2:27 PM Friday19 - April 2024
ಬ್ರೇಕಿಂಗ್ ನ್ಯೂಸ್
ಈ ಚುನಾವಣೆ ಎರಡು ಸಿದ್ದಾಂತಗಳ ನಡುವಿನ ಹೋರಾಟ; ಸಂವಿಧಾನ, ಪ್ರಜಾತಂತ್ರ ಉಳಿವಿಗೆ ಕಾಂಗ್ರೆಸ್… ನಂಜನಗೂಡಿನಲ್ಲಿ ಸಂಭ್ರಮ- ಸಡಗರದ ಶ್ರೀ ರಾಮೇಶ್ವರ ರಥೋತ್ಸವ, ಜಾತ್ರಾ ಮಹೋತ್ಸವ ಬೈಕಿಗೆ ಕಾರು ಡಿಕ್ಕಿ: ಸಹ್ಯಾದ್ರಿ ಕಾಲೇಜು ವಿದ್ಯಾರ್ಥಿ ದಾರುಣ ಸಾವು ರಾಮೇಶ್ವರ ದೇಗುಲಕ್ಕೆ ಮಾಜಿ ಪ್ರಧಾನಿ ದೇವೇಗೌಡ ಭೇಟಿ; ವಿಶೇಷ ಪೂಜೆ ಸಲ್ಲಿಕೆ; ಬಿಜೆಪಿ… ದಕ್ಷಿಣ ಕನ್ನಡ ಜಿಲ್ಲೆ ಮತ್ತೊಮ್ಮೆ ಕಾಂಗ್ರೆಸಿನ ಭದ್ರಕೋಟೆಯಾಗಲಿದೆ: ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಪೂಜಾರಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಏ.24ರಂದು ಉಡುಪಿಗೆ: ಕೋಟ ಪರ ರೋಡ್… ವಿಜಯಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ನಾಮಪತ್ರ ಸಲ್ಲಿಕೆ: ಬೃಹತ್… ಸೈಂಟ್ ಜೋಸೆಫ್ ವಿಶ್ವವಿದ್ಯಾಲಯದಲ್ಲಿ ಮೇಳೈಸಿದ ಈಶಾನ್ಯ ಭಾರತ ಮತ್ತು ಟಿಬೆಟ್‌ನ ಶ್ರೀಮಂತ ಸಂಸ್ಕೃತಿಗಳ… ಕನ್ನಡದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ನಿಧನ: ಗಣ್ಯರ ಸಂತಾಪ ಮರೆಯಾದ ‘ಪಾಡ್ದನ ಕೋಗಿಲೆ’: ಜನಪದ ಸಾಹಿತ್ಯದ ವಿಶ್ವಕೋಶ, ಪಾಡ್ದನ ತಜ್ಞೆ ಗಿಡಿಗೆರೆ ರಾಮಕ್ಕ…

ಇತ್ತೀಚಿನ ಸುದ್ದಿ

ಬೆಂಗಳೂರಿನಲ್ಲಿ ನೃತ್ಯ ಮತ್ತು ಈಜು ತರಗತಿಗಳಿಗೆ ಹೆಚ್ಚಿದ ಬೇಡಿಕೆ: ಜಸ್ಟ್ ಡಯಲ್ ಗ್ರಾಹಕರ ಒಳನೋಟಗಳು

21/06/2022, 17:57

*ಎರಡನೇ ಸ್ತರದ ನಗರಗಳು ಮತ್ತು ಪಟ್ಟಣಗಳಲ್ಲಿ ಮೊದಲ ಸ್ತರಕ್ಕಿಂತ ಶೇ.35ರಷ್ಟು ಹೆಚ್ಚಿದ ಹವ್ಯಾಸ ತರಗತಿಗಳ ಹುಡುಕಾಟ

*ದೇಶದಾದ್ಯಂತ ಪ್ರಭಾವ ಬೀರಿದ ನೃತ್ಯ ತರಗತಿಗಳ ಹುಡುಕಾಟ


ಬೆಂಗಳೂರು(reporterkarnataka.com):
ಈ ಬೇಸಿಗೆ ರಜೆಯಲ್ಲಿ ನೃತ್ಯ, ಭಾಷಾ ಕಲಿಕೆ ಮತ್ತು ಸಂಗೀತ ತರಗತಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಏಕೆಂದರೆ, ಕೋವಿಡ್ನ ಏಕಾಏಕಿ ಎರಡು ವರ್ಷಗಳ ಲಾಕ್ಡೌನ್ ನಂತರ ಹವ್ಯಾಸಗಳ ಹುಡುಕಾಟಗಳು ವರ್ಷದಿಂದ ವರ್ಷಕ್ಕೆ ಶೇ.209 (ವೈಒವೈ)ರಷ್ಟು ಏರಿಕೆ ಕಂಡಿದೆ ಎಂದು ಇತ್ತೀಚಿನ ಜಸ್ಟ್ ಡಯಲ್ ಗ್ರಾಹಕ ಒಳನೋಟಗಳು ವರದಿ ಮಾಡಿವೆ. 

