ಇತ್ತೀಚಿನ ಸುದ್ದಿ
ಬೋಳೂರಿನಲ್ಲಿ ಮಹಿಳೆಯರಿಗೆ ಬೃಹತ್ ಆರೋಗ್ಯ ಮೇಳ: ತಜ್ಞ ವೈದ್ಯರಿಂದ ತಪಾಸಣೆ
19/03/2023, 00:02

ಮಂಗಳೂರು(reporterkarnataka.com): ನಗರದ ಬೋಳೂರಿನಲ್ಲಿರುವ ಅಮೃತ ವಿದ್ಯಾಲಯದ ಆವರಣದಲ್ಲಿ ಭಾನುವಾರ ಮಾರ್ಚ್ 19ರಂದು ಮಹಿಳೆಯರಿಗೆ ಬೃಹತ್ ಉಚಿತ ಆರೋಗ್ಯ ಮೇಳ ಜರುಗಲಿದೆ.
ಅಮೃತ ಧ್ವನಿ, ಮಾತಾ ಅಮೃತಾನಂದಮಯಿ ಮಠದ ವತಿಯಿಂದ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ. ಕ.,
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ವೆನ್ಲಾಕ್ ಆಸ್ಪತ್ರೆ, ಆಯುಷ್ ಇಲಾಖೆ , ದೇರಳಕಟ್ಟೆಯ ಏನಪೋಯ ವಿಶ್ವವಿದ್ಯಾಲಯದ ಮೆಡಿಕಲ್ ಕಾಲೇಜು ಹಾಗೂ ರೋಟರಿ ಕ್ಲಬ್ ಮಂಗಳೂರು ಉತ್ತರ ಇವರ ಸಂಯುಕ್ತ ಆಶ್ರಯದಲ್ಲಿ ವಿವಿಧ ತಜ್ಞ ವೈದ್ಯರು ಮತ್ತು ಆರೋಗ್ಯ ಸೇವಾರ್ಥಿಗಳು ಕಣ್ಣಿನ ಚಿಕಿತ್ಸೆ, ಹಲ್ಲಿನ ಚಿಕಿತ್ಸೆ, ಮಹಿಳೆಯರ ಆರೋಗ್ಯ ತಪಾಸಣೆ, ಅಸಾಂಕ್ರಾಮಿಕ ರೋಗಗಳು, ಕ್ಯಾನ್ಸರ್ ತಪಾಸಣೆ,( Mammography, Pap test) , ಹಿರಿಯ ನಾಗರಿಕರ ಆರೋಗ್ಯ ಸಮಸ್ಯೆಗಳು, ವಾತರೋಗ, ಶ್ವಾಸರೋಗ ಇತ್ಯಾದಿ ಪ್ರಮುಖ ಸಮಸ್ಯೆಗಳ ತಪಾಸಣೆ ನಡೆಸಿ ಚಿಕಿತ್ಸಾ ಸಲಹೆ ನೀಡಲಿರುವರು.
ಬೆಳಗ್ಗೆ 9.00 ರಿಂದ ಮಧ್ಯಾಹ್ನ1.00 ಗಂಟೆಯ ತನಕ ಈ ಸೇವೆ ಲಭಿಸಲಿದೆ. ಮಹಿಳೆಯರು ಇದರ ಪ್ರಯೋಜನ ಪಡೆಯುವಂತೆ ಮನವಿ.