12:32 PM Thursday18 - April 2024
ಬ್ರೇಕಿಂಗ್ ನ್ಯೂಸ್
ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ… ಮಂಗಳೂರಿನಲ್ಲಿ ನಾಳೆ ‘ಇಂಡಿಯಾ’ ಘಟಕ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ‘ಬಿಜೆಪಿ…

ಇತ್ತೀಚಿನ ಸುದ್ದಿ

ಅಮೆಜಾನ್-ಫ್ಲಿಪ್​ಕಾರ್ಟ್​ನಲ್ಲಿ ಎರಡು ದೊಡ್ಡ ಮೇಳ ಶುರು: ಇ ಕಾಮರ್ಸ್  ತಾಣ ಬಳಕೆದಾರರಿಗೆ ಇಂದಿನಿಂದ ಹಬ್ಬವೋ ಹಬ್ಬ!!

23/09/2022, 13:52

ಮುಂಬೈ(reporterkarnataka.com):
ಫ್ಲಿಪ್‌ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ ಶುರುವಾಗಿದೆ. ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 ಸೆಪ್ಟೆಂಬರ್ 23, 2022 ರಿಂದ ಆರಂಭವಾಗಿದ್ದು, ಪ್ರೈಮ್‌ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ.

ಇ ಕಾಮರ್ಸ್  ತಾಣ ಬಳಕೆದಾರರಿಗೆ ಇಂದಿನಿಂದ ಹಬ್ಬವೋ ಹಬ್ಬ. ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ನಲ್ಲಿ ಇದೀಗ ಎರಡು ದೊಡ್ಡ ಮೇಳಗಳು ಶುರುವಾಗಿದೆ. ಅಮೆಜಾನ್‌ಹಬ್ಬದ ಕಾರ್ಯಕ್ರಮ ದಿ ಅಮೆಜಾನ್ ಗ್ರೇಟ್ ಇಂಡಿಯನ್‌ ಫೆಸ್ಟಿವಲ್ 2022 ಸೆಪ್ಟೆಂಬರ್ 23, 2022 ರಿಂದ ಆರಂಭವಾಗಿದ್ದು, ಪ್ರೈಮ್‌ ಸದಸ್ಯರಿಗೆ ಮೊದಲೇ ಇಂದಿನಿಂದ ಪ್ರವೇಶಾವಕಾಶ ಲಭ್ಯವಾಗಿದೆ.

ಲಕ್ಷಾಂತರ ಸಣ್ಣ ಮಧ್ಯಮ ಬ್ಯುಸಿನೆಸ್ ಇಂದ ವಿಶಾಲ ಶ್ರೇಣಿಯ ಉತ್ಪನ್ನಗಳ ಮೇಲೆ ಹಿಂದೆಂದೂ ಕಾಣದ ಡೀಲ್‌ಗಳನ್ನು ಗ್ರಾಹಕರಿಗೆ ಈ ಬಾರಿ ನೀಡಲಾಗಿದೆ. ಇತ್ತ ಫ್ಲಿಪ್‌ಕಾರ್ಟ್ನಲ್ಲಿ ಬಿಗ್ ಬಿಲಿಯನ್ ಡೇಸ್ ಸೇಲ್ 2022 ಆರಂಭವಾದ್ದು, ಸೆಪ್ಟೆಂಬರ್ 30 ರವರೆಗೆ ನಡೆಯಲಿದೆ.

ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನಲ್ಲಿ 2000 ಕ್ಕೂ ಹೆಚ್ಚು ಹೊಸ ಉತ್ಪನ್ನ ಬಿಡುಗಡೆಯಾಗಲಿದೆ ಮತ್ತು ಪ್ರಮುಖ ಬ್ರಾಂಡ್‌ಗಳಾದ ಸ್ಯಾಮ್‌ಸಂಗ್‌, ಐಕ್ಯೂ, ಎಂಐ, ರೆಡ್ಮಿ, ಆಪಲ್‌, ಒನ್‌ಪಲ್ಸ್, ಎಲ್‌ಜಿ, ಸೋನಿ, ಕೋಲ್ಗೇಟ್, ಬೋಟ್, ಎಚ್‌ಪಿ, ಲೆನೊವೊ, ಬ್ಲಾಕ್+ಡೆಕರ್, ಹಿಟ್, ಟ್ರಸ್ಟ್‌ ಬಾಸ್ಕೆಟ್ ಹಾಗೂ ಇತರೆ ಬ್ರ್ಯಾಂಡ್‌ಗಳಿಂದ ಆಯ್ಕೆಗಳಿವೆ.

ಈ ಸಮಯದಲ್ಲಿ ಗ್ರಾಹಕರು ರೂ. 7,500 ವರೆಗೆ ರಿವಾರ್ಡ್‌ಗಳಲ್ಲಿ ಗೆಲ್ಲುವ ಅವಕಾಶವನ್ನು ಹೊಂದಿರುತ್ತಾರೆ. ನಿಮ್ಮ ಫೋನ್ ರಿಚಾರ್ಜ್‌, ಅಮೆಜಾನ್‌ ಪೇ ಬಳಸಿ ಹಣವನ್ನು ಕಳುಹಿಸಬಹುದು, ವಿವಿಧ ಹಬ್ಬದ ಡೀಲ್‌ಗಳನ್ನು ಅನ್‌ಲಾಕ್ ಮಾಡಬಹುದು.

