8:54 AM Sunday3 - March 2024
ಬ್ರೇಕಿಂಗ್ ನ್ಯೂಸ್
ದ. ಕ. ಮತ್ತು ಉಡುಪಿ ಪಂಚಾಯತ್‌ರಾಜ್ ಹಾಗೂ ನಗರ ಸ್ಥಳೀಯಾಡಳಿತ ಜನಪ್ರತಿನಿಧಿಗಳ ಕ್ರೀಡೋತ್ಸವ… ನವ ಮಂಗಳೂರು ಬಂದರು: 270 ಪ್ರಯಾಣಿಕರ ಹೊತ್ತ 5ನೇ ಕ್ರೂಸ್ ಹಡಗು ಆಗಮನ ಪಾಲಿಕೆಯ ಚರಿತ್ರೆಯಲ್ಲೇ ಮೊದಲ ಬಾರಿಗೆ ಅಂಗಳಕ್ಕೂ ತೆರಿಗೆ: ಪ್ರತಿಪಕ್ಷದ ನಾಯಕ ಪ್ರವೀಣ್ ಚಂದ್ರ… ಅಗಲಿದ ಹಿರಿಯ ಪತ್ರಕರ್ತ, ಸುದ್ದಿಲೋಕದ ಮೇರು ಪರ್ವತ ಮನೋಹರ್ ಪ್ರಸಾದ್ ಗೆ ಮಾಜಿ… ಹುಳಗಳಿದ್ದ ಅಕ್ಕಿಯಿಂದಲೇ ಬಿಸಿಯೂಟ ತಯಾರಿ: ವಡೇರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆ ವಿರುದ್ಧ ಗ್ರಾಮಸ್ಥರ… ಕ್ಯಾರಟ್‌ಲೇನ್: ತನಿಷ್ಕ್ ಪಾಲುದಾರಿಕೆಯಲ್ಲಿ ಮಂಗಳೂರಿನಲ್ಲಿ 2ನೇ ಮಳಿಗೆ ಆರಂಭ ಸುದ್ದಿಲೋಕದ ಮೇರು ಪರ್ವತ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಇನ್ನಿಲ್ಲ 44 ನಿಗಮ- ಮಂಡಳಿಗಳಿಗೆ ಅಧ್ಯಕ್ಷರ ನೇಮಕ: ಮಮತಾ ಗಟ್ಟಿಗೆ ಗೇರು, ಸದಾಶಿವ ಉಳ್ಳಾಲ್… ಬಲ್ಲಾಳರಾಯ ದುರ್ಗ: ಚಾರಣಕ್ಕೆ ಬಂದು ದಟ್ಟಾರಣ್ಯದಲ್ಲಿ ನಾಪತ್ತೆಯಾಗಿದ್ದ ಯುವಕ ಪತ್ತೆ: 3 ತಾಸಿಗೂ… ಶಕ್ತಿನಗರ: ಪೈಟಿಂಗ್ ಮಾಡುತ್ತಿದ್ದಾಗ ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಯುವಕ ದಾರುಣ ಮೃತ್ಯು

ಇತ್ತೀಚಿನ ಸುದ್ದಿ

‘ವಾಯ್ಸ್ ಆಫ್ ಆರಾಧನಾ’: ಫೆಬ್ರವರಿ ತಿಂಗಳ ಟಾಪರ್ ಆಗಿ ಹನ್ಶಿತ್ ಆಳ್ವ ಹಾಗೂ ವೃಥಿಕಾ ಪೂಜಾರಿ ಆಯ್ಕೆ

07/03/2023, 16:24

ಮೂಡುಬಿದರೆ(reporterkarnataka.com): ಆರದಿರಲಿ ಬದುಕು ಆರಾಧನಾ ಸಂಸ್ಥೆಯು ರಿಪೋರ್ಟರ್ ಕರ್ನಾಟಕ ಸಹಯೋಗದಲ್ಲಿ ಪ್ರತಿ ತಿಂಗಳು ನಡೆಸುವ ‘ವಾಯ್ಸ್ ಆಫ್ ಆರಾಧನಾ’ ಕಾರ್ಯಕ್ರಮದಲ್ಲಿ ಫೆಬ್ರವರಿ ತಿಂಗಳ ಟಾಪರ್ ಆಗಿ
ಹನ್ಶಿತ್ ಆಳ್ವ ಹಾಗೂ ವೃಥಿಕಾ ಪೂಜಾರಿ ಅವರು ಆಯ್ಕೆಯಾಗಿದ್ದಾರೆ.


ಹನ್ಶಿತ್ ಅಳ್ವ ಕೊಣಾಜೆಯ ವಿಶ್ವಮಂಗಳ ಪ್ರಾಥಮಿಕ ಶಾಲೆ‌ಯ 4ನೇ ತರಗತಿ ವಿದ್ಯಾರ್ಥಿ. ಚಿಕ್ಕಂದಿನಲ್ಲಿಯೇ ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಕುಂಬಳೆಯ ಗೋಕುಲ ನಗರ ಗೆಳೆಯರ ಬಳಗ ಕೃಷ್ಣಲೀಲೋತ್ಸವದಲ್ಲಿ ನಿರಂತರ ಎರಡು ವರುಷ ಪ್ರಥಮ ಬಹುಮಾನ ಪಡೆದಿರುತ್ತಾನೆ. ಮುದ್ದುಕೃಷ್ಣ ಸಾಂಸ್ಕ್ರತಿಕ ಟ್ರಸ್ಟ್ ತೊಕ್ಕೊಟ್ಟು ಇಲ್ಲಿ 2019 ರಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿರುತ್ತಾನೆ. 2020 ರಲ್ಲಿ ನಡೆದ ಮುಳಿಯ ಜ್ಯುವೆಲ್ಲರ್ಸ್ ಪುತ್ತೂರು ಇವರ ಛದ್ಮವೇಷ‌ ಸ್ಪರ್ಧೆಯಲ್ಲೂ(ಆನ್ ಲೈನ್) ದ್ವಿತೀಯ ಬಹುಮಾನ ಪಡೆದಿರುತ್ತಾನೆ. NCDC( National child development Council) ಇವರ ಆಶ್ರಯದಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಯಲ್ಲಿ ಪ್ರಥಮ‌ ಬಹುಮಾನ ಪಡೆದಿದ್ದಾನೆ. ವಿಟ್ಲ ಮಾದರಿ ಶಾಲೆಯಲ್ಲಿ ನಡೆದ ಪ್ರಶಸ್ತಿ ವಿಜೇತ ಯುವಕ ಮಂಡಲದ ಕೃಷ್ಣವೇಷ ಬಾಲಮುರಳಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾನೆ. ಶಾಲಾ ಮಟ್ಟದಲ್ಲೂ ಕ್ರೀಡೆಯಲ್ಲಿ, ಕಲಿಕೆ ಯಲ್ಲೂ ಮುಂದಿದ್ದು ,ಇನ್ನಿತರ ಚಟುವಟಿಕೆಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದಾನೆ.
ಬಾಕ್ರಬೈಲಿನಲ್ಲಿ ಸೂರೇಶ್ವರ ದೇವರ ಸಮ್ಮುಖದಲ್ಲಿ ದೇವಸ್ಥಾನದಲ್ಲಿ ನಡೆದ ಅಷ್ಟವಧಾನ ಸೇವೆಯಲ್ಲಿ ಅತೀ ಕಿರಿಯ ವಯಸ್ಸಿನಲ್ಲಿ ಭರತನಾಟ್ಯ ಪ್ರಸ್ತುತ ಪಡಿಸಿದ್ದಾನೆ. ಸಂಗೀತ ಹಾಗೂ ಭರತನಾಟ್ಯ ವನ್ನು ಅಭ್ಯಾಸಿಸುತ್ತಿದ್ದಾನೆ. ಹಲವಾರು ಭಜನೆಗಳನ್ನು ನಗರ ಭಜನೆಗಳಲ್ಲಿ ಪ್ರಸ್ತುತ ಪಡಿಸಿದ್ದಾನೆ. 