10:43 PM Tuesday21 - March 2023
ಬ್ರೇಕಿಂಗ್ ನ್ಯೂಸ್
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ದೂರು ನೀಡಿ ಲಕ್ಷ್ಮಣ ಸವದಿ ಬುದ್ದಿವಂತ ರಾಜಕಾರಣಿ, ಆದರೆ ಯಾಕೆ ಹಿಂಗೆ ಮಾಡುತ್ತಿದ್ದಾರೆ ಗೊತ್ತಿಲ್ಲ: ಮಾಜಿ… ಬಂಟ್ವಾಳ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ: ಶಾಸಕ ರಾಜೇಶ್ ನಾಯ್ಕ್… ಮಂಗಳೂರು ಉತ್ತರ ಸಂಚಾರಿ ಠಾಣೆ ನೂತನ ಕಟ್ಟಡ: ಶಾಸಕ ಡಾ. ಭರತ್ ಶೆಟ್ಟಿ… ಪಾಲಿಕೆ ಕಂಬ್ಳ ವಾರ್ಡ್‌ನಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣ: ಶಾಸಕ ವೇದವ್ಯಾಸ ಕಾಮತ್… ಬಂಟ್ವಾಳ ಪ್ರಜಾಧ್ವನಿ ಯಾತ್ರೆ: ಪಣೋಲಿಬೈಲ್ ದೈವಸ್ಥಾನಕ್ಕೆ ಮಾಜಿ ಸಚಿವ ರಮಾನಾಥ ರೈ ಭೇಟಿ;… ಎಎಪಿ ಮೊದಲ ಪಟ್ಟಿ ಬಿಡುಗಡೆ: ಮಂಗಳೂರು ದಕ್ಷಿಣ ಕ್ಷೇತ್ರದಿಂದ ಸಂತೋಷ್ ಕಾಮತ್, ಮೂಡಬಿದರೆಯಿಂದ… ಜನಸಾಮಾನ್ಯರ ತಾಸುಗಟ್ಟಲೆ ಕಾಯಿಸಿದ ಪಾಲಿಕೆ ಕಮಿಷನರ್: ಸಾರ್ವಜನಿಕರಿಂದ ತರಾಟೆ, ತೀವ್ರ ಆಕ್ಷೇಪ ಕನ್ಯಾನದಲ್ಲಿ ಬಂಟ್ವಾಳ ಪ್ರಜಾಧ್ವನಿ 9ನೇ ದಿನದ ಯಾತ್ರೆ: ಅಪಪ್ರಚಾರದ ಮೂಲಕ ನನ್ನ ಸೋಲಿಸಲಾಯಿತು:… ಕನ್ನಡಿಗ ಛಾಯಾಗ್ರಾಹಕ, ‘ಪೊರ್ಲು’ ಖ್ಯಾತಿಯ ಜಿನೇಶ್ ಪ್ರಸಾದ್ ಗೆ ರಾಷ್ಟ್ರೀಯ ‘ಚಿತ್ರಾಂಜಲಿ ಪ್ರಶಸ್ತಿ’…

ಇತ್ತೀಚಿನ ಸುದ್ದಿ

ಶಾರ್ಜಾದಲ್ಲಿ ಅಂತಾರಾಷ್ಟೀಯ ಪ್ಯಾರಾ ಅಥ್ಲೆಟಿಕ್: ಚಿಕ್ಕಮಗಳೂರಿನ ರಾಧಾಗೆ ಚಿನ್ನ, ರಕ್ಷಿತಾ ರಾಜುಗೆ ಬೆಳ್ಳಿ

23/02/2023, 19:12

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ದುಬೈಯ ಶಾರ್ಜಾದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಶಾಲೆಯ ವಿದ್ಯಾರ್ಥಿನಿಯರಾದ ರಾಧಾ ವೆಂಕಟೇಶ್ ಪ್ರಥಮ ಹಾಗೂ ರಕ್ಷಿತಾರಾಜು ದ್ವಿತೀಯ ಸ್ಥಾನ ಪಡೆದು ಅಕ್ಟೋಬರ್ ನಲ್ಲಿ ಚೀನಾದಲ್ಲಿ ನಡೆಯುವ ಪ್ಯಾರಾ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಸಾಯಿ ಕ್ರೀಡಾ ಹಾಸ್ಟೆಲ್ ನಲ್ಲಿ ಕ್ರೀಡಾಭ್ಯಾಸ ಮಾಡುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು ಕೋಚ್ ರಾಹುಲ್ ಬಾಲಕೃಷ್ಣ, ಗೋವಿಂದ್, ಸೌಮ್ಯ ಸಾವಂತ್,ಗೈಡ್ ರನ್ನರ್ ತಬರೇಶ್ ಗರಡಿಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದು ಕಳೆದ ಬಾರಿ ದೆಹಲಿಯಲ್ಲಿ ನಡೆದ 400ಮೀ,800ಮೀ ಹಾಗೂ 1500ಮೀ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು. ಬುಧವಾರ ಶಾರ್ಜಾದಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಮೀಟ್ ನಲ್ಲಿ ಟಿ12 ವಿಭಾಗದ ಕ್ರೀಡಾಕೂಟದ 1500 ಮೀ ಓಟದಲ್ಲಿ ರಾಧಾವೆಂಕಟೇಶ್ 5:16,77 ನಿಮಿಷದಲ್ಲಿ ಕ್ರಮಿಸಿ ಚಿನ್ನದ ಪದಕ ಪಡೆದಿದ್ದಾರೆ.ಟಿ11 ವಿಭಾಗದ 1500ಮೀ ಓಟದಲ್ಲಿ ರಕ್ಷಿತಾರಾಜು 5:44,67ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.ರಾಧಾ ವೆಂಕಟೇಶ್ ಮೂಲತ: ಚಿತ್ರದುರ್ಗದ ಹೊಳಲ್ಕೆರೆ ಯವರಾಗಿದ್ದು,ರಕ್ಷಿತಾ ರಾಜು ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಗುಡ್ನಳ್ಳಿ ಗ್ರಾಮದವರಾಗಿದ್ದಾರೆ. ಇವರ ಸಾಧನೆಗೆ ಆಶಾ ಕಿರಣ ಶಾಲೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗ ಹಾಗೂ ಕ್ರೀಡಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು