ಇತ್ತೀಚಿನ ಸುದ್ದಿ
ವೈದ್ಯರ ಮೇಲೆ ಚಾಕುವಿನಿಂದ ಹಲ್ಲೆ: ಆಸ್ಪತ್ರೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ
15/09/2023, 20:14

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಕಾಫಿನಾಡಿನ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರುನಲ್ಲಿವೈದ್ಯರೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು,ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ವೈದ್ಯರ ಆರೋಗ್ಯ ವಿಚಾರಿಸಿದ್ದಾರೆ.
ಬಾಳೆಹೊನ್ನೂರು ವೈದ್ಯ ಗಣೇಶ್ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ವೈದ್ಯರ ಮೇಲೆ ಚಾಕುವಿನಿಂದ ಕೈ ಹಾಗೂ ಹೊಟ್ಟೆ ಭಾಗಕ್ಕೆ ಇರಿಯಲಾಗಿದೆ.ಅದೃಷ್ಟವಶಾತ್ ವೈದ್ಯರು ಅಪಾಯದಿಂದ ಪಾರಾಗಿದ್ದಾರೆ.
ವೈದ್ಯ ಗಣೇಶ್ ಅವರ ತೋಟದ ಕಾರ್ಮಿಕರ ಮೇಲೆ ಪಕ್ಕದ ತೋಟದ ಕಾರ್ಮಿಕರಿಂದ ಹಲ್ಲೆ ನಡೆದಿತ್ತು.
ಕೂಡಲೇ ಚಿಕಿತ್ಸೆಗೆಂದು ಸ್ಥಳಕ್ಕೆ ಹೋದ ವೈದ್ಯ ಗಣೇಶ್ ಮೇಲೆ
ಅದೇ ಕಾರ್ಮಿಕರು ಹಲ್ಲೆಗೈದಿದ್ದಾರೆ.
ತೀವ್ರ ಅಸ್ವಸ್ಥರಾಗಿದ್ದ ವೈದ್ಯ ಗಣೇಶ್ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ನಡುವೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು
ಆಸ್ಪತ್ರೆಗೆ ಭೇಟಿ ನೀಡಿ, ವೈದ್ಯನ ಆರೋಗ್ಯ ವಿಚಾರಿಸಿದ್ದಾರೆ.
ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.