1:11 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು

21/03/2023, 21:38

ಬಂಟ್ವಾಳ(reporterkarnataka.com): ಶಾಸಕನಾದ ಆರಂಭದಲ್ಲಿ ಪ್ರತಿಪಕ್ಷದ ಸದಸ್ಯನಾಗಿ ಬಹಳಷ್ಟು ಕಲಿತಿದ್ದೆ. ಬಳಿಕ ಕೊರೊನಾ ಸಂಕಷ್ಟ ಕಾಡಿತ್ತು, ಈ ಎಲ್ಲದರ ನಡುವೆ, ನನಗೆ ಸಿಕ್ಕಿರುವ ಸಣ್ಣ ಅವಧಿಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಪ್ರಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.
ಕಳ್ಳಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಿ, ಬಳಿಕ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ವಿರೋಧ ಪಕ್ಷದವರು ಎಲ್ಲವನ್ನೂ ನಾನೇ ಮಾಡಿದ್ದೇನೆ ಎಂದು ಹೇಳಿಕೊಂಡು ಬರುತ್ತಿದ್ದಾರೆ. ಆದರೆ ನಮ್ಮ ಅವಧಿಯಲ್ಲಿ ಮಾಡಿದ ಮಂಜೂರು ಮಾಡಲಾದ ಪ್ರತಿ ಕಾಮಗಾರಿಗಳ ಹಾಗೂ ಮಂಜೂರು ಮಾಡಿದ ಅನುದಾನಗಳ ಪಿನ್ ಟು ಪಿನ್ ಮಾಹಿತಿಗಳು ನೀಡಲಾಗಿದ್ದು, ಪಾರದರ್ಶಕವಾಗಿದೆ ಎಂದು ಅವರು ತಿಳಿಸಿದರು.
ಕಳ್ಳಿಗೆ ಗ್ರಾಮದಲ್ಲಿ ಆದ್ಯತೆಯ ನೆಲೆಯಲ್ಲಿ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದ್ದೇನೆ. ಮುಂದಿನ ದಿನಗಳಲ್ಲಿ ಈ ಭಾಗದ ಪ್ರತಿಯೊಂದು ಬೇಡಿಕೆಗಳನ್ನು ಪೂರೈಸಲು ನಾವು ಬದ್ದರಿದ್ದೇವೆ ಎಂದು ಭರವಸೆ ನೀಡಿದರು.

ಗ್ರಾಮದ ಪ್ರತಿ ವ್ಯಕ್ತಿಯೂ ಆರ್ಥಿಕವಾಗಿ ಸಬಲರಾಗಬೇಕು ಎಂಬ ನಿಟ್ಟಿನಲ್ಲಿ ವಿವಿಧ ಜನಪರವಾದ ಯೋಜನೆಗಳನ್ನು ಜಾರಿಮಾಡಿದ್ದು, ಶೈಕ್ಷಣಿಕ ಮತ್ತು ಆರೋಗ್ಯ ವಿಚಾರದಲ್ಲಿ ಮಹತ್ತರವಾದ ಕೊಡುಗೆಯನ್ನು ನೀಡಿ ಜನರ ಜೀವನ ಮಟ್ಟದಲ್ಲಿ ಸುಧಾರಣೆ ತಂದಿದೆ ಎಂದು ಅವರು ತಿಳಿಸಿದರು.
ದೇಶ ಜಗತ್ತಿನ ಗುರುವಾಗುವ ದಾರಿಯಲ್ಲಿ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಸದೃಡಗೊಳಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕುದ್ರೋಳಿ ದೇವಸ್ಥಾನದ ಹಿರಿಯ
ಅರ್ಚಕ ಬೀರಣ್ಣ ಆತರ್, ಕಳ್ಳಿಗೆ ಗ್ರಾಮ ಪಂಚಾಯತ್ ಅಧ್ಯಕ್ಷೆ
ಯಶೋದಾ ದಯಾನಂದ, ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯರಾದ ಮನೋಜ್ ಕಳ್ಳಿಗೆ, ವಾರಿಜ ಚಂದ್ರಿಗೆ, ರೇಷ್ಮಾ ಬೆಂಜನಪದವು, ಪುರುಷೋತ್ತಮ ಕೊಟ್ಟಾರಿ, ಅಮ್ಮುಂಜೆ ಗ್ರಾಪಂ ಸದಸ್ಯ ರಾಧಾಕೃಷ್ಣ ‌ತಂತ್ರಿ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು