11:43 PM Tuesday21 - March 2023
ಬ್ರೇಕಿಂಗ್ ನ್ಯೂಸ್
ನಾಗಠಾಣ, ಇಂಡಿಯಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ; ಮಾಜಿ ಡಿಸಿಎಂ ಸವದಿ ನೇತೃತ್ವದಲ್ಲಿ… ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ದೂರು ನೀಡಿ ಲಕ್ಷ್ಮಣ ಸವದಿ ಬುದ್ದಿವಂತ ರಾಜಕಾರಣಿ, ಆದರೆ ಯಾಕೆ ಹಿಂಗೆ ಮಾಡುತ್ತಿದ್ದಾರೆ ಗೊತ್ತಿಲ್ಲ: ಮಾಜಿ… ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಶಾಸಕ ರಾಜೇಶ್ ನಾಯ್ಕ್… ಮಂಗಳೂರು ಉತ್ತರ ಸಂಚಾರಿ ಠಾಣೆ ನೂತನ ಕಟ್ಟಡ: ಶಾಸಕ ಡಾ. ಭರತ್ ಶೆಟ್ಟಿ… ಪಾಲಿಕೆ ಕಂಬ್ಳ ವಾರ್ಡ್‌ನಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣ: ಶಾಸಕ ವೇದವ್ಯಾಸ ಕಾಮತ್… ಬಂಟ್ವಾಳ ಪ್ರಜಾಧ್ವನಿ ಯಾತ್ರೆ: ಪಣೋಲಿಬೈಲ್ ದೈವಸ್ಥಾನಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ;… ಎಎಪಿ ಮೊದಲ ಪಟ್ಟಿ ಬಿಡುಗಡೆ: ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಂತೋಷ್ ಕಾಮತ್, ಮೂಡಬಿದರೆಯಿಂದ… ಜನಸಾಮಾನ್ಯರ ತಾಸುಗಟ್ಟಲೆ ಕಾಯಿಸಿದ ಪಾಲಿಕೆ ಕಮಿಷನರ್: ಸಾರ್ವಜನಿಕರಿಂದ ತರಾಟೆ, ತೀವ್ರ ಆಕ್ಷೇಪ ಕನ್ಯಾನದಲ್ಲಿ ಬಂಟ್ವಾಳ ಪ್ರಜಾಧ್ವನಿ 9ನೇ ದಿನದ ಯಾತ್ರೆ: ಅಪಪ್ರಚಾರದ ಮೂಲಕ ನನ್ನ ಸೋಲಿಸಲಾಯಿತು:…

ಇತ್ತೀಚಿನ ಸುದ್ದಿ

ನಂತೂರು ಸರ್ಕಲ್: ಸ್ಕೂಟರ್ ಗೆ ಟಿಪ್ಪರ್ ಡಿಕ್ಕಿ; ತಂದೆ- ಮಗಳು ಸ್ಥಳದಲ್ಲೇ ದಾರುಣ ಸಾವು; ಚಾಲಕನ ಥಳಿಸಿದ ಸಾರ್ವಜನಿಕರು

18/03/2023, 14:36

ಮಂಗಳೂರು(reporterkarnataka.com): ಸ್ಕೂಟರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ತಂದೆ- ಮಗಳು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ನಗರದ ನಂತೂರು ವೃತ್ತದ ಬಳಿ ಶನಿವಾರ ನಡು ಮಧ್ಯಾಹ್ನ ನಡೆದಿದೆ.
ಮೃತರನ್ನು ಬಲ್ಮಠದ ಸ್ಯಾಮುವೆಲ್ ಜೇಸುದಾಸ್ ಹಾಗೂ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಸ್ಯಾಮುವೆಲ್ ಅವರು ತನ್ನ ಮಗಳ ಜತೆ ಸ್ಕೂಟರಿನಲ್ಲಿ ರಸ್ತೆ ದಾಟಲು ವೃತ್ತದ ಬಳಿ ಕಾಯುತ್ತಿದ್ದ ವೇಳೆ ಏಕಾಏಕಿ ಲಾರಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದೆ. ಸ್ಕೂಟರ್ ನಲ್ಲಿ ಇದ್ದ ತಂದೆ- ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಅಲ್ಲಿದ್ದ ಸಾರ್ವಜನಿಕರು ತಕ್ಷಣ ಟಿಪ್ಪರ್ ಚಾಲಕನನ್ನು ಹಿಡಿದು ಥಳಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಸಂಚಾರ ದಟ್ಟಣೆಯಾಗಿ
ಟ್ರಾಫಿಕ್ ಜಾಮ್ ಉಂಟಾಯಿತು. ಕದ್ರಿ ಪೊಲೀಸರು ಸ್ಥಳಕ್ಕೆ ಬಂದು ಸಂಚಾರ ವ್ಯವಸ್ಥೆ ಸುಗಮಗೊಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು