10:26 AM Friday24 - May 2024
ಬ್ರೇಕಿಂಗ್ ನ್ಯೂಸ್
ಬುದ್ಧ ಪೂರ್ಣಿಮೆ: ದಕ್ಷಿಣ ಕಾಶಿ ನಂಜನಗೂಡು ದೇಗುಲಕ್ಕೆ ಹರಿದು ಬಂದ ಭಕ್ತ ಸಾಗರ;… ಕುಡುಕ ಪತಿಯಿಂದ ಪತ್ನಿಯ ಬರ್ಬರ ಹತ್ಯೆ: ಮಕ್ಕಳ ಕಣ್ಣೆದುರೇ ಸಲಾಕೆಯಿಂದ ಹೊಡೆದು ಕೊಲೆ… ಪೂರ್ವ ಮುಂಗಾರು: ದ.ಕ., ಉಡುಪಿ ಸಹಿತ ರಾಜ್ಯದ 7 ಜಿಲ್ಲೆಗಳಲ್ಲಿ ಭಾರೀ ಮಳೆ… ಪಡೀಲು ಸಮೀಪ ಬೈಕಿಗೆ ಡಿಕ್ಕಿ ಹೊಡೆದು ಸವಾರ ಸಹಿತ ದೂರಕ್ಕೆ ಎಳೆದೊಯ್ದ ಕಾರು:… ವಿಜಯಪುರ: ಚಾಕುವಿನಿಂದ ಇರಿದು, ಕಲ್ಲಿನಿಂದ ಜಜ್ಜಿ ಯುವಕನ ಅಮಾನುಷ ಹತ್ಯೆ; ಹಣಕಾಸಿನ ವ್ಯವಹಾರ… ವಿಧಾನ ಪರಿಷತ್ ಚುನಾವಣೆ: ಮೇ 20ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನ ನಟಿ ಪವಿತ್ರಾ ಜಯರಾಂ ಸ್ನೇಹಿತ ಚಂದ್ರಕಾಂತ್ ಆತ್ಮಹತ್ಯೆ: ಸ್ನೇಹಿತೆ ಸಾವನ್ನಪ್ಪಿ ವಾರದೊಳಗೆ ಚಂದ್ರು… ವಿದ್ಯುತ್ ವೈರ್ ಗೆ ತಗಲಿದ ಅಲ್ಯುಮಿನಿಯಂ ಏಣಿ: ಕರೆಂಟ್ ಶಾಕ್ ನಿಂದ ಹಲಸಿನಹಣ್ಣು… ಸಿಸಿಬಿ ಪೊಲೀಸರ ಕಾರ್ಯಾಚರಣೆ: ಎಂಡಿಎಂಎ ಸಾಗಾಟ ಮಾಡುತ್ತಿದ್ದ 4 ಮಂದಿಯ ಬಂಧನ; 14.85… ನೈಋತ್ಯ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಯಾಗಿ ಡಾ. ಎಸ್.ಆರ್. ಹರೀಶ್ ಆಚಾರ್ಯ ನಾಮಪತ್ರ ಸಲ್ಲಿಕೆ

ಇತ್ತೀಚಿನ ಸುದ್ದಿ

ಪಾಲಿಕೆ ಕಂಬ್ಳ ವಾರ್ಡ್‌ನಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣ: ಶಾಸಕ ವೇದವ್ಯಾಸ ಕಾಮತ್ ಶಿಲಾನ್ಯಾಸ

21/03/2023, 13:17

ಮಂಗಳೂರು(reporterkarnataka.com): ಮಂಗಳೂರು ಮಹಾನಗರ ಪಾಲಿಕೆಯ 29ನೇ ಕಂಬ್ಳ ವಾರ್ಡ್‌ನ ಕುದ್ರೋಳಿ ಭಗವತಿ ದೇವಸ್ಥಾನ, ಕೊಡಿಯಾಲ್‌ಬೈಲ್ ನಾಗಬನ, ಪ್ರಗತಿ ಸರ್ವಿಸ್ ಸ್ಟೇಶನ್ ಬಳಿ ಎಂಪೈರ್ ಮಾಲ್ ಕಡೆ ಹೋಗುವ ಭಾಗದಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣಕ್ಕೆ ಇಂದು ಶಾಸಕ ಡಿ. ವೇದವ್ಯಾಸ ಕಾಮತ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಭಾಗದ ನಿವಾಸಿ ಕೇಶವ ಆಚಾರ್ಯ ಅವರ ನೇತೃತ್ವದಲ್ಲಿ ಶಿಲಾನ್ಯಾಸ ನೆರವೇರಿಸಲಾಯಿತು.

ಒಟ್ಟಾರೆ 1.20 ಕೋಟಿ ರೂ ವೆಚ್ಚದಲ್ಲಿ ಈ ಕಾಮಗಾರಿ ನಡೆಸಲಾಗುತ್ತಿದೆ. ಮಳೆಗಾಲದಲ್ಲಿ ಈ ಭಾಗದ ನಿವಾಸಿಗಳ ಕಷ್ಟ ನಷ್ಟಗಳನ್ನು ನಿವಾರಿಸಲು ತಡೆಗೋಡೆ ನಿರ್ಮಿಸಲಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜತೆ ಸಮಾಲೋಚಿಸಿ ನೀರಾವರಿ ಇಲಾಖೆಯಿಂದ 100 ಕೋಟಿ ರೂ ಅನುದಾನವನ್ನು ತಡೆಗೋಡೆ ಕಾಮಗಾರಿಗಳಿಗಾಗಿಯೇ ಒದಗಿಸಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಂಡು ನಗರದ ನಿವಾಸಿಗಳಿಗೆ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದು ಶಾಸಕರು ಈ ಸಂದರ್ಭದಲ್ಲಿ ನುಡಿದರು.
ಉಪಮೇಯರ್ ಪೂರ್ಣಿಮಾ, ನಾರಾಯಣ ಶೆಟ್ಟಿ, ಜಯರಾಮ್ ಶೆಟ್ಟಿ, ಲೋಕನಾಥ್ , ರವಿಕಲಾ ಶೆಟ್ಟಿ, ಮಹಿಳಾ ಮೋರ್ಚಾ ಸದಸ್ಯ ಗೀತಾ, ರಾಧಾಕೃಷ್ಣ ಶೆಟ್ಟಿ, ರಮೇಶ್ ಹೆಗ್ಡೆ, ನೀಲೇಶ್ ಕಾಮತ್, ಪ್ರಕಾಶ್ ನಾಯಕ್, ಪ್ರಕಾಶ್ ಕೋಡಿಯಾಲ್ ಬೈಲ, ವಸಂತ್ ಜೆ ಪೂಜಾರಿ, ಸತೀಶ್ ಕಾಂಚನ್, ನಿಷಿತ್ ಕಾಂಚನ್, ಚಿತ್ರಕಲಾ, ಪ್ರವೀಣ್ ಕುಮಾರ್, ಮೀನಾಕ್ಷಿ, ಮಲ್ಲಿಕಾ ಕಾಮತ್ ಮುಂತಾದವರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು