7:58 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ 

03/07/2022, 22:35

ಚಿತ್ರ /ವರದಿ :ಅನುಷ್ ಪಂಡಿತ್ ಮಂಗಳೂರು

ಮಂಗಳೂರು(reporterkarnataka.com):ನಗರದ ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ವತಿಯಿಂದ ಉಪನ್ಯಾಸಕ ಸತೀಶ್ ಪಿ. ಅವರಿಗೆ ಬೀಳ್ಕೊಡುಗೆ ಸಮಾರಂಭ ಕಾಲೇಜಿನ ಸಭಾಂಗಣದಲ್ಲಿ ಜರುಗಿತು.

ಕಾಲೇಜಿನ ಪ್ರಾಂಶುಪಾಲ ಡಾ.ಸುಪ್ರಿಯಾನ್ ಮೊಂತೆರೋ ಮಾತನಾಡಿ, ಕಾಲೇಜಿಗೆ ಅನೇಕ ಕೊಡುಗೆ ಸತೀಶ್ ಪಿ. ನೀಡಿದ್ದಾರೆ. ಶಾಲಾ ಕಟ್ಟಡ ರಿಪೇರಿ ಕಾರ್ಯಕ್ರಮದಲ್ಲಿ ಮುತುವರ್ಜಿ ವಹಿಸಿದ್ದಾರೆ ಎಂದರು.

ಶಿಕ್ಷಕಿ ಪ್ಲೇವಿ  ಮಾತನಾಡಿ, ಅವರು ಎಲ್ಲರಿಗೂ ಪ್ರಿಯವಾಗಿರುವ ಉತ್ತಮ ಶಿಕ್ಷಕ, ಜೀವನದ ಎಲ್ಲಾ ವಿಭಾಗಗಳಲ್ಲಿಯು ಸಕ್ಸಸ್ ಪಡೆದಿದ್ದಾರೆ ಎಂದು ನುಡಿದರು.

ಸತೀಶ್ ಪಿ. ಮಾತನಾಡಿ, ಬಡತನದಲ್ಲೇ ಬೆಳೆದರೂ ತಂದೆ  ತಾಯಿ ಶಿಕ್ಷಣಕ್ಕೆ ಯಾವತ್ತು ಅಡ್ಡಿಪಡಿಸಲಿಲ್ಲ. ನಾನು  ಶಿಕ್ಷಕ ನಾಗುತ್ತೇನೆ ಎಂದು ಅಂದು ಕೊಂಡಿರಲಿಲ್ಲ. ಕಲಿಬೇಕೆಂಬ ಛಲ ಇದ್ದರೆ ಬಡತನ ಅಡ್ಡಿಯಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.


ಕಾರ್ಯಕ್ರಮದಲ್ಲಿ ಸತೀಶ್ ಪಿ. ದಂಪತಿಯನ್ನು ಸನ್ಮಾನಿಸಲಾಯಿತು.


ಉಪನ್ಯಾಸಕರುಗಳಾದ ಫಿಲೋಮಿನಾ ಲೋಬೊ, ಡಾ. ಶಿವಪ್ರಕಾಶ್, ಅಸುಂಡಿ, ದಿವಾಕರ್ ಶೆಟ್ಟಿ, ಚಂದ್ರಕಲಾ, ಆಶಾ, ಪ್ರಸನ್ನ, ಪ್ರಕಾಶ್ ಹಾಗೂ ಪುತ್ರ  ನಾಗಭೂಷಣ್ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ಬೀಳ್ಕೊಡುಗೆ ಸಮಾರಂಭದಲ್ಲಿ ಹಂಚಿಕೊಂಡರು.

ಇತ್ತೀಚಿನ ಸುದ್ದಿ

ಜಾಹೀರಾತು