ಇತ್ತೀಚಿನ ಸುದ್ದಿ
ಲಕ್ಷ್ಮಣ ಸವದಿ ಬುದ್ದಿವಂತ ರಾಜಕಾರಣಿ, ಆದರೆ ಯಾಕೆ ಹಿಂಗೆ ಮಾಡುತ್ತಿದ್ದಾರೆ ಗೊತ್ತಿಲ್ಲ: ಮಾಜಿ ಸಚಿವ ರಮೇಶ್ ಜಾರಕಿಹೊಳಿ
21/03/2023, 21:42

ರಾಹುಲ್ ಅಥಣಿ ಬೆಳಗಾವಿ
info.reporter Karnataka@gmail.com
ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಬುದ್ದಿವಂತ ರಾಜಕಾರಣಿ. ಆದರೆ, ಯಾಕೆ ಈ ರೀತಿ ಮಾಡುತ್ತಿದ್ದಾನೆ ಎಂಬುದು ಗೊತ್ತಿಲ್ಲ, ಇನ್ನೂ ಐದು ವರ್ಷ ಅವರದ್ದು ಎಂಎಲ್ ಸಿ ಅಧಿಕಾರವಿದೆ ಎಂದು ರಮೇಶ್ ಜಾರಕಿಹೊಳಿ ಅವರು ಲಕ್ಷ್ಮಣ್ ಸವದಿ ವಿರುದ್ಧ ಅಸಮಾಧಾನ ಹೊರ ಹಾಕಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಮಹೇಶ ಕುಮಠಳ್ಳಿಗೆ ಟಿಕೆಟ್ ಕೊಡದಿದ್ದರೆ ನಾನು ಗೋಕಾಕನಿಂದ ಸ್ಪರ್ಧೆ ಮಾಡುವುದಿಲ್ಲ.
ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಹೊರತು ಬೇರೆ ಪಕ್ಷದಿಂದ ಸ್ಪರ್ಧಿಸುವುದಿಲ್ಲ, ಇದೆ 28 ಕ್ಕೆ ಸಿಎಂ ಅವರು ಅಥಣಿಗೆ ವಿವಿಧ ಕಾಮಗಾರಿಗೆ ಚಾಲನೆ ನೀಡಲು ಆಗಮಿಸುವ ಹಿನ್ನಲೆಯಲ್ಲಿ ಚರ್ಚೆ ಮಾಡಲು ಬಂದಿದ್ದೇನೆ ಎಂದರು.
ನಾನೂ ಕೂಡ ಟಿಕೆಟ್ ಕೇಳುತ್ತೇನೆ ಎಂದು ಸವದಿ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಜಾರಕಿಹೊಳಿ, ಸವದಿ ಅವರು ಯಾಕೆ ಆ ರೀತಿ ಹೇಳಿದ್ದಾರೆ ಅವರನ್ನು ನೀವು ಕೇಳಬೇಕು. ಲಕ್ಷ್ಮಣ್ ಸವದಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡುವುದು ಅವರಿಗೆ ಬಿಟ್ಟಿದ್ದು. ನಾವು ಪಕ್ಷದ ಪರವಾಗಿ ಪರವಾಗಿ ಇರುತ್ತೆವೆ, ಅಮಿತ್ ಶಾ ಅವರನ್ನು ಕೇಳಿ ನಾವು ಪಕ್ಷಕ್ಕೆ ಬಂದಿದ್ದು ಅವರ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವ ಬೇಡ ಎಂದು ಹೇಳಿದರು.