ಅಮೆಜಾನ್ ಸೇಲ್ನಲ್ಲಿ ಬಿಲ್ ಪಾವತಿಗಳು, ರಿಚಾರ್ಜ್‌ ಮತ್ತು ಇತರೆ ಮೇಲೆ ಮೊದಲ ಅಮೆಜಾನ್ ಪೇ ವಹಿವಾಟು ಮಾಡುವ ಗ್ರಾಹಕರು ರೂ. 50 ಹಿಂದೆ ಅನ್ನೂ ಪಡೆಯುತ್ತಾರೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವ ಗ್ರಾಹಕರು ರೂ. 2500 ಸ್ವಾಗತ ಕೊಡುಗೆಯನ್ನು ಪಡೆಯಬಹುದು ಮತ್ತು ಅಮೆಜಾನ್ ಪೇ ಲೇಟರ್‌ ಸಕ್ರಿಯಗೊಳಿಸುವ ಗ್ರಾಹಕರು ರೂ. 150 ಅನ್ನು ಪಡೆಯಬಹುದು ಹಾಗೂ ರೂ. 60,000 ವರೆಗೆ ಇನ್‌ಸ್ಟಂಟ್ ಕ್ರೆಡಿಟ್‌ ಪಡೆಯಬಹುದು.

ಸ್ಯಾಮ್‌ಸಂಗ್‌, ಐಕ್ಯೂ, ರಿಯಲ್‌ಮಿ ಕಂಪೆನಿಯ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಆಫರ್‌ ಲಭ್ಯವಾಗಲಿದೆ. ಇನ್ಸಟಂಟ್‌ ಡಿಸ್ಕೌಂಟ್‌ ಜೊತೆಗೆ ನೋ ಕಾಸ್ಟ್‌ EMI ಮತ್ತು ಎಕ್ಸ್‌ಚೇಂಜ್‌ ಆಫರ್‌ ಅನ್ನು ಕೂಡ ದೊರೆಯಲಿದೆ. ಸ್ಮಾರ್ಟ್‌ಫೋನ್‌ ಮಾತ್ರವಲ್ಲದೆ ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು, ಹೆಡ್‌ಫೋನ್‌ಗಳ ಮೇಲೆ 75% ಡಿಸ್ಕೌಂಟ್‌ ನೀಡುವುದಾಗ ಅಮೆಜಾನ್‌ ಹೇಳಿಕೊಂಡಿದೆ. ಫ್ಲಿಪ್ಕಾರ್ಟ್ ಸೇಲ್ನಲ್ಲಿ ಅಚ್ಚರಿ ಎಂಬಂತೆ ಇತ್ತೀಚೆಗಷ್ಟೆ ಬಿಡುಗಡೆ ಆದ ಗೂಗಲ್ ಪಿಕ್ಸೆಲ್ 6a ಹಾಗೂ ನಥಿಂಗ್ ಫೋನ್ 1 ಸ್ಮಾರ್ಟ್ಫೋನ್ ಮೇಲೆ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಕೇವಲ 30,000 ರೂ. ಒಳಗೆ ಈ ಸ್ಮಾರ್ಟ್ಫೋನ್ ಬಿಗ್ ಬಿಲಿಯನ್ ಡೇಸ್ ಸೇಲ್ನಲ್ಲಿ ಖರೀದಿಗೆ ಲಭ್ಯವಾಗುತ್ತಿದೆ. ಈ ಬಾರಿಯ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಖರೀದಿದಾರರು ಐಫೋನ್‌ 13 ಮತ್ತು ಐಫೋನ್‌ 12 ಮೇಲೆ ಆಕರ್ಷಕ ಡಿಸ್ಕೌಂಟ್‌ ನಿರೀಕ್ಷಿಸಬಹುದು.

ಇದಲ್ಲದೆ ಬ್ಯಾಂಕ್‌ ಆಫರ್‌ಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಐಸಿಐಸಿಐ ಬ್ಯಾಂಕ್‌ ಕಾರ್ಡ್‌ ಅಥವಾ ಆಕ್ಸಿಸ್‌ ಬ್ಯಾಂಕ್‌ ಕಾರ್ಡ್‌ಗಳ ಮೇಲೆ 10% ಡಿಸ್ಕೌಂಟ್‌ ಪಡೆಯುವ ಸಾಧ್ಯತೆಯಿದೆ. ಇನ್ನು ಬ್ಯಾಂಕ್‌ ಆಫರ್‌ಗಳ ಜೊತೆಗೆ ನೋ ಕಾಸ್ಟ್‌ ಇಎಂಐ ಮತ್ತು ಸ್ಮಾರ್ಟ್‌ಫೋನ್‌ ಎಕ್ಸ್‌ಚೇಂಜ್‌ ಆಫರ್‌ ಕೂಡ ಪಡೆದುಕೊಳ್ಳಬಹುದಾಗಿದೆ

ಇತ್ತೀಚಿನ ಸುದ್ದಿ

ಜಾಹೀರಾತು