ಇತ್ತೀಚಿನ ಸುದ್ದಿ
ಅಭ್ಯರ್ಥಿಗಳ ಆಯ್ಕೆ: ಇಂದು ಕಾಂಗ್ರೆಸ್ ಮಹತ್ವದ ಸಭೆ; ಶೀಘ್ರದಲ್ಲೇ 150 ಮಂದಿಯ ಪಟ್ಟಿ ಬಿಡುಗಡೆ
02/02/2023, 09:28

ಬೆಂಗಳೂರು(reporterkarnataka.com): ರಾಜ್ಯ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಿಟ್ಟಿನಲ್ಲಿ ಇಂದು ಕಾಂಗ್ರೆಸ್ ನ ಮಹತ್ವದ ಸಭೆ ನಡೆಯಲಿದೆ. ನಂತರ 150 ಮಂದಿಯ ಮೊದಲ ಪಟ್ಟಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಪಕ್ಷದ ಜಿಲ್ಲಾ ಘಟಕಗಳು ಮಾಡಿರುವ ಶಿಫಾರಸು, ಕೆಪಿಸಿಸಿ ಕಾರ್ಯಾಧ್ಯಕ್ಷರು ತಯಾರಿಸಿದ ಪಟ್ಟಿ, ಕೆಪಿಸಿಸಿ ಅಧ್ಯಕ್ಷರು ನಡೆಸಿದ ಸರ್ವೇ ಹಾಗೂ ಪ್ರತಿಪಕ್ಷದ ನಾಯಕರು ನಡೆಸಿದ ಸರ್ವೇ ವರದಿಯನ್ನು ಕ್ರೋಢಿಕರಿಸಿ ಚರ್ಚೆ ನಡೆಯಲಿದೆ.