6:48 PM Saturday1 - October 2022
ಬ್ರೇಕಿಂಗ್ ನ್ಯೂಸ್
ಅಥಣಿ: ಭಾರಿ ಮಳೆಗೆ ಕೊಚ್ಚಿ ಹೋದ ಸೇತುವೆ; ಹಗ್ಗ ಹಿಡಿದು ಹಳ್ಳ ದಾಟಿದ… ಹರೇಕಳ ಸೇತುವೆ ಸಾರ್ವಜನಿಕ ಸಂಚಾರಕ್ಕೆ  ಮುಕ್ತಗೊಳಿಸಿ: ಡಿವೈಎಫ್ಐ ಒತ್ತಾಯ  ಲಂಚ ಪ್ರಕರಣ: ಮಂಗಳೂರು ತಹಶೀಲ್ದಾರ್ ಪುರಂದರ ಹೆಗ್ಡೆ, ಸಹಾಯಕ ಅಧಿಕಾರಿ ಶಿವಾನಂದ ಲೋಕಾಯುಕ್ತ… ಭೂತಾನ್ ನಿಂದ 17 ಸಾವಿರ ಟನ್  ಅಡಕೆ ಆಮದು: ರೈತರಲ್ಲಿ ಆತಂಕ ಬೇಡವೆಂದ… ಭಾರತ್ ಜೋಡೋ ಯಾತ್ರೆ ಕರ್ನಾಟಕಕ್ಕೆ ಪ್ರವೇಶ:  ಗುಂಡ್ಲುಪೇಟೆಯಲ್ಲಿ ರಾಹುಲ್ ಗಾಂಧಿಗೆ ಭಾರಿ ಸ್ವಾಗತ ಶಾಸಕ ರಘುಪತಿ ಭಟ್ ವಿರುದ್ಧ 40 ಪರ್ಸೆಂಟ್ ಕಮಿಷನ್ ಆರೋಪ: ಉಡುಪಿ ನಗರಸಭೆ ಸಾಮಾನ್ಯ ಸಭೆಯಲ್ಲಿ… ದ.ಕ. ಜಿಲ್ಲೆ: ನಿಷೇಧಿತ ಸಂಘಟನೆಗಳ ವಿವಿಧಡೆಯ ಕಚೇರಿಗಳ ಮೇಲೆ ದಾಳಿ; ಸ್ವತ್ತುಗಳು ವಶಕ್ಕೆ ಮೂಡಿಗೆರೆ: ತರುವೆ ಗ್ರಾಪಂ, ಅಂಗನವಾಡಿ, ಲೈಬ್ರರಿಗೆ ನುಗ್ಗಿದ ಕಳ್ಳರು: ಫೈಲ್, ಲ್ಯಾಪ್ ಟಾಪ್… ಗರ್ಭಪಾತ ಮಹಿಳೆಯರ ಹಕ್ಕು: ಅವಿವಾಹಿತ ಮಹಿಳೆಯರಿಗೂ ಗರ್ಭಪಾತ ಮಾಡಬಹುದು ಸುಪ್ರಿಂಕೋರ್ಟ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲೆ ಸಿಬಿಐ ದಾಳಿ: ಆಸ್ತಿ ದಾಖಲೆಗಳ…

ಇತ್ತೀಚಿನ ಸುದ್ದಿ

ದ.ಕ. ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್  ನೂತನ ಅಧ್ಯಕ್ಷರಾಗಿ ಶಾಸಕ ವೇದವ್ಯಾಸ ಕಾಮತ್ ಆಯ್ಕೆ

13/08/2022, 20:58

ಮಂಗಳೂರು(reporterkarnataka.com): ದಕ್ಷಿಣ ಕನ್ನಡ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಶನ್ ಇದರ ವಾರ್ಷಿಕ ಸಾಮಾನ್ಯ ಸಭೆ ನಗರದ ಬೆಂದೂರ್ ನಲ್ಲಿರುವ ಸೆಂಟ್ ಸೆಬೇಂಸ್ಟಿನ್ ಚರ್ಚ್ ಸಭಾಂಗಣದಲ್ಲಿ ಶನಿವಾರ ಜರುಗಿದ್ದು, ನೂತನ ಅಧ್ಯಕ್ಷರಾಗಿ ಶಾಸಕ ವೇದವ್ಯಾಸ ಕಾಮತ್ ಅವರು ಆಯ್ಕೆಗೊಂಡಿದ್ದಾರೆ.

2022-23 ಮತ್ತು 2023-24 ಅವಧಿಗೆ ನೂತನ ಕಮಿಟಿಯ ಪದಾಧಿಕಾರಿಗಳನ್ನು ಸಹಕಾರಿ ಸಂಘಗಳ ಒಕ್ಕೂಟದ ಸಹಾಯಕ ರಿಜಿಸ್ಟ್ರಾರ್ ಸುಧೀರ್ ಕುಮಾರ್ ಅವರು ಘೋಷಿಸಿದರು.

ಅಧ್ಯಕ್ಷರಾಗಿ ವೇದವ್ಯಾಸ ಕಾಮತ್, ಉಪಾಧ್ಯಕ್ಷರುಗಳಾಗಿ ಅಶೋಕ್ ಪೂವಯ್ಯ ಹಾಗೂ ಶಿವಾನಂದ ಶೆಣೈ, ಕಾರ್ಯದರ್ಶಿಯಾಗಿ ಐವನ್ ಆಲ್ಪ್ರೇಡ್ ಪತ್ರಾವೋ, ಸಹಕಾರ್ಯದರ್ಶಿಗಳಾಗಿ ಗಣೇಶ್ ಪ್ರಸಾದ್ ಕೆ, ಗಣೇಶ್ ಕಾಮತ್, ಕೋಶಾಧಿಕಾರಿಯಾಗಿ ಎ.ಎಸ್ ವೆಂಕಟೇಶ್, ಕಾರ್ಯಕಾರಿಣಿ ಸದಸ್ಯರಾಗಿ ಸುರೇಶ್ ಎಚ್, ರಾಜೇಶ್ ಆಚಾರ್ಯ, ಆರ್.‌ ಶ್ರೀನಿವಾಸ್ ಬಾಳಿಗಾ ಆಯ್ಕೆಯಾಗಿದ್ದಾರೆ.

ಅಶೋಕ್ ಪೂವಯ್ಯ ಸ್ವಾಗತಿಸಿದರು. ಗಣೇಶ್ ಕಾಮತ್ ವಂದಿಸಿದರು.

ಪದಗ್ರಹಣದ ದಿನಾಂಕವನ್ನು ಶೀಘ್ರದಲ್ಲಿ ತಿಳಿಸಲಾಗುವುದು ಎಂದು ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು