7:33 PM Saturday20 - April 2024
ಬ್ರೇಕಿಂಗ್ ನ್ಯೂಸ್
ಮಂಗಳೂರು ಮಾಜಿ ಮೇಯರ್ ಕವಿತಾ ಸನಿಲ್ ಬಿಜೆಪಿ ಸೇರ್ಪಡೆ: ಪಕ್ಷದ ಧ್ವಜ ನೀಡಿ… ಮಂಗಳೂರಿನಲ್ಲಿ ಕರ್ಕಶ ಹಾರ್ನ್ ಗಳ ಕಿರಿಕಿರಿ ತಪ್ಪಿಸಲು ಪೊಲೀಸ್ ಕಾರ್ಯಾಚರಣೆ: ಹಾರ್ನ್ ಕಿತ್ತೆಸೆದು… ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್…

ಇತ್ತೀಚಿನ ಸುದ್ದಿ

ಬೆಳ್ತಂಗಡಿ: ಕೈ- ಕಮಲ ನಡುವೆ ನೇರ ಸ್ಪರ್ಧೆಯಲ್ಲಿ ಈ ಬಾರಿ ಎತ್ತಂಗಡಿ ಯಾರು?

18/03/2023, 16:31

ಅಶೋಕ್ ಕಲ್ಲಡ್ಕ ಮಂಗಳೂರು
ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ಪಶ್ಚಿಮಘಟ್ಟಗಳ ತಪ್ಪಲಿನಲ್ಲಿರುವ ಬೆಳ್ತಂಗಡಿ ವಿಧಾನಸಭೆ ಕ್ಷೇತ್ರ ಹತ್ತು ಹಲವು ಕಾರಣಗಳಿಗೆ ಮಹತ್ವ ಪಡೆದಿದೆ. ಪವಿತ್ರ ಯಾತ್ರಾಸ್ಥಳವಾದ ಧರ್ಮಸ್ಥಳ ಇದೇ ಕ್ಷೇತ್ರದ ಪರಿಧಿಯೊಳಗೆ ಬರುತ್ತದೆ. ಅರೆ ಮಲೆನಾಡಿನಿಂದಾವೃತವಾದ ಬೆಳ್ತಂಗಡಿ ಕ್ಷೇತ್ರ ಉಳ್ಳವರ ಹಾಗೂ ಇಲ್ಲದವರ ನಡುವಿನ ಸಂಘರ್ಷಕ್ಕೂ ಮಹತ್ವ ಪಡೆದಿದೆ. ಇದೀಗ ಇಲ್ಲಿ ಚುನಾವಣೆಯ ಕಾವು ಏರತೊಡಗಿದೆ.

ಬೆಳ್ತಂಗಡಿ ಕ್ಷೇತ್ರದಲ್ಲಿ ಪ್ರತಿ ಬಾರಿಯ ಚುನಾವಣೆಯಲ್ಲೂ ನೇರ ಸ್ಪರ್ಧೆ ನಡೆಯುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ. ಆದರೆ ಒಂದು ಬಾರಿ ಜನತಾದಳದ ಅಭ್ಯರ್ಥಿಯಾಗಿಯೂ ವಸಂತ ಬಂಗೇರ ಗೆಲುವು ಸಾಧಿಸಿದ್ದಾರೆ. ಇದು ಬಂಗೇರ ಅವರ ವೈಯಕ್ತಿಕ ಗೆಲುವು ಹೊರತು, ಜನತಾ ದಳದಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.
ಕರ್ನಾಟಕ ವಿಧಾನಸಭೆಯ ಸ್ಪೀಕರ್ ಆಗಿದ್ದ ಸಜ್ಜನ ರಾಜಕಾರಣಿ ಬಂಟ್ವಾಳ ವೈಕುಂಠ ಬಾಳಿಗಾ ಅವರು ಇದೇ ಕ್ಷೇತ್ರದಿಂದ ಆಯ್ಕೆಯಾಗಿ ವಿಧಾನಸಭೆ ಮೆಟ್ಟಿಲೇರಿದ್ದರು. ಧರ್ಮಸ್ಥಳದ ರತ್ನವರ್ಮ ಹೆಗ್ಗಡೆ ಕೂಡ ಇಲ್ಲಿಂದಲೇ ಚುನಾಯಿತರಾಗಿದ್ದರು. ಇದೀಗ ಇಲ್ಲಿ ಬಿಜೆಪಿಯ ಹರೀಶ್ ಪೂಂಜ ಅವರು ಹಾಲಿ ಶಾಸಕರು. ಕಾಂಗ್ರೆಸ್ ನ ಬಿ. ವಸಂತ ಬಂಗೇರ ನಿಕಟಪೂರ್ವ‌ ಶಾಸಕ. ಈ ಬಾರಿ ಬಿಜೆಪಿಯಿಂದ ಹಾಲಿ ಶಾಸಕರೇ ಸ್ಪರ್ಧಿಸಿದರೆ, ಕಾಂಗ್ರೆಸ್ ನಿಂದ ರಕ್ಷಿತ್ ಶಿವರಾಂ ಅವರನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ. ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಅಣ್ಣನ ಮಗ ಈ ರಕ್ಷಿತ್. ಬಿಲ್ಲವ ಸಮುದಾಯದ ಅತ್ಯಧಿಕ ಮತದಾರರು ಬೆಳ್ತಂಗಡಿ ಕ್ಷೇತ್ರದಲ್ಲಿದ್ದಾರೆ. ರಕ್ಷಿತ್ ಶಿವರಾಂ ಕೂಡ ಬಿಲ್ಲವ ಜನಾಂಗಕ್ಕೆ ಸೇರಿದವರು.

ಮತದಾರರು ಎಷ್ಟಿದ್ದಾರೆ?: ಬೆಳ್ತಂಗಡಿ ಕ್ಷೇತ್ರದಲ್ಲಿ ಒಟ್ಟು 222144 ಮತದಾರರಿದ್ದಾರೆ. ಇದರಲ್ಲಿ ಪುರುಷರು 1,10,634 ಹಾಗೂ ಮಹಿಳೆಯರು 1,11,508 ಇದ್ದಾರೆ.
1957 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ರತ್ನವರ್ಮ ಹೆಗ್ಗಡೆ ಅವರು ಕ್ಷೇತ್ರದ ಪ್ರಥಮ ಶಾಸಕರಾಗಿ ಆಯ್ಕೆಗೊಂಡಿದ್ದರು.
ವಿಧಾನಸಭೆಯ ಸ್ಪೀಕರ್ ಆಗಿದ್ದ ಬಂಟ್ವಾಳ ವೈಕುಂಠ ಬಾಳಿಗಾ ಅವರು ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದರು.

ಸಹೋದರರ ಸವಾಲಿಗೂ ಬೆಳ್ತಂಗಡಿ ಕ್ಷೇತ್ರ
ಸಾಕ್ಷಿಯಾಗಿತ್ತು. ಸಹೋದರರಾದ ಕೆ.ವಸಂತ ಬಂಗೇರ ಹಾಗೂ ಪ್ರಭಾಕರ ಬಂಗೇರ ಅವರು ಅವರು ಬೇರೆ ಬೇರೆ ಪಕ್ಷದಿಂದ ಆಯ್ಕೆಯಾಗಿದ್ದರು.
5 ಚುನಾವಣೆಗಳಲ್ಲಿ ಪರಸ್ಪರ ಎದುರಾಳಿಯಾಗಿ ಸ್ಪರ್ಧಿಸಿದ್ದರು. 3 ಬಾರಿ ವಸಂತ ಬಂಗೇರ ಹಾಗೂ 2 ಬಾರಿ ಪ್ರಭಾಕರ ಬಂಗೇರ ಜಯ ಸಾಧಿಸಿದ್ದರು.
ಯಾರೆಲ್ಲ ಆಯ್ಕೆ?:
1957 – ರತ್ಮವರ್ಮ ಹೆಗ್ಗಡೆ(ಕಾಂಗ್ರೆಸ್).
1962- ಬಿ. ವೈಕುಂಠ ಬಾಳಿಗಾ (ಕಾಂಗ್ರೆಸ್)
1967- ಬಿ. ವೈಕುಂಠ ಬಾಳಿಗಾ (ಕಾಂಗ್ರೆಸ್)
1972-ಕೆ.ಸುಬ್ರಹ್ಮಣ್ಯ ಗೌಡ (ಕಾಂಗ್ರೆಸ್)
1978- ಗಂಗಾಧರ ಗೌಡ (ಕಾಂಗ್ರೆಸ್)
1983- ಕೆ.ವಸಂತ ಬಂಗೇರ ( ಬಿಜೆಪಿ)
1985- ವಸಂತ ಬಂಗೇರ (ಬಿಜೆಪಿ)
1989-ಗಂಗಾಧರ ಗೌಡ (ಕಾಂಗ್ರೆಸ್).
1994- ವಸಂತ ಬಂಗೇರ ( ಜೆಡಿಎಸ್)
1999-ಕೆ.ಪ್ರ‘ಭಾಕರ ಬಂಗೇರ-(ಬಿಜೆಪಿ)
2004- ಕೆ.ಪ್ರಭಾಕರ ಬಂಗೇರ-(ಬಿಜೆಪಿ)
2008- ಕೆ.ವಸಂತ ಬಂಗೇರ(ಕಾಂಗ್ರೆಸ್)
2013- ಕೆ.ವಸಂತ ಬಂಗೇರ (ಕಾಂಗ್ರೆಸ್)
2018- ಹರೀಶ್ ಪೂಂಜ( ಬಿಜೆಪಿ)

ಇತ್ತೀಚಿನ ಸುದ್ದಿ

ಜಾಹೀರಾತು