2022 ರಲ್ಲಿ ಗೋಕುಲ ನಗರ ಗೆಳೆಯರ ಬಳಗ ಕುಂಬಳೆ ಕಾಸರಗೋಡು , ಶ್ರೀ ಸ್ವಚಿ ಕಲಾ ಆರ್ಟ್ ಮಾರ್ನಮಿಕಟ್ಟೆ,ಮಂಗಳೂರು, ಶ್ರೀ ಕೃಷ್ಣ ಭಜನಾ ಮಂದಿರ ಸುದರ್ಶನ ನಗರ ಪಜೀರು, ಮಂಗಳೂರು, ಸಾರ್ವಜನಿಕ ಶ್ರೀ ಕೃಷ್ಣ ಜಯಂತೋತ್ಸವ ಸಮಿತಿ ಅತ್ತಾವರ ಮಂಗಳೂರು, ಇಲ್ಲಿ ನಡೆದ ಕೃಷ್ಣವೇಷ ಸ್ಪರ್ಧೆಗಳಲ್ಲಿ ಪ್ರಥಮ, ದುರ್ಗಾಸ್ವಾತಿ ನೃತ್ಯಾಲಯ ಕುತ್ತಾರು ಮಂಗಳೂರು, ನೃತ್ಯಾರಾಧನೆ ಯಲ್ಲಿ ಭರತನಾಟ್ಯ ದ್ವಿತೀಯ, ಕಲಾ ಪ್ರತಿಭೆ ,ಆಮಂತ್ರಣ ಇವರು ನಡೆಸಿದ ನೃತ್ಯ ಸ್ಪರ್ಧೆಯಲ್ಲಿ ವಿಜೇತ,ಆಮಂತ್ರಣ ಮತ್ತು ಸಂಸ್ಕ್ರತ ಸಿರಿ ರೋಟರಿ‌ ಕ್ಲಬ್ ಮಡಂತ್ಯಾರು ಇವರು ನಡೆಸಿದ ನೃತ್ಯಸ್ಪರ್ಧೆಯಲ್ಲಿ ವಿಜೇತ, ಕ್ಲಸ್ಟರ್‌ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಪ್ರಥಮ, ಕಲಾ ಕುಸುಮ ಕ್ರಿಯೇಷನ್ಸ್ ಇವರ ತ್ಯಾಗಮಯಿ ಕಿರುಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದಾನೆ. ಖ್ಯಾತ ತುಳು ಚಿತ್ರನಟ ಅರವಿಂದ ಬೋಳಾರ್ ಜೊತೆ ಜಾಹೀರಾತಿನಲ್ಲಿ ಭಾಗವಹಿಸಿದ್ದಾನೆ.ರಾಗ ತರಂಗ (ರಿ) ಮಂಗಳೂರು ಇವರ ಬಾಲಪ್ರತಿಭೋತ್ಸವ ಮತ್ತು ನಿನಾದ 2022ರಲ್ಲಿ ಅಂತರ್ ಜಿಲ್ಲಾ ಮಟ್ಟದ ಛದ್ಮವೇಷದಲ್ಲಿ ದ್ವೀತೀಯ, ಶಾರದ ವಿಧ್ಯಾನಿಖೇತನ ತಲಪಾಡಿ ಇವರ ಆಶ್ರಯದಲ್ಲಿ ನಡೆದ ರ‌್ಯಾಪೋರ್ಟ್ ಸೂಪರ್ ಕಿಡ್ 2023 ಇದರಲ್ಲಿ ಪ್ರಥಮ ಬಹುಮಾನ, ಜ್ಞಾನ ಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ, ಬೆಂಗಳೂರು, ಶ್ರೀ ಜ್ಞಾನ ಮಂದಾರ ಟ್ರಸ್ಟ್ (ರಿ)ಬೆಂಗಳೂರು .ಇವರ ಆಶ್ರಯದಲ್ಲಿ ಕನ್ನಡ ಕಲಾ ಪ್ರತಿಭೋತ್ಸವ -2023ರಲ್ಲಿ ಪ್ರತಿಷ್ಠಿತ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿಯನ್ನು ಹನ್ಶಿತ್ ಆಳ್ವ ಬಾಕ್ರಬೈಲ್ ಅವರು ಪಡೆದಿದ್ದಾರೆ.ಇದುವರೆಗೂ ಕನಿಷ್ಠ ಮೂವತ್ತಕ್ಕೂ ಮಿಕ್ಕಿ ವೇದಿಕೆಗಳಲ್ಲಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.
ಹನ್ಶಿತ್ ಆಳ್ವ ಬಾಕ್ರಬೈಲ್ ಗಣೇಶ್ ಆಳ್ವ ನೀರ್ಚಾಲ್( ಮುಂಬೈ) ಬಬಿತಾ ಆಳ್ವ ಅವರ ಪುತ್ರರಾಗಿದ್ದು,ವಿಶ್ವಮಂಗಳ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾನೆ. ಭರತನಾಟ್ಯವನ್ನು ವಿದುಷಿ ಉಮಾ ವಿಷ್ಣು ಹೆಬ್ಬಾರ್ ಹಾಗೂ ಸಂಗೀತವನ್ನು ಮಂಜುಳಾ ಜಿ. ರಾವ್ ಅವರಲ್ಲಿ , ಕರಾಟೆಯನ್ನು ಸಂಪತ್ ಅವರಲ್ಲಿ ಮತ್ತು ಯಕ್ಷಗಾನ ಮತ್ತು ಭಾಗವತಿಕೆಯನ್ನು ಪ್ರಸಾದ್ ಚೇರ್ಕಾಡಿ ಅವರಲ್ಲಿ ಕಲಿಯುತ್ತಿದ್ದಾನೆ.
ಬೈಂದೂರಿನ ನಾಯ್ಕಕಟ್ಟೆಯ ಪ್ರಭಾಕರ್ ಪೂಜಾರಿ ಹಾಗೂ ಮಾಲತಿ ಅವರ ಪುತ್ರಿ ವೃಥಿಕಾ ಪೂಜಾರಿ. ಈಕೆ ಬೆಂಗಳೂರಿನ ಕಾಟನ್ ಪೇಟೆಯ ಐಸಾಕ್ ನ್ಯೂಟನ್ ಇಂಗ್ಲಿಷ್ ಸ್ಕೂಲ್ ನಲ್ಲಿ ಎಲ್ ಕೆಜಿಯಲ್ಲಿ ವ್ಯಾಸಂಗ ಪಡೆಯುತ್ತಿದ್ದಾಳೆ. ಜೊತೆಗೆ ಶ್ರೀ ಲಲಿತಾ ಕಲಾನಿಕೇತನದ ರೇಖಾ ಜಗದೀಶ್ ಬಳಿ ಭರತನಾಟ್ಯ ಅಭ್ಯಾಸವನ್ನು ಮಾಡುತ್ತಿದ್ದಾಳೆ. ಹಾಗೆ ಕೆಲವು ಭರನಾಟ್ಯಂ ಸ್ಟೇಜ್ ಪ್ರೋಗ್ರಾಮ್ ಅನ್ನು ಕೂಡ ನೀಡಿದ್ದಾಳೆ. ತನ್ನ 3ನೇ ವಯಸ್ಸಿನಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ಅನ್ನು ಪಡೆದಿರುತ್ತಾಳೆ. ಕಲಿಕೆಯಲ್ಲಿ ಸದಾ ಮುಂದಿರುವ ವೃಥೀಕಾ ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳ ಹೆಸರುಗಳು, ಭಾರತದ ರಾಜ್ಯಗಳ ಹೆಸರುಗಳು, ಕರ್ನಾಟಕದ ಜಿಲ್ಲೆಗಳ ಹೆಸರುಗಳು, ಪ್ರಪಂಚದ ಏಳು ಖಂಡಗಳ ಹೆಸರುಗಳು, ಕರ್ನಾಟಕದ ಜ್ಞಾನಪೀಠ ಪುರಸ್ಕೃತರ ಹೆಸರುಗಳು, ರಾಷ್ಟ್ರಗೀತೆ, ಏಷ್ಯಾ ಖಂಡದ 48 ದೇಶಗಳ ಹೆಸರುಗಳು, ಭಾರತದ ಮತ್ತು ಕರ್ನಾಟಕದ ಐತಿಹಾಸಿಕ ಸ್ಥಳಗಳ ಹೆಸರುಗಳು, ಕರ್ನಾಟಕದ ನದಿಗಳ ಹೆಸರುಗಳು, ಗ್ರಹಗಳ ಹೆಸರುಗಳು, ಪ್ರಪಂಚದ ಏಳು ಅದ್ಭುತಗಳ ಹೆಸರುಗಳು, ವಿಜ್ಞಾನಿಗಳ ಹೆಸರುಗಳು, ಗಾಯತ್ರಿ ಮಂತ್ರ, ಜಲ ಮೂಲಗಳ ಹೆಸರುಗಳು, ರಾಷ್ಟ್ರೀಯ ಹಬ್ಬಗಳ ಹೆಸರುಗಳು ಇತ್ಯಾದಿ.. ಹಾಗೆಯೇ ಕೆಲವು ಪ್ರಶಸ್ತಿ ಮತ್ತು ಮೆಡಲ್ ನ್ನು ಪಡೆದುಕೊಂಡಿರುತ್ತಾಳೆ.

ಇತ್ತೀಚಿನ ಸುದ್ದಿ

ಜಾಹೀರಾತು