8:43 PM Saturday1 - October 2022
ಬ್ರೇಕಿಂಗ್ ನ್ಯೂಸ್
ಅಥಣಿ: ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ; ಹಗ್ಗ ಹಿಡಿದು ಹಳ್ಳ ದಾಟಿದ… ಹರೇಕಳ ಸೇತುವೆ ಸಾರ್ವಜನಿಕ ಸಂಚಾರಕ್ಕೆ  ಮುಕ್ತಗೊಳಿಸಿ: ಡಿವೈಎಫ್ಐ ಒತ್ತಾಯ  ಲಂಚ ಪ್ರಕರಣ: ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಸಹಾಯಕ ಅಧಿಕಾರಿ ಶಿವಾನಂದ ಲೋಕಾಯುಕ್ತ… ಭೂತಾನ್ ನಿಂದ 17 ಸಾವಿರ ಟನ್  ಅಡಕೆ ಆಮದು: ರೈತರಲ್ಲಿ ಆತಂಕ ಬೇಡವೆಂದ… ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶ:  ಗುಂಡ್ಲುಪೇಟೆಯಲ್ಲಿ ರಾಹುಲ್ ಗಾಂಧಿಗೆ ಭಾರಿ ಸ್ವಾಗತ ಶಾಸಕ ರಘುಪತಿ ಭಟ್ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ… ದ.ಕ. ಜಿಲ್ಲೆ: ನಿಷೇಧಿತ ಸಂಘಟನೆಗಳ ವಿವಿಧಡೆಯ ಕಚೇರಿಗಳ ಮೇಲೆ ದಾಳಿ; ಸ್ವತ್ತುಗಳು ವಶಕ್ಕೆ ಮೂಡಿಗೆರೆ: ತರುವೆ ಗ್ರಾಪಂ, ಅಂಗನವಾಡಿ, ಲೈಬ್ರರಿಗೆ ನುಗ್ಗಿದ ಕಳ್ಳರು: ಫೈಲ್, ಲ್ಯಾಪ್ ಟಾಪ್… ಗರ್ಭಪಾತ ಮಹಿಳೆಯರ ಹಕ್ಕು: ಅವಿವಾಹಿತ ಮಹಿಳೆಯರಿಗೂ ಗರ್ಭಪಾತ ಮಾಡಬಹುದು ಸುಪ್ರಿಂಕೋರ್ಟ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ: ಆಸ್ತಿ ದಾಖಲೆಗಳ…

ಇತ್ತೀಚಿನ ಸುದ್ದಿ

ಅಡ್ಕೆ ಸುಲ್ತಾ

11/09/2022, 16:31

ಅದೊಂದು ಕಾಲ್ದಲ್ಲಿ ಅಡ್ಕೆ ಸುಲ್ತಾ ಅಂದ್ರೆ ಒಂಥರಾ ಮಜಾ, ಈಗೆಲ್ಲ ಕೈ ಸುಲ್ತಾ ಹೋಗಿ ಮಿಷನ್ ಬಂದ್ಮೇಲೆ ಮಜಾಯೆಲ್ಲ ಮಾಯಾನೇ ಆಗೋತು..
ಅಡ್ಕೆ ಸುಲ್ದುದ್ ಟೈಮಲ್ಲಿ ಕತ್ಲೆ ಬೇಗ ಮಾರ್ರೆ, ಹೋಗ್ತಾ ಬರ್ತಾ ಆವಾಗೆಲ್ಲ ದೊಂದಿನೇ ಜಾಸ್ತಿ(ಟಾರ್ಚ್ಗಳೆಲ್ಲ ಇತ್ತು ಆದ್ರೆ ಭಾರೀ ಕಮ್ಮಿ.)..

ಆವಾಗೆಲ್ಲ ಹಳ್ಳಿಲಿ ಸಾರಾಯಿ ತೊಟ್ಟೆ ಜಾಸ್ತಿ. ಈ ಬ್ರ್ಯಾಂಡಿ ಹಳ್ಳಿಲಿ ಇರ್ಲಾ, ಹಳ್ಳಿಲಿ ಯಾವನಾದ್ರು ಬ್ರ್ಯಾಂಡಿ ಕುಡಿತಾನೆ ಅಂತಂದ್ರೆ ಅವ್ದೊಂದು ಚೂರ್ ಮೇಲೆನೆ.
ಈ ದೊಂದಿ ಮಾಡ್ತಿದಿದ್ದು ಕ್ವಾಟ್ರು ಬಾಟ್ಲಿಲೇ ಜಾಸ್ತಿ ಮರ್ರೆ ಸಾರಾಯಿ ಕುಡ್ದಿದ್ದು ತೊಟ್ಟೆಲಿ ಎಂತಾ ಮಾಡಕೆ ಆತುದೆ ನೀವೆ ಹೇಳಿ.
ಹೇ ಕೆಂಚಿ ನಿನ್ ಗಂಡ ಕ್ವಾಟ್ರು ಕುಡಿತನಲ ನಂಗೊಂದೆರಡು ಬಾಟ್ಲಿ ಕೊಡೆ ಅಂತಾ ಕೇಳೋದ್ ಬ್ಯಾರೆ ಇತ್ತು. ನಿಮ್ಗೆ ಗೊತ್ತಾ?

ಅಡ್ಕೆ ಸುಲಿತಕ್ಕೆ ಹೆಂಗಸರೇ ಜಾಸ್ತಿ ಹೋಗ್ತಿತಿದ್ದು ಇನ್ ಗಂಡುಸ್ರು ಹೋಗಲ್ಲ ಅಂತಿರ್ಲ ಹೋಗ್ತಿದ್ರು ಆದ್ರೆ ಬಾಳ ಕಮ್ಮಿ..
ಅಡ್ಕೆ ಸುಲ್ತಾಕ್ಕೆ ಹೋಗದು ಅಂದ್ರೆ ಏನ್ ಹುಡುಗಾಟವೇ?
ಎಲಡ್ಕೆ ಚೀಲ, ತಿಂಡಿಗೊಂದು ಚೀಲ, ಮತ್ತೊಂದು ದೊಡ್ ಕೈ ಚೀಲ, ಮತ್ತೊಂದು ಜರ್ಕಿ ಹಾಕಂಡ್ ಹೋಗೋ ಹೊಡ್ತಾ ನೋಡ್ಬಕ್ ಕಂಡ್ರೀ ಅಬ್ಬಬ್ಬಾ….

ಯಾರಾದ್ರು ಫಸ್ಟ್ ಹೋದೋರು ಅವ್ರು ಕುಟುಂಬದವರಿಗೆಲ್ಲ ಚನಾಗಿರೋ ಬುಟ್ಟಿನಾ ತೆಗ್ದು ಇಟ್ಕೊಂಡು ಬಾಕಿದೋರಿಗೆಲ್ಲ ವಟ್ಟೆ ಬುಟ್ಟಿ ಇಡೋದು ಬ್ಯಾರೆ ಇತ್ತು..
ಇನ್ನೂ ಅಡ್ಕೆ ಸುಲಿತಿಗೆ ಯಾರಿಗಾದ್ರು ಕೈ ಕುಯ್ದ್ರೆ ಸಾಕು ಯಾರ್ ಅಡ್ಕೆ ಸುಲ್ತಾಕ್ಕೆ ಮೊದ್ಲು ಬಂದು ಶುರುಮಾಡಿರ್ತಾರೋ ಅವ್ರಿಗೆ ಬೈಗುಳ ಶುರು (ಕೆಲವೊಮ್ಮೆ ಸೆಸ್ಸಾರ್ ಪದಗಳು ಬರ್ತಿದ್ವು)..

ಈಡೀ ಊರಿನ ಸಮಾಚಾರಗಳೆಲ್ಲ ಪರಸ್ಪರ ಚರ್ಚೆಗೆ ಬರ್ತಿದಿದ್ದು ಸುಲ್ದುದ್ ಕೊಟ್ಟಿಗೆಲೇ ಕಂಡ್ರೀ.
ಯಾರಿಗ್ ಮದ್ವೆ ಆದ್ರು, ಯಾರ್ ಓಡೋದ್ರು, ಟೀವಿಗಿಂತ ಮುಂಚೆ ಸುಲ್ತುದು ಕೊಟ್ಟಿಗೆಗೆ ವರದಿ ಬರ್ತಿದ್ವು, ಆದ್ರೂ ಒಂಥರಾ ಚಂದಿತ್ತು ಬಿಡಿ
ಮೆಟ್ಕತ್ತಿ, ಮಣೆಗೆ ಕೆಲವೊಂದ್ಸಲ ಸುಲ್ತುದ ಕೊಟ್ಟಿಗೆ ರಣರಂಗ ಆಗಿದ್ದು ಉಂಟು..
ಎಲ್ಲಾ ಮಣೆಯ ಹಿಂದೆ ಬಸ್ಸಿನ್ ಹೆಸ್ರು ಥರ ಒಂದೊಂದು ಇನ್ಶೀಲ್ ಗಳು, ಬಸ್ಸಿನ ಥರ ಹಾರ್ನ್ ಹಾಕ್ತಾ ಇದ್ದಿದ್ದು ಮಾತ್ರ ಮಣೆ ಬೇರೆಯವರು ಇಟ್ಕೊಂಡು ಕೂತಾಗ..
ಕೆಲ ಸಲ ಈ ಸುಲ್ತುಕೆ ಮಕ್ಳು ಬ್ಯಾರೆ ಬರ್ತಿದ್ವು..
ಆ ಮಕ್ಳು ಚೂರ್ ಸುಲ್ದು, ಸುಮ್ನೆ ಚಳಿಗೆ ಶಟ್ರು ಹೊಡ್ಗಂಡ್ ಚಡ್ಡಿ ಒಳಗೆ ಕೈ ಹಾಕಂಡ್ ತೆಪ್ಪನೆ ಕೂತ್ಕಂಡ್ ಇರ್ತಿದ್ವು. ಯಾರಾದ್ರು ರಪ್ಪ ಕರ್ದು ಏ ಬಾಲೆ ಹೋಗ ಚೂರ್ ಅವ್ಳು ಎಲಡ್ಕೆ ಕೊಡ್ತಾಳೆ ತಬರ ಅಂದಾಗ ರಪ್ಪ ಚಡ್ಡಿ ಒಳಗಿಂದ ಕೈ ತೆಗ್ದು ಓಡಿ ಹೋಗಿ ತಂದು ಕೊಡ್ತಿದ್ವು ಪಾಪ.
ಅಡ್ಕೆ ಸುಲ್ತಾ ಮುಗ್ಸಿ ಮನೆಗೆ ಹೋಗುವಾಗ ಚೂರ್ ಬಾಲೆ ಕರ್ಕಳೆ ಅಂದ್ರೆ ಸಾಕಿತ್ತು,
“ನಿಂದೊಂದು ಮಾರಾಯ್ತಿ ಆವಾಗ ಸುಮ್ನೆ ಮಲ್ಗಿದ್ರೆ ಈ ರಗ್ಳೆ ಇತ್ತಾ, ಒದ್ದಾಡಿದ್ರಿ ರಾತ್ರೆ ಹಗ್ಲು ಈಗ ನೋಡು ಅಂತಿದ್ವು” ಆವಾಗ ಇವ್ಳು ಸಾಕು ಸಾಕು ಮುಚ್ಗಳಿ ನೀವು ಮಾಡ್ದಿದ್ದು ನಾವೇನು ಮಾಡ್ಲ ಬಿಡಿ.

ಕೆಲೋರು ಗೋಟು ಸುಲಿಯಕ್ಕಿದ್ರೆ ಅಡ್ಕೆ ಸುಲ್ತಕೆ ಬರ್ತಾನೆ ಇರ್ಲಾ.
ಊರಿನ್ ಹುಡ್ಗೀರು ಅಡ್ಕೆ ಸುಲಿಯಕೆ ಹೋತವೆ ಅಂತಂದ್ರೆ ಸಾಕು ಹುಡುಗ್ರು ಹಲ್ ಬಿಟ್ಕಂಡ್ ಸುಲಿಯಕೆ ಹೋಗೋದು ಬ್ಯಾರೆ ಇತ್ತು..
ಇನ್ನೂ ಅಡ್ಕೆ ಸುಲ್ತಾ ಮುಗ್ಸಿ ರಾತ್ರಿ ಮನೆಗೆ ಹೋಗುವಾಗ ಆ ಮಜಾನೇ ಬೇರೆ.
ಮನೆಗೆ ಬಂದೋರು ಕೈ ತೊಳಿಯಕೆ ಲಿಂಬೆಹುಳಿ, ಕಂಚಿಹುಳಿ, ದೊಡ್ಲೆಹುಳಿ ಹೀಗೆ ಅದೆಷ್ಟು ಹುಳಿ ಇದ್ರು ಸಾಕಾಗ್ತಾನೆ ಇರ್ಲಿಲ್ಲ..
ಅಡ್ಕೆ ಸುಲ್ತಾ ಮುಗ್ಸಿ ಮನೆಗೆ ಹೊರಟ್ರು ಅಂತಾ ನಾಯಿಗಳ ಬೊಬ್ಬೆಗೆ ಗೊತ್ತಾಗ್ತಿತ್ತು,
ಕೆಲವರಂತೂ ಕೂದ್ಲು ಕೆದರಿ ಆ ದೊಂದಿ ಬೆಳಕಲ್ಲಿ ತೇಟು ದೆವ್ವಗಳಂತೆ ಕಾಣ್ತಿದ್ರು.
ದೊಂದಿ ಹಿಡ್ಕಂಡ್ ಹೋತ ಯಾರಾದ್ರು ಊಫ್ ಅಂತಾ ದೊಂದಿನ ಕೆಡ್ಸೋರು…..
ಕೆಡ್ಸಿದ್ ಕೂಡ್ಲೆ ಕೆಲವರು ಹೆದ್ರಿ ಬೊಬ್ಬೆ ಹಾಕೋರು ಇನ್ ಕೆಲವರು ಬೈಯೋರು.
ದಾರಿ ಉದ್ದಕ್ಕೂ ಪುರಾಣಗಳೇ..

ಕಡೆಗೊಂದಿನ ಕಂಬ್ಳ ಅಂತಾ ಮಾಡಿ ರಾತ್ರಿಯಿಡೀ ಅಡಿಕೆ ಸುಲಿತಾ ಮಾಡಿ ಅಡ್ಕೆ ಕೊಯ್ಲು ಮುಗಿಸೋರು..
ಕಂಬ್ಳ ಅಂದ್ರೆ ಭಾರೀ ಖುಷಿ
ಒಂದು ಗಡ್ದು ಊಟ ಇರ್ತಿತ್ತು ಇದೊಂದು ಟೀವಿ ಹಾಕೋರು ಅಂತಾ.
ಅದ್ರಲ್ಲೂ ಕೆಲೋರು ಅವರ ಮದ್ವೆ ಕ್ಯಾಸೆಟ್ ಹಾಕಿ ಮಂಗ ಮಾಡೋರು ಇನ್ ಕೆಲೋರು ಯಾವುದಾದ್ರು ಪಿಚ್ಚರ್ ಕ್ಯಾಸೆಟ್ ಹಾಕೋರು.
ಅಡ್ಕೆ ಮುಗ್ಸಿ ಟೀವಿ ನೋಡಿ ಬೆಳ್ಗಿನ್ ಜಾವ ಮನೆ ಸೇರೋರು…

ಇವಾಗೆಲ್ಲ ಮಿಷನ್ ಬಂದು ಆಗಿನ ಖುಷಿ ಕಳ್ದೆ ಹೋತಲ ಅನ್ನೋ ಬೇಜಾರು,
ಇನ್ನೊಂದು ಕಡೆ ಅಡ್ಕೆಗೆ ಕಾಯಿಲೆ ಬಂದು ಅಡ್ಕೆಮರಗಳೆಲ್ಲ ಹೋತಲ ಅನ್ನೋ ಬೇಜಾರು..

ಶಶಿ ಬೆತ್ತದಕೊಳಲು

ಇತ್ತೀಚಿನ ಸುದ್ದಿ

ಜಾಹೀರಾತು