10:11 PM Saturday3 - December 2022
ಬ್ರೇಕಿಂಗ್ ನ್ಯೂಸ್
ಚಿಕ್ಕಮಗಳೂರು: ನರಹಂತಕ ಸಲಗ ವಿರುದ್ಧ ಕಾರ್ಯಾಚರಣೆ; ಮತ್ತೊಂದು ಪುಂಡಾನೆ ಸೆರೆ ಪುನೀತ್ ಉಪಗ್ರಹ ಚಿತ್ರಕಲಾ ಸ್ಪರ್ಧೆ: ಗಜೇಂದ್ರಗಡದ ಸುಹಾನ ತೋಟದ ಪ್ರಥಮ ಸ್ಥಾನ ಹೊಸ ವರ್ಷಾಚರಣೆ ಸೂಚನೆ ಕಟ್ಟುನಿಟ್ಟಾಗಿ ಪಾಲಿಸಿ: ಮಂಗಳೂರು ಪೊಲೀಸ್ ಕಮಿಷನರ್ ನವ ಮಂಗಳೂರು ಬಂದರಿಗೆ ಆಗಮಿಸಿದ ‘ಸೆವೆನ್ ಸೀಸ್ ಎಕ್ಸ್‌ಪ್ಲೋರರ್: ಪ್ರಸಕ್ತ ಋತುವಿನ 2ನೇ… ಕಾಡಾನೆ ಸೆರೆ ಕಾರ್ಯಾಚರಣೆ 4ನೇ ದಿನಕ್ಕೆ: ಡ್ರೋನ್ ಕ್ಯಾಮರಕ್ಕೂ ಚಳ್ಳೆಹಣ್ಣು ತಿನ್ನಿಸಿದ ಮೂಡಿಗೆರೆ… ಆಧಾರ್ ಕಾರ್ಡ್‌ ಇದ್ದರೆ ಸಾಕು ನಿಮ್ಮ ಮನೆಗೆ ನಳ್ಳಿ ನೀರು ಸೌಲಭ್ಯ!: ರಾಜ್ಯ… ದ.ಕ. ಜಿಲ್ಲೆಯಲ್ಲಿ ದನಗಳಿಗೆ ಚರ್ಮಗಂಟು ರೋಗ: ಮುನ್ನೆಚ್ಚರಿಕೆ ವಹಿಸಲು ಸೂಚನೆ ಬಂಗಾಳ ಕೊಲ್ಲಿಯಲ್ಲಿ ಮತ್ತೆ ವಾಯುಭಾರ ಕುಸಿತ: ಚಂಡಮಾರುತದ ಭೀತಿ; ಮುಂದಿನ 5 ದಿನ… ನೆರೆ ಸಂತ್ರಸ್ತರೊಂದಿಗೆ ಸುವರ್ಣ ಸೌಧಕ್ಕೆ ಮುತ್ತಿಗೆ: ಸರಕಾರಕ್ಕೆ ಕಾಂಗ್ರೆಸ್ ಎಚ್ಚರಿಕೆ ಗೆದ್ದ ಅಭ್ಯರ್ಥಿಯಲ್ಲಿ ಪಕ್ಷ ಬಿಡುವುದಿಲ್ಲವೆಂದು ಅಫಿದವಿತ್ ಪಡೆಯುವ ಕಾನೂನು ಬರಲಿ: ಜಸ್ಟಿಸ್ ಅರಳಿ…

ಇತ್ತೀಚಿನ ಸುದ್ದಿ

26.58 ಕೋಟಿ ರೂ.ವೆಚ್ಚದಲ್ಲಿ 6 ಗ್ರಾಮಗಳಿಗೆ  ಬಹು ಗ್ರಾಮ ಕುಡಿಯುವ ನೀರಿನ ಯೋಜನೆ: ಶಾಸಕ ಡಾ.ಭರತ್ ಶೆಟ್ಟಿ ಗುದ್ದಲಿ ಪೂಜೆ

01/10/2022, 18:40

ಮಂಗಳೂರು(reporterkarnataka.com):ಸರಕಾರದ ಜಲಜೀವನ್ ಮಿಷನ್ ವತಿಯಿಂದ ಅಡ್ಯಾರ್ ,ಅರ್ಕುಳ, ಮಲ್ಲೂರು, ಬೊಂಡಂತಿಲ, ಉಳಾಯಿಬೆಟ್ಟು ಹಾಗೂ ನೀರುಮಾರ್ಗ ಗ್ರಾಮ ಪಂಚಾಯತ್ ಗಳಿಗೆ ಬಹುಗ್ರಾಮ ಶುದ್ದ ಕುಡಿಯುವ ನೀರಿನ ಯೋಜನೆಗೆ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ

ಡಾ.ಭರತ್ ಶೆಟ್ಟಿ ವೈ. ಶನಿವಾರ ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭ ಮಾತನಾಡಿದ ಅವರು, ಜಲಜೀವನ ಮಿಷನ್ ಯೋಜನೆಯಡಿ 6 ಗ್ರಾಮಗಳಿಗೆ ಪೈಪ್ ಲೈನ್ ಹಾಕುವ ಯೋಜನೆ, ಸಮೀಪದಲ್ಲಿ ಬೋರ್ ವೆಲ್ ತೋಡುವ ಮೂಲಕ ನೀರಿನ ಸಂಪರ್ಕ ನೀಡಲಾಗುವುದು. ನೀರಿನ ಮೂಲ ನಿರಂತರವಾಗಿ ಇರುವಂತೆ ನೋಡಿಕೊಳ್ಳಲು ಕ್ರಮ ಕೈಗೊಳ್ಳಲಾಗಿದೆ.

ಒಟ್ಟು 140 ಕೋಟಿ ರೂ. ವೆಚ್ಚದಲ್ಲಿ ಮಂಗಳೂರು ಉತ್ತರ, ಮೂಡಬಿದ್ರೆ, ಬಂಟ್ವಾಳ, ಮಂಗಳೂರು,ಕ್ಷೇತ್ರ ವ್ಯಾಪ್ತಿಯಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮಾಡುವ ಕಾಮಗಾರಿ ಶೀಘ್ರ ಆರಂಭವಾಗಲಿದೆ ಎಂದರು.

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ 41 ಸಾವಿರ ಮನೆಗಳಿಗೆ ನೀರಿನ ಸಂಪರ್ಕ ಇದಾಗಿದೆ.

ಪಂಚಾಯತ್ ನೀರಿನ ಸಂಪರ್ಕ ನೀಡುವ ಜವಾಬ್ದಾರಿ ಹೊಂದಿದೆ ಎಂದು ತಿಳಿಸಿದರು.


ವೇದಿಕೆಯಲ್ಲಿ ಪಿಡಿಒ ಜೀನತ್ ಅಡ್ಯಾರ್, ದಮಯಂತಿ ನೀರುಮಾರ್ಗ, ಮನಪಾ ಸದಸ್ಯರಾದ ಹೇಮಲತಾ ರಘು ಸಾಲ್ಯಾನ್ಸ್, ಇಸ್ಮಾಯಿಲ್ ಮಲ್ಲೂರು, ರತ್ನಾ ಸುರೇಶ್, ಉಳಾಯಿಬೆಟ್ಟು ಪಿಡಿಒ ಅನಿತಾ ವಿ.ಕ್ಯಾತರಿನ್,ಪಿಡಿಒ ರಾಜೇಂದ್ರ, ನರೇಂದ್ರ ಬಾಬು, ನೀರು ಸರಬರಾಜಿನ ಎಂಜಿನಿಯರ್, ಜಿ ಕೆ ನಾಯಕ್ ನರೇಂದ್ರ,  ಜಗದೀಶ್ ಎಂಜಿನಿಯರ್ ಸುಧಾಕರ ಶೆಟ್ಟಿ, ಕಿಶೋರ್,ರಾಜೇಶ್ ಶೆಟ್ಟಿ‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು