7:12 PM Thursday2 - February 2023
ಬ್ರೇಕಿಂಗ್ ನ್ಯೂಸ್
ಸಮುದ್ರ ಗಡಿ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಸೇವೆ ಅನನ್ಯ: ರೈಸಿಂಗ್ ಡೇ ಸಮಾರಂಭದಲ್ಲಿ… ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ವರ್ಗಾವಣೆ: ಚನ್ನಬಸಪ್ಪ ನೂತನ ಆಯುಕ್ತ ಅಭ್ಯರ್ಥಿಗಳ ಆಯ್ಕೆ: ಇಂದು ಕಾಂಗ್ರೆಸ್ ಮಹತ್ವದ ಸಭೆ; ಶೀಘ್ರದಲ್ಲೇ 150 ಮಂದಿಯ ಪಟ್ಟಿ… ಚಿಕ್ಕಮಗಳೂರು: ಕೈ ತೊರೆದು ಕಮಲ ಹಿಡಿದ ಕಾರ್ಯಕರ್ತನ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು ಕೇಂದ್ರ ಬಜೆಟ್: ಮೀನುಗಾರಿಕೆ ಅಭಿವೃದ್ಧಿಗೆ 6 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ… ರಾಜಕೀಯ ಮುತ್ಸದ್ಧಿ, ಕೇಂದ್ರ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಇನ್ನಿಲ್ಲ ದ.ಕ. ಜಿಲ್ಲಾ ಎಸ್ಪಿ ಸೋನಾವಾಣೆ ಋಷಿಕೇಷ್ ವರ್ಗಾವಣೆ: ಅಮಾಥೆ ವಿಕ್ರಂ ನೂತನ ಪೊಲೀಸ್… ದೇವೇಗೌಡ ಕುಟುಂಬ ಬಗ್ಗೆ ಅವಹೇಳನ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿರುದ್ಧ ಯುವ ಜೆಡಿಎಸ್… ಸಿಡಿ ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಅಥಣಿ… ಫಾಝೀಲ್ ಕೊಲೆ ಪ್ರಕರಣ ಮರು ತನಿಖೆಯಾಗಲಿ; ಹಿಂಸೆಗೆ ಪ್ರಚೋದಿಸುವವರ ಗಡಿಪಾರು ಮಾಡಿ: ಪ್ರತಿಪಕ್ಷದ…

ಇತ್ತೀಚಿನ ಸುದ್ದಿ

ಪುನೀತ್ ಉಪಗ್ರಹ ಚಿತ್ರಕಲಾ ಸ್ಪರ್ಧೆ: ಗಜೇಂದ್ರಗಡದ ಸುಹಾನ ತೋಟದ ಪ್ರಥಮ ಸ್ಥಾನ

03/12/2022, 19:11

ಗದಗ(reporterlarnataka.com): ಪುನೀತ್ ನ್ಯಾನೋ ಉಪಗ್ರಹ ಉಡಾವಣಾ ಯೋಜನೆಯಡಿ ಆಯೋಜಿಸಲಾಗಿದ್ದ ಆನ್‌ಲೈನ್ ಚಿತ್ರಕಲಾ ಸ್ಪರ್ಧೆಯಲ್ಲಿ ಗಜೇಂದ್ರಗಡದ ಬಾಲಕಿಯರ ಪ್ರೌಢಶಾಲೆಯ 9ನೇ ತರಗತಿ ವಿದ್ಯಾಾರ್ಥಿನಿ ಸುಹಾನ ರಾಜೇಸಾಬ ತೋಟದ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಶ್ರೀ ಮಹಾವೀರ ಜೈನ ಪ್ರಾಥಮಿಕ ಮತ್ತು ಪ್ರೌಢಶಾಲೆಯ 10ನೇ ತರಗತಿಯ ಪೂನಮ್ ಆರ್. ಕಟಿಗಾರ ದ್ವಿತೀಯ ಸ್ಥಾನ, ಗಜೇಂದ್ರಗಡ ಬಾಲಕಿಯರ ಪ್ರೌಢ ಶಾಲೆಯ 10ನೇ ತರಗತಿಯ ಅನು ಕಡಬಲಕಟ್ಟಿ ತೃತೀಯ ಸ್ಥಾನ ಪಡೆದಿದ್ದಾರೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿ ನಡೆಯಲಿರುವ ಪುನೀತ್ ಉಪಗ್ರಹ ಉಡಾವಣೆಯನ್ನು ವೀಕ್ಷಿಸಲು ರಾಜ್ಯದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆದರೆ ಪುನೀತ್ ಉಪಗ್ರಹ ಉಡಾವಣೆ ವೀಕ್ಷಿಸಲು ಅವಕಾಶ ಪಡೆಯಲು 8,9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ರಸಪ್ರಶ್ನೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಮೊದಲನೇ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ವಿದ್ಯಾಾರ್ಥಿಗಳನ್ನು ಎರಡನೇ ಹಂತದ ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗುತ್ತದೆ. ಇಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಉಚಿತವಾಗಿ ಶ್ರೀ ಹರಿಕೋಟಾಕ್ಕೆ ಕರೆದುಕೊಂಡು ಹೋಗಲಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ಪುನೀತ್_ ಉಪಗ್ರಹ (ಕೆಜಿಎಸ್-3 ಸ್ಯಾಟ್) ಉಡಾವಣೆ ಪ್ರಕ್ರಿಯೆ ವೀಕ್ಷಿಸಬಹುದಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು