12:20 PM Saturday20 - April 2024
ಬ್ರೇಕಿಂಗ್ ನ್ಯೂಸ್
ಎಡಪದವು: ಅಂಗಡಿಗೆ ಗುದ್ದಿದ ಲಾರಿಯಿಂದ ಸರಣಿ ಅಪಘಾತ; ಬಸ್, ಕಾರು, ಸ್ಕೂಟರ್ ಜಖಂ;… ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ

ಇತ್ತೀಚಿನ ಸುದ್ದಿ

ಕುಕ್ಕೆ ಸುಬ್ರಹ್ಮಣ್ಯ: ಮಣ್ಣಿನಡಿ ಸಿಲುಕಿ ಮೃತಪಟ್ಟ ಇಬ್ಬರು ಕಂದಮ್ಮಗಳಿಗೆ ಊರವರ ಕಣ್ಣೀರಿನ ವಿದಾಯ

03/08/2022, 19:18

ಕುಕ್ಕೆ ಸುಬ್ರಹ್ಮಣ್ಯ(reporterkarnataka.com): ಇಲ್ಲಿನ ಕುಮಾರಧಾರ ಬಳಿಯ ಪರ್ವತಮುಖೀಯಲ್ಲಿ ಮನೆ ಮೇಲೆ ಗುಡ್ಡ ಕುಸಿತದಿಂದ ಸಾವನ್ನಪ್ಪಿದ ಇಬ್ಬರು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ಇಡೀ ಸುಬ್ರಹ್ಮಣ್ಯದ ಜನತೆ ಕಣ್ಣೀರ ವಿದಾಯ ಹೇಳಿದರು.

ಸೋಮವಾರ ರಾತ್ರಿ ಸುಮಾರು 8.30ರ ವೇಳೆಗೆ ಭಾರೀ ಮಳೆಯಿಂದಾಗಿ ಪರ್ವತಮುಖಿ ಬಳಿ ಕುಸುಮಾಧರ ಎಂಬವರ ಮನೆ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಮನೆಯೊಳಗೆ ಮಣ್ಣಿನಡಿ ಸಿಲುಕಿದ್ದ ಸಹೋದರಿಯರಾದ ಶ್ರುತಿ (11) ಮತ್ತು ಗಾನಶ್ರೀ (6) ಮೃತಪಟ್ಟಿದ್ದರು. ಮೃತ ಮಕ್ಕಳ

ಅಂತ್ಯಸಂಸ್ಕಾರ ಪಂಜ ಕರಿಮಜಲಿನಲ್ಲಿ ನಡೆಸಲಾಯಿತು. ಇಡೀ ಊರಿಗೆ ಊರೇ ದುಃಖತಪ್ತವಾಗಿತ್ತು. ಮಕ್ಕಳ ಸಾವಿಗೆ ಸುಬ್ರಹ್ಮಣ್ಯ ಪರಿಸರದ ಜನರು ಕಣ್ಣೀರು ಹರಿಸಿದರು.

ಪಂಜದ ಕರಿಮಜಲು ಕುಸುಮಾಧರ ಮತ್ತು ರೂಪಶ್ರೀ ದಂಪತಿಯ ಮಕ್ಕಳಾದ ಶ್ರುತಿ  ಮತ್ತು ಗಾನಶ್ರೀ ಇವರಲ್ಲಿ ಶ್ರುತಿ ಸುಬ್ರಹ್ಮಣ್ಯದ ಕುಮಾರಸ್ವಾಮಿ ಶಾಲೆಯಲ್ಲಿ 5ನೇ ತರಗತಿ ಹಾಗೂ ಗಾನಶ್ರೀ ಸುಬ್ರಹ್ಮಣ್ಯ ಸರಕಾರಿ ಹಿರಿಯ 

ಪ್ರಾಥಮಿಕ ಶಾಲೆಯಲ್ಲಿ 2ನೇ ತರಗತಿ ಕಲಿಯುತ್ತಿದ್ದರು. ಅಂದು ಸೋಮವಾರ ಸಂಜೆಯಿಂದಲೇ ಧಾರಾಕಾರ ಮಳೆ ಸುಬ್ರಹ್ಮಣ್ಯ ಪರಿಸರದಲ್ಲಿ ಸರಿಯಲಾರಂಭಿಸಿತ್ತು. ರಾತ್ರಿ ಸುಮಾರು 8.30ರ ವೇಳೆಗೆ ಪರ್ವತಮುಖಿಯಲ್ಲಿ ಕುಸುಮಾಧರ ಎಂಬವರ ಮನೆಯ ಹಿಂಭಾಗಕ್ಕೆ ಗುಡ್ಡ ಕುಸಿದು ಬಿತ್ತು. ಭಾರೀ ಶಬ್ದಕ್ಕೆ ತಾಯಿ ರೂಪಾಶ್ರೀ ಅವರು ಇನ್ನೊಂದು ಮಗುವಿನ ಜತೆ ಹೊರಗೋಡಿ ಬಂದರೆ, ಒಳಗಿನ ಕೋಣೆಯಲ್ಲಿ ಓದುತ್ತಿದ್ದ ಸಹೋದರಿಯರಾದ ಶ್ರುತಿ ಹಾಗೂ ಗಾನಶ್ರೀ ಅವರು ಮಣ್ಣಿನಡಿಗೆ ಸಿಲುಕಿದ್ದರು. ಮಕ್ಕಳ ರಕ್ಷಣೆಗೆ ತಕ್ಷಣ ಜೇಸಿಬಿ ಕಾರ್ಯಾಚರಣೆ ಆರಂಭಿಸಿದರು. ಆದರೆ ಮಣ್ಣಿನಿಂದ ಹೊರ ತೆಗೆಯುವ ವೇಳೆ ಇಬ್ಬರು ಮಕ್ಕಳು ಇಹಲೋಕ ತ್ಯಜಿಸಿದ್ದರು. ಮನೆ ಮಂದಿ ಹಾಗೂ ಊರವರು

ಆ ದೇವರಲ್ಲಿ ಮಾಡಿದ ಪ್ರಾರ್ಥನೆ ಫಲಿಸಲೇ ಇಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು