12:19 PM Monday5 - June 2023
ಬ್ರೇಕಿಂಗ್ ನ್ಯೂಸ್
ರೈಲು ದುರಂತ ಗಾಯಾಳುಗಳ ಪ್ರಧಾನಿ ಮೋದಿ ಭೇಟಿ: ಯೋಗಕ್ಷೇಮ ವಿಚಾರಣೆ; ಮಡಿದವರಿಗೆ 10… ಕಡಲನಗರಿ ಕುಡ್ಲದಲ್ಲಿ 2 ದಿನಗಳ ‘ಹಲಸಿನ ಹಬ್ಬ’; ಜಾಕ್ ಫ್ರುಟ್ ಐಸ್ ಕ್ರೀಂ,… ಫಲ್ಗುಣಿ ನದಿಗೆ ರುಚಿ ಗೋಲ್ಡ್ ತ್ಯಾಜ್ಯ ವಿಸರ್ಜಿಸುವ ಕೊಳವೆ ಪತ್ತೆ: ನಾಗರಿಕ ಹೋರಾಟ… ಒಡಿಸ್ಸಾ ರೈಲು ದುರಂತ: ಕಳಸದಿಂದ ಸಮೇದ್ ಶಿಖರ್ಜಿ ಯಾತ್ರೆಗೆ ತೆರಳಿದ್ದ 110 ಮಂದಿ… ಇವರೇ ಅದೃಷ್ಟವಂತ 110 ಮಂದಿ ಕನ್ನಡಿಗರು!: ಒಡಿಶಾದಲ್ಲಿ ಭೀಕರ ದುರಂತಕ್ಕೀಡಾದ ರೈಲಿನ ಪ್ರಯಾಣಿಕರು;… ಒಡಿಶಾ: ಭೀಕರ ರೈಲು ದುರಂತ; ಕರ್ನಾಟಕದ 110 ಮಂದಿ ಕನ್ನಡಿಗ ಪ್ರಯಾಣಿಕರು ಸೇಫ್ ಲೋಕಸಭೆ ಚುನಾವಣೆ: ನಳಿನ್, ಡಿವಿ, ಮಂಗಳಾ ಅಂಗಡಿ ಸಹಿತ 10ಕ್ಕೂ ಹೆಚ್ಚು ಸಂಸದರು… ಮಾಣಿ: ಬಾಲವಿಕಾಸ ಅಂಗ್ಲ ಮಾಧ್ಯಮ ಶಾಲೆ ಕಚೇರಿ ಉದ್ಘಾಟನೆ; ವೆಲ್ ಕಮ್ ಡೇ… 5 ಲಕ್ಷ ರೂ. ವಂಚನೆ ಪ್ರಕರಣ: ಪೋಲಿಸ್ ಕಾನ್ ಸ್ಟೇಬಲ್ ಸಹಿತ 3… ಮುಡಾ ಉದ್ಯೋಗಿ ನೇಣಿಗೆ ಶರಣು: ಅನಾರೋಗ್ಯದಿಂದ ಬೇಸೆತ್ತು ಆತ್ಮಹತ್ಯೆ?

ಇತ್ತೀಚಿನ ಸುದ್ದಿ

ವಾರದೊಳಗೆ ಕುಸಿದು ಬಿದ್ದ ಸೇತುವೆ!!: 30 ಲಕ್ಷ ರೂ. ಮಣ್ಣುಪಾಲು; ಜನಪ್ರತಿನಿಧಿ, ಗುತ್ತಿಗೆದಾರರ ವಿರುದ್ಧ ಜನರ ಆಕ್ರೋಶ

21/06/2022, 11:52

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಸುಮಾರು 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿ ವಾರದ ಹಿಂದೆ ಸಂಚಾರಕ್ಕೆ ತೆರೆದಿದ್ದ ನೂತನ ಸೇತುವೆ ಕುಸಿದು ಬಿದ್ದ ಘಟನೆ ಕಳಸ ತಾಲೂಕಿನ ನೆಲ್ಲಿಬೀಡು ಗ್ರಾಮದಲ್ಲಿ ನಡೆದಿದೆ.

ಬರಿ ಪಿಕಪ್ ಹೋಗಿದ್ದಕ್ಕೆ ಸೇತುವೆಯ ಕಾಂಕ್ರೀಟ್ ಗೋಡೆಯೇ ಕಳಚಿ ಬಿದ್ದಿದೆ. ಕಂದಕಕ್ಕೆ ಬೀಳುವ ಹಂತದಲ್ಲಿದ್ದ ಪಿಕಪ್ ಗಾಡಿಯನ್ನು ಸ್ಥಳಿಯರ ಹರಸಾಹಸ ಮಾಡಿ ಬಚಾವ್ ಮಾಡಿದ್ದಾರೆ.

ಸ್ವಲ್ಪ ಹೆಚ್ಚು-ಕಡಿಮೆಯಾಗಿದ್ದರೂ ಗಾಡಿ ಕಂದಕಕ್ಕೆ ಉರುಳಿ ಸಂಪೂರ್ಣ ನಜ್ಜುಗುಜ್ಜಾಗುತ್ತಿತ್ತು. ಅದೃಷ್ಟವಶಾತ್ ಪಿಕಪ್ ಚಾಲಕ-ನಿರ್ವಾಹಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಳೆದ ವರ್ಷದ ಅತಿವೃಷ್ಠಿಯಿಂದ ಕೊಚ್ಚಿ ಹೋಗಿದ್ದ ಸೇತುವೆಯನ್ನು ಹೊಸತಾಗಿ ನಿರ್ಮಿಸಲಾಗಿತ್ತು. ಚೌಡಿಬಿಳಲ್, ಕಟ್ಟೆಮನೆ, ಕೊಣೆಮನೆ, ಈಚಲಹೊಳೆ ಸೇರಿದಂತೆ ಐದಾರು ಹಳ್ಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದೆ. 30 ಲಕ್ಷ ಹಣ ಒಂದೇ ವಾರಕ್ಕೆ ಮಣ್ಣುಪಾಲು, ಇಂಜಿನಿಯರ್, ಕಂಟ್ರಾಕ್ಟರ್ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಚಿಕ್ಕಮಗಳೂರು ಜಿಲ್ಲೆ ಕಳಸ ತಾಲೂಕಿನ ಕೂಲಿಕಾರ್ಮಿಕ ಪರಿಶಿಷ್ಟ ಪಂಗಡದವರು ಹೆಚ್ಚಿರುವ ಗ್ರಾಮಗಳು ಇದಾಗಿವೆ.

ಇತ್ತೀಚಿನ ಸುದ್ದಿ

ಜಾಹೀರಾತು