ಇತ್ತೀಚಿನ ಸುದ್ದಿ
ಚಿಣ್ಣರ ಜತೆ ನೆಲದ ಮೇಲೆ ಕುಳಿತು ಚೆನ್ನಾಗಿ ಊಟ ಸವಿದ ಶಾಸಕ ಕುಮಠಳ್ಳಿ!: ಶಾಸಕರ ಸರಳತೆಗೆ ಗ್ರಾಮಸ್ಥರ ಹರ್ಷ
16/03/2023, 21:13

ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಸರಳತೆಗೆ ಹೆಸರುವಾಸಿಯಾಗಿರುವ ಶಾಸಕ ಮಹೇಶ್ ಕುಮಠಳ್ಳಿ ಮತ್ತೊಮ್ಮೆ ಸರಳತೆ ಮೆರೆದು ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ತಂಗಡಿ ಗ್ರಾಮದ ಶಾಲೆಗೆ ಶಾಸಕರು ಭೇಟಿ ನೀಡಿ ಅಲ್ಲಿರುವ ಮಕ್ಕಳ ಜೊತೆ ನೆಲದ ಮೇಲೆ ಕುಳಿತು ಮಧ್ಯಾಹ್ನ ಬಿಸಿ ಊಟವನ್ನು ಶಾಸಕರು ಸವಿದರು.
ಕ್ಷೇತ್ರದಲ್ಲಿ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕಾಂಶ ಆಹಾರ ಸಿಗುತ್ತಿದೆ. ನಾವು ಕೂಡ ಹಲವು ಬಾರಿ ಸರ್ಪ್ರೈಸ್ ಆಗಿ ಶಾಲೆಗಳಿಗೆ ಭೇಟಿ ಕೊಡುತ್ತೇನೆ. ತಾಲೂಕಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಊಟ ತುಂಬಾ ಸಿಹಿಯಾಗಿದೆ ಮತ್ತು ಖಾರ ಸರಿಯಾದ ರೀತಿಯಲ್ಲಿ ಹಾಕಿದ್ದಾರೆ. ವಿವಿಧ ಬಗೆಯ ತರಕಾರಿಗಳು ಹಾಗೂ ಬೇಳೆಗಳನ್ನು ಬಳಸಿ ಉತ್ತಮ ವಾಗಿ ಆಹಾರವನ್ನು ತಯಾರಿಸಿದ್ದಾರೆ ಎಂದು ಊಟ ಮಾಡುತ್ತಾ ಶಾಸಕರು ಮಾಹಿತಿ ನೀಡಿದರು.