8:47 PM Thursday2 - February 2023
ಬ್ರೇಕಿಂಗ್ ನ್ಯೂಸ್
ಸಮುದ್ರ ಗಡಿ ರಕ್ಷಣೆಯಲ್ಲಿ ಕೋಸ್ಟ್ ಗಾರ್ಡ್ ಸೇವೆ ಅನನ್ಯ: ರೈಸಿಂಗ್ ಡೇ ಸಮಾರಂಭದಲ್ಲಿ… ಮಂಗಳೂರು ಮಹಾನಗರಪಾಲಿಕೆ ಕಮಿಷನರ್ ಅಕ್ಷಯ್ ಶ್ರೀಧರ್ ವರ್ಗಾವಣೆ: ಚನ್ನಬಸಪ್ಪ ನೂತನ ಆಯುಕ್ತ ಅಭ್ಯರ್ಥಿಗಳ ಆಯ್ಕೆ: ಇಂದು ಕಾಂಗ್ರೆಸ್ ಮಹತ್ವದ ಸಭೆ; ಶೀಘ್ರದಲ್ಲೇ 150 ಮಂದಿಯ ಪಟ್ಟಿ… ಚಿಕ್ಕಮಗಳೂರು: ಕೈ ತೊರೆದು ಕಮಲ ಹಿಡಿದ ಕಾರ್ಯಕರ್ತನ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು ಕೇಂದ್ರ ಬಜೆಟ್: ಮೀನುಗಾರಿಕೆ ಅಭಿವೃದ್ಧಿಗೆ 6 ಸಾವಿರ ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ… ರಾಜಕೀಯ ಮುತ್ಸದ್ಧಿ, ಕೇಂದ್ರ ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಇನ್ನಿಲ್ಲ ದ.ಕ. ಜಿಲ್ಲಾ ಎಸ್ಪಿ ಸೋನಾವಾಣೆ ಋಷಿಕೇಷ್ ವರ್ಗಾವಣೆ: ಅಮಾಥೆ ವಿಕ್ರಂ ನೂತನ ಪೊಲೀಸ್… ದೇವೇಗೌಡ ಕುಟುಂಬ ಬಗ್ಗೆ ಅವಹೇಳನ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ವಿರುದ್ಧ ಯುವ ಜೆಡಿಎಸ್… ಸಿಡಿ ಪ್ರಕರಣ ಸಿಬಿಐಗೆ ವಹಿಸಿ: ರಮೇಶ ಜಾರಕಿಹೊಳಿ ಪರ ಬ್ಯಾಟ್ ಬೀಸಿದ ಅಥಣಿ… ಫಾಝೀಲ್ ಕೊಲೆ ಪ್ರಕರಣ ಮರು ತನಿಖೆಯಾಗಲಿ; ಹಿಂಸೆಗೆ ಪ್ರಚೋದಿಸುವವರ ಗಡಿಪಾರು ಮಾಡಿ: ಪ್ರತಿಪಕ್ಷದ…

ಇತ್ತೀಚಿನ ಸುದ್ದಿ

ನೆಲ್ಯಾಡಿ: ರಾಷ್ಟ್ರೀಯ ಐಕ್ಯತಾ ಸಪ್ತಾಹ; ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ ಉಪನ್ಯಾಸ

02/12/2022, 18:44

ನೆಲ್ಯಾಡಿ(reporterkarnataka.com):
ವಿಶ್ವವಿದ್ಯಾನಿಲಯ ಘಟಕ ಕಾಲೇಜು, ನೆಲ್ಯಾಡಿಯಲ್ಲಿ ಇತ್ತೀಚೆಗೆ ರಾಷ್ಟ್ರೀಯ ಐಕ್ಯತಾ ಸಪ್ತಾಹದ ಅಡಿಯಲ್ಲಿ ‘ಸುಸ್ಥಿರ ಅಭಿವೃದ್ಧಿ ಹಾಗೂ ಪರಿಸರ ಸಂರಕ್ಷಣೆ’ ಉಪನ್ಯಾಸ ಕಾರ್ಯಕ್ರಮವನ್ನು ಕಾಲೇಜಿನ ಅರ್ಥಶಾಸ್ತ್ರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಯಾಗಿ ರಾಯಚೂರಿನ ಮಸ್ಕಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ರಜಿಯಾ ಎಂ. ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸುಸ್ಥಿರ ಅಭಿವೃದ್ಧಿಯು ಚರ್ಚಿಸಿದಷ್ಟು ಮುಗಿಯದ ಒಂದು ಅಂತರ್ಗತ ವಿಷಯವಾಗಿದೆ. ಪರಿಸರವನ್ನು ಸಂರಕ್ಷಿಸಿ ನಾವು ಆರ್ಥಿಕ ಪ್ರಗತಿಯನ್ನು ಸಾಧಿಸಬೇಕಾಗಿದೆ. ಮಾನವನು ತನ್ನ ಸ್ವಹಿತದ ಸಾಧನೆಗೆ ಪ್ರಕೃತಿಯನ್ನು ಶೋಷಿಸುವುದು ಸರಿಯಲ್ಲ ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನೂರಂದಪ್ಪ ಅವರು ವಹಿಸಿದ್ದರು. ಆರ್ಥಿಕ ಅಭಿವೃದ್ಧಿಯು ಪ್ರಕೃತಿಗೆ ಹಾನಿಕಾರಕವಾಗಬಾರದು, ಸಂಪನ್ಮೂಲಗಳನ್ನು ಮಿತವಾಗಿ ಬಳಸಿಕೊಂಡು ಮುಂದಿನ ಪೀಳಿಗೆಗೂ ಕಾಪಾಡಿಕೊಳ್ಳಬೇಕು ಎಂದು ಅವರು ನುಡಿದರು.
ಕಾರ್ಯಕ್ರಮದ ಸಂಚಾಲಕರು ಹಾಗೂ ಅರ್ಥಶಾಸ್ತ್ರ ಸಂಘದ ಸಂಯೋಜಕರಾದ ಶ್ರುತಿ ಸ್ವಾಗತಿಸಿದರು. ಅರ್ಥಶಾಸ್ತ್ರ ಸಂಘದ ವಿದ್ಯಾರ್ಥಿ ಕಾರ್ಯದರ್ಶಿ ಧನ್ಯಶ್ರೀ ಅತಿಥಿಗಳ ವ್ಯಕ್ತಿ ಪರಿಚಯ ಮಾಡಿಕೊಟ್ಟರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಸ್ಫೂರ್ತಿ ಕೆ.ಟಿ. ವಂದಿಸಿದರು. ವಿದ್ಯಾರ್ಥಿನಿ ನುಸ್ರಿಲ್ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಅರ್ಥಶಾಸ್ತ್ರ ಸಂಘದ ಸಹ ಕಾರ್ಯದರ್ಶಿ ಸಂದೀಪ್ ಕುಮಾರ್ ಬಿ.ಎಂ ಉಪಸ್ಥಿತರಿದ್ದರು. ಕಾಲೇಜಿನ ಎಲ್ಲಾ ವಿಭಾಗದ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು