3:27 AM Thursday18 - April 2024
ಬ್ರೇಕಿಂಗ್ ನ್ಯೂಸ್
ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ… ಕಾರು ಬಿಟ್ಟು ಆಟೋ ಏರಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ: ಗಮನ…

ಇತ್ತೀಚಿನ ಸುದ್ದಿ

ಅವ್ಯವಹಾರ, ಅನಾಚಾರ ಮರೆಮಾಚುವ ತಂತ್ರ: ಸರಕಾರಿ ಹಾಸ್ಟೆಲ್ ಗಳ ಸಿಸಿ ಕ್ಯಾಮೆರಾ ಬಂದ್.!?

06/08/2022, 16:47

ವಿ.ಜಿ.ವೃಷಭೇಂದ್ರ ಕೂಡ್ಲಿಗಿ ವಿಜಯನಗರ 

info.reporterkarnataka@gmail.com

ಜಿಲ್ಲೆ ಕೂಡ್ಲಿಗಿಯ ಪರಿಶಿಷ್ಟ ಪಂಗಡ, ಸಮಾಜ ಕಲ್ಯಾಣ, ಬಿಸಿಎಂ ಹಾಸ್ಟೆಲ್ ಸೇರಿದಂತೆ ಕ ಪಟ್ಟಣದ ಕೆಲ ಹಾಸ್ಟೆಲ್ ಗಳು ಒಳಗೊಂಡಂತೆ ತಾಲೂಕಿನ ಬಹುತೇಕ ಹಾಸ್ಟೆಲ್ ಗಳಲ್ಲಿ. ತಿಂಗಳುಗಳಿಂದ ಸಿಸಿ ಕ್ಯಾಮೆರಾಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೆಟ್ಟು ಹೋದ ಸಿಸಿ ಕ್ಯಾಮೆರಾದ ದುರಸ್ತಿಯ ಉಸಾಬರಿಯನ್ನು ಅಧಿಕಾರಿಗಳು ತೆಗೆದುಕೊಳ್ಳುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಸಿಸಿ ಕ್ಯಾಮೆರಾ ಅಳವಡಿಸುವ ಉದ್ದೇಶ ಬಹುತೇಕ ಎಲ್ಲರಿಗೂ ಗೊತ್ತಿದೆ. ವ್ಯವಸ್ಥೆಯ ಪಾರದರ್ಶಕತೆಗೆ ಕೈಗನ್ನಡಿಯಾಗಿ ಸಿಸಿ ಕ್ಯಾಮೆರಾ ಕೆಲಸ ನಿರ್ವಹಿಸುತ್ತದೆ. ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲದಿದ್ದರೆ ಸಿಸಿ ಕ್ಯಾಮೆರಾ ಇದಕ್ಕೆಲ್ಲ ಅಡ್ಡಿಯಾಗುತ್ತದೆ. ಇಲ್ಲೂ ಕೂಡ ಇದೇ ಸಮಸ್ಯೆ ಎದ್ದಿರುವುದು. ಪಾರದರ್ಶಕತೆಯನ್ನು ಮರೆ ಮಾಚಲು ಸಿಸಿ ಕ್ಯಾಮೆರಾವನ್ನು ದುರಸ್ತಿ ಮಾಡುತ್ತಿಲ್ಲ. ಕೆಲವು ಕಡೆ ಬೇಕಂತಲೇ ಸಿಸಿ ಕ್ಯಾಮೆರಾವನ್ನು ಹಾಳು ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

ಸಿಸಿ ಕ್ಯಾಮೆರಾ ಸರಿಯಾದ ನಿರ್ವಣೆ ಮಾಡುತ್ತಿಲ್ಲ ಎಂದು ಕೆಲ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದೂರಿದ್ದಾರೆ. ಕಾರಣ ಹಾಸ್ಥೆಲ್ ನಲ್ಲಿ ಪಾರದರ್ಶಕತೆ ನಿರ್ವಹಣೆ  ಕಾಣೆಯಾಗುತ್ತಿದ್ದು, ಅದನ್ನು ಮರೆಮಾಚಲು ಕ್ಯಾಮೆರಾಗಳನ್ನು ದುರಸ್ತಿ ಗೊಳಿಸುವಲ್ಲಿ ಹಿಂಜರಿಯುತ್ತಿದ್ದಾರೆ ಎಂದು ಹಾಸ್ಟೆಲ್ ಗಳ ಹಿರಿಯ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಇಲಾಖಾ ಅಧಿಕಾರಿಗಳು ಭೇಟಿ ನೀಡಿದರೂ ಸುಧಾರಣೆ ಕಾಣುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. 

ಕೆಲ ಹಾಸ್ಟೆಲ್ ಗಳಲ್ಲಿ ಹೊಸದಾಗಿ ಬಂದ ಕಾರ್ಮಿಕರನ್ನು ಗುರಿಯಾಗಿಸಿಕೊಂಡು, ಹಳೇ ಕಾರ್ಮಿಕರು ತಮ್ಮ ಕೆಲಸವನ್ನು ಅನಗತ್ಯವಾಗಿ ಹೊಸಬರ ಮೇಲೆ ಕೆಲಸದ ಒತ್ತಡ ಹೇರುವ ಮೂಲಕ ಕಿರುಕುಳ ನೀಡಲಾಗುತ್ತದೆ ಎಂಬ ದೂರುಗಳಿವೆ ಎಂದು ಕೆಲ ಸಂಘಟನೆಕಾರರು ದೂರಿದ್ದಾರೆ. ನಿರ್ಲಕ್ಷ್ಯ ತೋರಿದ್ದಲ್ಲಿ ವಿದ್ಯಾರ್ಥಿಗಳ ಸಹಕಾರೊಂದೊಂದಿಗೆ , ಪ್ರತಿಭಟಿಸಲಾಗುವುದೆಂದು ವಂದೇ ಮಾತರಂ ಜಾಗೃತಿ ವೇದಿಕೆ ಸೇರಿದಂತೆ ಕೆಲ ಸಂಘಟನೆಗಳ ಪದಾಧಿಕಾರಿಗಳು ಎಚ್ಚರಿಸಿದ್ದಾರೆ. 

ಕಾರ್ಮಿಕರ ಬೆವರಿಗೆ  ಕನ್ನ.!?: ಹಾಸ್ಟೆಲ್ ಗಳು ನಿರುದ್ಯೋಗಿಗಳಿಗೆ ಜೀವನಾಧಾರ ಗಳಾಗಿವೆ, ಹೊರಗುತ್ತಿಗೆ ಆಧಾರದಂತೆ ಕೆಲಸಕ್ಕೆ ಸೇರುವ ಮಹಿಳಾ ಕಾರ್ಮಿಕರಿಗೆ ಜೀವನ ಊರುಗೋಲಾದೆ. ಆದರೆ ಕೆಲವೆಡೆಗಳಲ್ಲಿ ಅವರ ಕೂಲಿ ಹಣದಲ್ಲಿ, ಕೆಲವು ಸಿಬ್ಬಂದಿಗಳು ಹಾಗೂ ಕೆಲ ವಾರ್ಡ್ ನಗಳು ಮೋಸ ಮಾಡುತ್ತಾರೆ.  ಕೆಲವೆಡೆ ಕಾನೂನು ರೀತ್ಯ ಸರ್ಕಾರ ಕಾರ್ಮಿಕರಿಗೆ ನಿಗದಿಪಡಿಸಿರುವ ಕೂಲಿ ನೀಡದೇ ವಂಚಿಸಲಾಗತ್ತಿದೆ. ಕೆಲವೆಡೆ ಮಹಿಳೆಯರನ್ನು ಶೋಷಿಸಲಾಗುತ್ತದೆ ಮತ್ತು ಕಿರಕುಳ ನೀಡಲಾಗುತ್ತದೆ ಎಂಬ ದೂರುಗಳಿವೆ. ಈ ಗಂಭೀರ ದೂರುಗಳು  ಪಟ್ಟಣದ ಕೆಲವೇ ಕೆಲ ಹಾಸ್ಟೆಲ್ ಗಳಲ್ಲಿ ಕೆಲ ಸಿಬ್ಬಂದಿಗೆ ಅನ್ವಹಿಸುತ್ತಿದೆ. ತಾಲೂಕಿನ ಗ್ರಾಮೀಣ ಭಾಗದ  ತಾಲೂಕಿನ ಬಹುತೇಕ ಹಾಸ್ಟೆಲ್ ಜರುಗುತ್ತಿದ್ದು, ಸಂಬಂಧಿಸಿದಂತೆ ಅಧಿಕಾರಿಗಳು ಕುದ್ದು ಪರಿಶೀಲಿಸಿ ಸೂಕ್ತ ಕ್ರಮಗಳನ್ನು ಜರುಗಿಸಬೇಕಿದೆ ಎಂದು ಮಹಿಳಾ ಹೋರಾಟಗಾರರು ಆಗ್ರಹಿಸಿದ್ದಾರೆ. ಪುಡಾರಿಗಳೇ ಡಾನ್ ಗಳು..ವಾರ್ಡ್ ನಗಳು ವೀಕು.!?: ಪಟ್ಟಣ ಸೇರಿದಂತೆ ತಾಲೂಕಿನ ಬಹಿತೇಕ ಹಾಸ್ಥೆಲ್ ಗಳಲ್ಲಿ ವಾರ್ಡ್ ನಗಳು ಇರೋದಿಲ್ಲ, ಹಳೇ ಕಾರ್ಮಿಕರೇ ವಾರ್ಡ್ ನಗಳನ್ನು ನಿಯಂತ್ರಿಸುತ್ತಿದ್ದಾರೆಂಬ ಕೂಗು ಕೇಳಿ ಬಂದಿದೆ. ಕೆಲವು ಹಾಸ್ಟೆಲ್ ಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಇಲಾಖೆ ಸಿಬ್ಬಂದಿಗೆ ಮೇಲ್ವಿಚಾರಣೆ ಹಾಗೂ ಕೆಲ ವಾರ್ಡ್ ನಗಳಿಗೆ ಹೆಚ್ವುವರಿ ಕಾರ್ಯಕ್ಕೆ ನಿಯೋಜಿಸಲಾಗಿದೆ. ಅವುಗಳಲ್ಲಿ ನಿಯೋಜಿತ ಸಿಬ್ಬಂದಿ ತಾವು ಕಾರ್ಯ ನಿರ್ವಹಿಸದೇ ತಮ್ಮ ಮನೆಯ ಸದಸ್ಯರನ್ನ ಅಥವಾ ಸಂಬಂಧಿಯನ್ನ ನಿಯೋಜಿಸಲಾಗುತ್ತಿದೆ. ಅವರ ಕಾರ್ಯನಿರ್ವಹಣೆ ತುಂಬಾ ಕಳಪೆ ಹಾಗೂ ನೆಪದಲ್ಲಿ , ಕೆಲ ರೀತಿಯಲ್ಲಿ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ದೂರುಗಳು ಬಂದಿವೆ.
ಕಿರಾತಕ ವಿದ್ಯಾರ್ಥಿಗಳ ಹಾವಳಿ:  ಪಟ್ಟಣ ಸೇರಿದಂತೆ ತಾಲೂಕಿನ ಕೆಲವು ಹಾಸ್ಟೆಲ್ ಗಳಲ್ಲಿ, ಹಾಸ್ಟೆಲ್ ಗೆ ಬರುವ ಕೆಲ ಕಾರ್ಮಿಕರಿಗೆ ಕೆಲ ಕಿಡಿಗೇಡಿ ವಿದ್ಯಾರ್ಥಿಗಳು ಕಿರಿ ಕಿರಿಯುಂಟು ಮಾಡುತ್ತಿದ್ದಾರೆ ಎಂಬ ದೂರಿದೆ. ಕಿಡಿಗೇಡಿ ವಿದ್ಯಾರ್ಥಿಗಳ ಪೋಷಕರನ್ನು ಕರೆಸಿ ಬುದ್ದಿವಾದ ಹೇಳಿಸಬೇಕಿದೆ ನಂತರ ಕಾನೂನು ರೀತ್ಯ ಶಿಸ್ಥುಕ್ರಮ ಜರುಗಿಸಬೇಕಿದೆ. ಇದನ್ನು ನಿಯಂತ್ರಿಸಬೇಕಿರುವ ಹೊಣೆ ಸಂಬಂಧಿಸಿದ ಅಧಿಕಾರಿಗಳದ್ದು. ಕೆಲವೇ ಕೆಲ ಹಾಸ್ಟೆಲ್ ಗಳಲ್ಲಿ ಕೆಲವೇ ಕೆಲ  ವಿದ್ಯಾರ್ಥಿಗಳು  ಮಾಡುವ ಕಿರಿ ಕರಿಯಿಂದಾಗಿ, ಇಡೀ ಹಾಸ್ಟೆಲ್ ವಿದ್ಯಾರ್ಥಿಗಳ ಸಮುದಾಯಕ್ಕೆ ಕೆಟ್ಟು ಹೆಸರು ತರುವಂತಾಗುತ್ತದೆ. ಕಾರಣ ಸಂಬಂಧಿಸಿದಂತೆ ಹಾಸ್ಟೆಲ್ ವಾರ್ಡ್ ನಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕಿದೆ, ನಿರ್ಲಕ್ಷ್ಯ ತೋರಿದ್ದಲ್ಲಿ ಜರುಗಬಹುದಾದ ಅವಘಡಗಳಿಗೆ ಇಲಾಖಾಧಿಕಾರಿಗಳೇ ನೇರ ಹೊಣೆ ಹೊರಬೇಕಾಗುತ್ತದೆ. ಕೆಲ ಹಾಸ್ಟೆಲ್ ಗಳಲ್ಲಿ ನೀಡುವ ಆಹಾರದಲ್ಲಿ ಗುಣಮಟ್ಟ ಇರುವುದಿಲ್ಲ, ಶೌಚಾಲಯಗಳು ತುಂಬಿ ದುರ್ನಾಥ ಬೀರುತ್ತಿವೆ ವಾರ್ಡ್ ನಗಳು ತಿಂಗಳೊಮ್ಮೆ ಬರುತ್ತಾರೆ. ಎಲ್ಲವನ್ನು ಸ್ಥಳೀಯ ಪ್ರಭಾವಿಗಳ ಸಂಬಂಧಿ ಹಿರಿಯ ಕಾರ್ಮಿಕರನ್ನೇ ನೇಮಿಸಲಾಗುತ್ತಿದೆ. ಕೆಲಸ ಹಂಚುವುದರಲ್ಲಿ ತಾರತಮ್ಯ ಹಾಗೂ ಅನಗತ್ಯ ಕೆಲದ ಹೊರೆ ಹೇರಲಾಗುತ್ತದೆ  ಎಂಬ ದೂರುಗಳಿವೆ. ಕೆಲ ಹಾಸ್ಟೆಲ್ ಗಳು ಹಾಸ್ಟೆಲ್ ಗಳ ಆವರಣಗಳು ಅನಾಚಾರ ಹಾಗೂ ಅಕ್ರಮ ಚಟುವಟಿಕೆಗಳ ತಾಣವಾಗುತ್ತಿವೆ ಎಂಬ ಗಂಭೀರ ಆರೋಪಗಳಿವೆ, ಎಲ್ಲವೂ ಸರಿ ಹೋಗಬೇಕಾದರೆ ಮೊದಲು ಹಾಸ್ಟೆಲ್ ಗಳಲ್ಲಿ ಸಿಸಿ ಕ್ಯಾನೆರಾಗಳನ್ನ ಹಾಕಬೇಕಿದೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲಾ ಹಾಸ್ಟೆಲ್ ಗಳಲ್ಲಿ ಸಿಸಿ ಕ್ಯಾಮೆರಾಗಳ ಕಣ್ಗಾವಲು ವ್ಯವಸ್ಥೆ ಮಾಡಬೇಕಿದೆ, ಕೆಲವೆಡೆಗಳ ಲ್ಲಿ ದುರುದ್ದೇಶ ಪೂರ್ವಕವಾಗಿಯೇ ಕ್ಯಾಮೆರಾಗಳನ್ನ ಬಂದ್ ಮಾಡಲಾಗುತ್ತದೆ. ಕೆಟ್ಟು ನಿಂತ ಕ್ಯಾಮೆರಾಗಳನ್ನು ಸರಿಮಾಡಲು ಇಚ್ಚಿಸುವುದಿಲ್ಲ. ಮೇಲಾಧಿಕಾರಿಗಳು ಬಂದಾಗ ಮಾತ್ರ ಎಲ್ಲಾ ಸರಿ ಮಾಡುತ್ತಾರೆ, ನಂತರ ಮೊದಲಿನಂತೆ ಬಂದ್ ಮಾಡಲಾಗುತ್ತದೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ದೂರಿದ್ದಾರೆ. ಹಾಸ್ಟೆಲ್ ಗಳಲ್ಲಿ ಜರುಗುವ ಎಲ್ಲಾ ಅವ್ಯವಸ್ಥೆಗಳನ್ನು ಮತ್ತು ವಿದ್ಯಾರ್ಥಿಗಳ ಮೇಲಾಗುವ ಮತ್ತು ಕಾರ್ಮಿಕರ ಮೇಲಾಗುತ್ತಿರುವ ಶೋಷಣ,ಕಿರುಕುಳಗಳನ್ನು ನಿಯಂತ್ರಿಸಲು ಸಿಸಿ ಕ್ಯಾಮೆರಾ ದುರಸ್ತಿ ಮಾಡಿಸಬೇಕಿದೆ ಎಂದು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು, ಈ ಮೂಲಕ ಜಿಲ್ಲಾಧಿಕಾರಿಗಳಿಗೆ ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ.

ಈ ಸಂದರ್ಭದಲ್ಲಿ ವಂದೇ ಮಾತಂ ಜಾಗೃತಿ ವೇದಿಕೆಯ ಮುಖಂಡರು ಹಾಗೂ ವಿದ್ಯಾರ್ಥಿಗಳ ಒಕ್ಕೂಟದ ಮುಖಂಡರು, ಮಹಿಳಾ ಸಂಘ, ರೈತ ಸಂಘ, ಕಾರ್ಮಿಕರ ಸಂಘದ ಪಾದಾಧಿಕಾರಿಗಳು ಉಪಸ್ಥಿತರಿದ್ದರು. 

ಇತ್ತೀಚಿನ ಸುದ್ದಿ

ಜಾಹೀರಾತು