ್ಥಳಗಳನ್ನು ಫೋಟೋ ಸಹಿತ ಗುರುತಿಸಿ ಪಾಲಿಕೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗಿದೆ. ಕುಲ್ ದೀಪ್ ಕುಮಾರ್ ಜೈನ್ ಅವರು ಪೊಲೀಸ್ ಕಮಿಷನರ್ ಆಗಿದ್ದಾಗ ಈ ಕುರಿತು ವರದಿಯೊಂದನ್ನು ತಯಾರಿಸಿ ಪಾಲಿಕೆಗೆ ನೀಡಿದ್ದಾರೆ. ರಿಪೋರ್ಟರ್ ಕರ್ನಾಟಕ ಈ ಕುರಿತು ಮಂಗಳೂರಿನ ನೂತನ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅವರನ್ನು ಮಾತನಾಡಿಸಿದಾಗ, ಕೌನ್ಸಿಲ್ ಸಭೆಯಲ್ಲಿ ಚರ್ಚಿಸಿ, ಆದ್ಯತೆಯ ಮೇರೆಗೆ ಹಂತ ಹಂತವಾಗಿ ಬಸ್ ಶೆಲ್ಟರ್ ಗಳನ್ನು ನಿರ್ಮಿಸುವುದಾಗಿ ಹೇಳಿದ್ದಾರೆ.
ಎಲ್ಲೆಲ್ಲ ಬಸ್ ಶೆಲ್ಟರ್ ಗಳ ಅಗತ್ಯವಿದೆಯೋ ಅಲ್ಲೆಲ್ಲ ನಿರ್ಮಿಸಲಾಗುವುದು. ಜಾಹೀರಾತುದಾರರ ಸ್ಪಾನ್ಸರ್ ನಲ್ಲೂ ಬಸ್ ಶೆಲ್ಟರ್ ನಿರ್ಮಿಸುವ ಯೋಜನೆಯೂ ಇದೆ ಎಂದು ಮೇಯರ್ ನುಡಿದಿದ್ದಾರೆ.
ಎಲ್ಲೆಲ್ಲಿ ಇಲ್ಲ?: ನಗರದ ಹೃದಯ ಭಾಗದ ಮಿಲಾಗ್ರಿಸ್ ಕಾಲೇಜು ಎದುರು, ಮಿಲಾಗ್ರಿಸ್ ಚರ್ಚ್ ಎದುರು, ಎವೆರಿ ಜಂಕ್ಷನ್, ಅತ್ತಾವರ ಕಟ್ಟೆ, ಅತ್ತಾವರ ಕೆಎಂಸಿ, ಯುನಿಟಿ ಆಸ್ಪತ್ರೆ ಸ್ಥಳಗಳಲ್ಲೇ ಬಸ್ ಶೆಲ್ಟರ್ ಗಳಿಲ್ಲ. ಇನ್ನು ನಗರದ ಆಯಕಟ್ಟಿನ ಜಾಗಗಳಾದ ಕಂಕನಾಡಿ ಜಂಕ್ಷನ್‌, ಬೆಂದೂರುವೆಲ್ ಜಂಕ್ಷನ್, ಬಲ್ಮಠ ಜಂಕ್ಷನ್, ಹೋಟೆಲ್ ಮಹಾರಾಜ್, ಕರಂಗಲ್ಪಾಡಿ ಜಂಕ್ಷನ್, ಮಲ್ಲಿಕಟ್ಟೆ ಸೇರಿದಂತೆ 53 ಸ್ಥಳಗಳಲ್ಲಿ ಬಸ್ ಶೆಲ್ಟರ್ ಇಲ್ಲ. ಆಯಾಯ ಪ್ರದೇಶದ ಕಾರ್ಪೋರೇಟರ್ ಗಳಿಗೆ, ಪಾಲಿಕೆ ಅಧಿಕಾರಿಗಳಿಗೆ, ಸ್ಮಾರ್ಟ್ ಸಿಟಿ ನೇತಾರರಿಗೆ ಇಲ್ಲೆಲ್ಲ ಜನರ ಮೂಲ ಅವಶ್ಯಕತೆಗಳಲ್ಲೊಂದಾಗ ಬಸ್ ಶೆಲ್ಟರ್ ಬೇಕು ಎನ್ನುವುದು ಅನಿಸದಿರುವುದು ದುರದೃಷ್ಟಕರ ಎಂದು ಸಾರ್ವಜನಿಕರು ಆಡಿಕೊಳ್ಳುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು