ಇತ್ತೀಚಿನ ಸುದ್ದಿ
ಮಳೆಗಾಲದಲ್ಲಿ ಬರ್ಕೆ ಪರಿಸರ ಮುಳುಗಡೆಗೆ ಶಾಶ್ವತ ಪರಿಹಾರ: ಶಾಸಕ ವೇದವ್ಯಾಸ ಕಾಮತ್
02/12/2022, 22:09

ಮಂಗಳೂರು(reporterkarnataka.com): ಪಾಲಿಕೆಯ ಮಣ್ಣಗುಡ್ಡೆ ವಾರ್ಡಿನಲ್ಲಿ 50 ಲಕ್ಷ ರೂಪಾಯಿ ವೆಚ್ಚದಲ್ಲಿ ತೋಡಿನ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಶಾಸಕ ಕಾಮತ್, ಮಿಷನ್ ಗೋರಿಯಿಂದ ಬರ್ಕೆ ವರೆಗಿನ ತೋಡಿನ ಆಯ್ದ ಭಾಗಗಳನ್ನು ಅಭಿವೃದ್ಧಿಪಡಿಸುವ ಕಾಮಗಾರಿಗೆ 50 ಲಕ್ಷ ರೂಪಾಯಿ ಅನುದಾನವನ್ನು ಸಣ್ಣ ನೀರಾವರಿ ಇಲಾಖೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದರು.
ಬರ್ಕೆ ಪರಿಸರವು ಪ್ರತಿ ಮಳೆಗಾಲದ ಸಮಯದಲ್ಲಿ ಮುಳುಗಡೆಯಾಗುತ್ತಿರುವುದನ್ನು ಮನಗಂಡು ಶಾಶ್ವತ ಪರಿಹಾರ ನೀಡುವ ದೃಷ್ಟಿಯಿಂದ ಯೋಜನೆ ರೂಪಿಸಲಾಗಿದೆ. 4 ವರ್ಷಗಳ ಹಿಂದಿನ ಸಮಸ್ಯೆ ಅಲ್ಪ ಪ್ರಮಾಣದಲ್ಲಿ ಬಗೆಹರಿದಿದ್ದು, ಮನೆಯೊಳಗೆ ಮಳೆ ನೀರು ಹರಿಯುವ ಅತೀ ದೊಡ್ಡ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಸಂಧ್ಯಾ ಮೋಹನ್ ಆಚಾರ್, ಪಾಲಿಕೆ ಸದಸ್ಯರಾದ ಜಯಶ್ರೀ ಕುಡ್ವ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ ಶೆಟ್ಟಿ, ಮುಖಂಡರಾದ ಸುಧಾಕರ್ ಮೈೂಲಿ, ಗೋಕುಲ್ ದಾಸ್ ಭಟ್, ಗುರು ಚರಣ್, ವಸಂತ್ ಶೇಟ್, ಮೋಹನ್ ಆಚಾರ್,ಜನಾರ್ದನ್ ಕುಡ್ವ, ರಘುನಾಥ್ ಪ್ರಭು, ಶ್ರೀ ದೇವಿ ಆಚಾರ್ಯ, ರಾಮಚಂದ್ರ ಭಂಡಾರಿ, ರಾಜೇಂದ್ರ ಶೆಟ್ಟಿ, ಉಮೇಶ್ ಟೈಲರ್, ಭರತ್ ಭಟ್, ಪ್ರಮುಖರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.