ಇತ್ತೀಚಿನ ಸುದ್ದಿ
ಸಿಡಿ ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಅಥಣಿ ಶಾಸಕ ಕುಮಠಳ್ಳಿ
31/01/2023, 11:16

ರಾಹುಲ್ ಅಥಣಿ ಬೆಳಗಾವಿ
info.reporterkarnataka agnail.com
ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸಿಬಿಐ ತನಿಖೆಗೆ ಒತ್ತಾಯಿಸಿದ ಬೆನ್ನಲ್ಲೆ ಅವರ ಬೆಂಬಲಿಗ ಶಾಸಕ ಮಹೇಶ ಕುಮಠಳ್ಳಿ ಸಿಡಿ ಪ್ರಕರಣವನ್ನ ಸಿಬಿಐಗೆ ವಹಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಸಿಡಿ ಪ್ರಕರಣ ಸಿಬಿಐ ತನಿಖೆಗೆ ವಹಿಸಬೇಕು. ಆಗ ಪ್ರಕರಣ ಸ್ವಚ್ಛವಾಗುತ್ತದೆ ಎಂದು ಪ್ರತಿಕ್ರಿಯಿಸಿದರು.
ರಮೇಶ್ ಜಾರಕಿಹೊಳಿ ಅವರನ್ನು ಷಡ್ಯಂತ್ರ ಮಾಡಿ ಸಿಲುಕಿಸಲಾಗಿದೆ. ನಾನು ಮೊದಲಿಂದಲೂ ಇದನ್ನೇ ಹೇಳಿಕೊಂಡು ಬಂದಿದ್ದೇನೆ. ಮೊದಲು ರಾಜ್ಯರ ಕಾಲದಲ್ಲಿ ವಿಷಕನ್ಯೆ ಇದ್ದರು. ಅದೇ ರೀತಿಯಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ಪ್ರಕರಣದಲ್ಲಿ ಸಿಗಿಸಲಾಗಿದೆ ಎಂದು ರಮೇಶ ಪರ ಕುಮಠಳ್ಳಿ ಬ್ಯಾಟ್ ಬೀಸಿದ್ದಾರೆ.