2:27 AM Saturday13 - August 2022
ಬ್ರೇಕಿಂಗ್ ನ್ಯೂಸ್
ಮೊಬೈಲ್ ಸಂಭಾಷಣೆ ವೇಳೆ ಜಗಳ: ಮದುವೆ  ನಿಶ್ಚಿತಾರ್ಥವಾಗಿದ್ದ ಯುವ ಜೋಡಿ ಆತ್ಮಹತ್ಯೆ ಕೊಪ್ಪ: ಭಾರೀ ಮಳೆಯಿಂದ ಬೆಳೆ ಹಾನಿ; ಸಾಲ ಮಾಡಿ ಕೃಷಿ ಮಾಡಿದ ರೈತ… ಮೂಡುಪಲಿಮಾರು: ಅಪರಿಚಿನ ಮಾತು ನಂಬಿ ಲಕ್ಷಾಂತರ ರೂ. ಮೌಲ್ಯದ ಆಭರಣ ಕಳೆದುಕೊಂಡ ಮಹಿಳೆ ಅವ್ಯಾಹತ ಮಳೆ: ಕೊಪ್ಪದ ಹೆಗ್ಗಾರು ಕೂಡಿಗೆಯಲ್ಲಿ ಕೊಚ್ಚಿ ಹೋದ ರಸ್ತೆ; ಸಂಪರ್ಕ ಕಡಿತ, ಜನ ಸಾಮಾನ್ಯರ… ರಸ್ತೆ ಗುಂಡಿಗೆ ಬಲಿಯಾದ ಎಂಜಿನಿಯರಿಂಗ್ ವಿದ್ಯಾರ್ಥಿ: ಅಧಿಕಾರಿಗಳ ನಿರ್ಲಕ್ಷ ವಿರುದ್ಧ ಗೆಳೆಯನಿಂದ ಒಂಟಿ ಪ್ರತಿಭಟನೆ!! ಮರವಂತೆ ವರಾಹಸ್ವಾಮಿ ದೇವಸ್ಥಾನ: ಭಕ್ತರ ವೇಷದಲ್ಲಿ ಬಂದ ದಂಪತಿಯಿಂದ ಕಾಣಿಕೆ ಡಬ್ಬಿ ಕಳವು… ಆಷಾಢಕ್ಕೆ ತವರು ಮನೆ ಬಂದಿದ್ದ ನವವಧು ಪ್ರಿಯಕರ ಜತೆ ಪರಾರಿ: ಸಿಕ್ಕಿ ಬಿದ್ದ… ಶ್ರೀನಿವಾಸಪುರ: ಬೈಲಾ ಗಾಳಿಗೆ ತೂರಿ ಡಿಸಿಸಿ ಬ್ಯಾಂಕ್‌ ನಿಂದ ಸಹಕಾರ ಸಂಘಗಳಿಗೆ ಸಾಲ ವಿತರಣೆ ಆರೋಪ ಅಥಣಿ: ಕೃಷ್ಣಾ ನದಿಯಲ್ಲಿ ತೇಲಿಬಂದ ಮೃತ ದೇಹ; ಮೃತರ ಗುರುತು ಪತ್ತೆಗೆ ಹರಸಾಹಸ ಕೇರಳ ಸರಕಾರ ಹಾಗೂ ರಾಜ್ಯಪಾಲರ ನಡುವೆ ಶೀತಲ ಸಮರ: 11 ಸುಗ್ರೀವಾಜ್ಞೆಗಳಿಗೆ ಸಹಿ…

ಇತ್ತೀಚಿನ ಸುದ್ದಿ

ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪ: ಸೆನ್ ಠಾಣೆಯಲ್ಲಿ‌ ವ್ಯಕ್ತಿಯ ವಿರುದ್ಧ ಕೇಸ್ ದಾಖಲು

05/08/2022, 11:22

ಬೈಂದೂರು(reporterkarnataka.com):ಮಂಗಳೂರು ಪ್ರವೀಣ್ ನೆಟ್ಟಾರು ಮತ್ತು ಫಾಜಿಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಬೈಂದೂರಿನ ವ್ಯಕ್ತಿಯೋರ್ವರ ಮೇಲೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರನ ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಲಕ್ಷ್ಮೀಕಾಂತ ಬೈಂದೂರು ಎಂಬ ಫೇಸ್ ಬುಕ್ ಖಾತೆದಾರ ಆತನ ಫೇಸ್ ಬುಕ್ ಖಾತೆಯಲ್ಲಿ ಮಂಗಳೂರಿನಲ್ಲಿ ಕೊಲೆಯಾಗಿ ಮೃತಪಟ್ಟಿರುವ ಪ್ರವೀಣ್ ಎಂಬಾತನ ಫೋಟೋವನ್ನು ಬಳಸಿ ಒಂದು ಕೊಲೆಗೆ ಪ್ರತಿಕಾರ ಹೇಗಿತ್ತು ಎಂಬುದಾಗಿ ಪ್ರಚೋದನಾಕಾರಿ  ಬರಹವನ್ನು ಬರೆದು ಪೋಸ್ಟ್ ಮಾಡಿರುವುದು ಹಾಗೂ ದಿನಪತ್ರಿಕೆಯಲ್ಲಿ ಬಂದಿರುವ ಮಂಗಳೂರಿನಲ್ಲಿ ನಡೆದ ಫಾಜಿಲ್  ಹತ್ಯೆಯ ಆರೋಪಿಗಳ ಫೋಟೋವನ್ನು ಬಳಸಿ, “ ಇವತ್ತಿನ ಹೀರೋಗಳು ” ಎಂಬ ಬರಹವನ್ನು ಬರೆದು ಪೋಸ್ಟ್ ಮಾಡಿದ್ದು, ಈ ರೀತಿಯಾಗಿ ಸುಳ್ಳು, ಪ್ರಚೋದನಾಕಾರಿ ಹಾಗೂ ಕೋಮು ಪ್ರಚೋದನೆ ಪೋಸ್ಟ್ ನ್ನು ಹರಿಯಬಿಟ್ಟಿರುವುದು ಕಂಡುಬಂದಿದ್ದು ಈತನ ವಿರುದ್ದ ಸೆನ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದೂರಿನ ಅನ್ವಯ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು