ಇತ್ತೀಚಿನ ಸುದ್ದಿ
ನಾಗಠಾಣ, ಇಂಡಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಮಾಜಿ ಡಿಸಿಎಂ ಸವದಿ ನೇತೃತ್ವದಲ್ಲಿ ರೋಡ್ ಶೋ
21/03/2023, 22:59

ವಿಜಯಪುರ(reporterkarnataka.com): ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಜಿಲ್ಲೆಯ ನಾಗಠಾಣ ಹಾಗೂ ಇಂಡಿಯಲ್ಲಿ ಅಪಾರ ಜನಸ್ತೋಮದ ಮಧ್ಯೆ ಜರುಗಿತು.
ಬಿಜೆಪಿಯ ಹಲವು ಪ್ರಮುಖ ನಾಯಕರ ಉಪಸ್ಥಿತಿಯಲ್ಲಿ ನಡೆದ ರೋಡ್ ಶೋನಲ್ಲಿ ಅಪಾರ ಸಂಖ್ಯೆಯಲ್ಲಿ ಜನತೆ ಪಾಲ್ಗೊಂಡಿದ್ದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷರ
ಲಕ್ಷ್ಮಣ ಸಂಗಪ್ಪ ಸವದಿ ಪಾಲ್ಗೊಂಡು ಬಿಜೆಪಿ ಬೆಂಬಲಿಸಲು ಜನರಲ್ಲಿ ಮನವಿ ಮಾಡಿದರು.
ಸಚಿವ ಗೋವಿಂದ ಕಾರಜೋಳ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ನಾಗಠಾಣ ಜಿಪಂ ಸದಸ್ಯ ನವೀನ ಅರಕೇರಿ ಸೇರಿದಂತೆ ಪ್ರಮುಖ ನಾಯಕರು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಕಾರ್ಯಕರ್ತರು, ಮತಕ್ಷೇತ್ರದ ಜನತೆ ಪಾಲ್ಗೊಂಡಿದ್ದರು.