ಭಾರತದ ನಂ.1 ಸ್ಥಳೀಯ ಸರ್ಚ್ ಇಂಜಿನ್ ಜಸ್ಟ್ ಡಯಲ್ನಲ್ಲಿ ನೃತ್ಯ, ಭಾಷಾ ಕಲಿಕೆ ಮತ್ತು ಸಂಗೀತ ತರಗತಿಗಳು ಟಾಪ್-3 ಹೆಚ್ಚು ಹುಡುಕಲ್ಪಟ್ಟ ಹವ್ಯಾಸ ತರಗತಿಗಳು. ಆದರೆ, ಏಪ್ರಿಲ್-ಮೇ 2022ರ ಅವಧಿಯಲ್ಲಿ ಈಜು ಮತ್ತು ಯೋಗ ತರಗತಿಗಳು ಟಾಪ್-5ರಲ್ಲಿದ್ದವು. ಮೊದಲ ಸ್ತರದ ನಗರಗಳಲ್ಲಿನ ಹುಡುಕಾಟಗಳು ಶೇ.203ರ ವರ್ಷದಿಂದ ವರ್ಷಕ್ಕೆ ಏರಿಕೆ ಕಂಡರೆ, ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಲ್ಲಿ ಇದು ಶೇ.232 ಹೆಚ್ಚಾಗಿದೆ. 

ಹುಡುಕಾಟದ ಪ್ರವೃತ್ತಿಗಳ ಕುರಿತು ಪ್ರತಿಕ್ರಿಯೆ ನೀಡಿದ ಜಸ್ಟ್ ಡಯಲ್ನ ಸಿಎಂಒ ಶ್ರೀ ಪ್ರಸೂನ್ ಕುಮಾರ್, “ಶಾಲಾ ಮತ್ತು ಕಾಲೇಜು ನೀಡುವ ಬೇಸಿಗೆ ರಜೆಯು ವಿದ್ಯಾರ್ಥಿಗಳಿಗೆ ಹವ್ಯಾಸಗಳ ಕಲಿಕೆಗೆ ಸೂಕ್ತ ಸಮಯವಾಗಿದೆ. ನಮ್ಮ ಬಳಕೆದಾರರಿಗೆ ಅನುಕೂಲಕರವಾದ ಆಯ್ಕೆ ಮಾಡಲು ಸಹಾಯ ಮಾಡುವ ನೆರೆಹೊರೆಯಲ್ಲಿ ನಾವು ವ್ಯಾಪಕ ಶ್ರೇಣಿಯ ಹವ್ಯಾಸ ತರಗತಿಗಳನ್ನು ಒಟ್ಟುಗೂಡಿಸಿದ್ದೇವೆ. ಕೋವಿಡ್ ಪ್ರೇರಿತ ಲಾಕ್ಡೌನ್ಗಳಿಗೆ ಸಾಕ್ಷಿಯಾದ ಕಳೆದ ಎರಡು ವರ್ಷಗಳಲ್ಲಿ ಇದೇ ಅವಧಿಯಲ್ಲಿ ಈ ವರ್ಷ ಹುಡುಕಾಟಗಳು ಗಣನೀಯವಾಗಿ ಹೆಚ್ಚಾಗಿವೆ. ಆನ್ಲೈನ್ನಲ್ಲಿ ಸೇವೆ ಒದಗಿಸುವವರು ಹೆಚ್ಚಾಗಿರುವುದನ್ನು ನಾವು ನೋಡುತ್ತಿದ್ದೇವೆ. ಆದ್ದರಿಂದ ಜಸ್ಟ್ ಡಯಲ್ ಎಲ್ಲಾ ರೀತಿಯ ಹವ್ಯಾಸ ತರಗತಿಗಳನ್ನು ತಲುಪಲು ಪ್ಲಾಟ್ಫಾರ್ಮ್ ಆಗಿದೆ. ಮೊದಲನೇ ಸ್ತರಕ್ಕೆ ಹೋಲಿಸಿದರೆ ಹುಟುಕಾಟಗಳು ಶೇ.35ರಷ್ಟು ಮುಂದಿರುವ ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಲ್ಲಿ ಪ್ರವೃತ್ತಿಯು ಉತ್ತಮವಾಗಿ ಬೆಳೆದಿದೆ”. 

ಜಸ್ಟ್ ಡಯಲ್ನಲ್ಲಿ ನೃತ್ಯವು ಹೆಚ್ಚು ಬೇಡಿಕೆಯಿರುವ ಹವ್ಯಾಸ ತರಗತಿಯಾಗಿತ್ತು. ದೆಹಲಿ, ಮುಂಬೈ ಮತ್ತು ಬೆಂಗಳೂರು ಗರಿಷ್ಠ ಬೇಡಿಕೆಯೊಂದಿಗೆ ಟಾಪ್ -3 ಮೊದಲನೇ ಸ್ತರದ ನಗರಗಳಾಗಿವೆ. ಬೇಡಿಕೆಯ ಏರಿಕೆಯು ದೆಹಲಿಯಲ್ಲಿ ಶೇ.53ರಷ್ಟು ಅತ್ಯಧಿಕವಾಗಿದೆ ಮತ್ತು ಕೋಲ್ಕತ್ತಾ ಶೇ.31ರೊಂದಿಗೆ ಎರಡನೇ ಸ್ಥಾನದಲ್ಲಿದೆ. ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಾದ ಲಕ್ನೋ, ಜೈಪುರ, ಚಂಡೀಗಢ, ಇಂದೋರ್ ಮತ್ತು ನಾಗ್ಪುರಗಳು ಗರಿಷ್ಠ ಬೇಡಿಕೆಯೊಂದಿಗೆ ಟಾಪ್ -5ರಲ್ಲಿವೆ. 

 ಭಾಷಾ ತರಗತಿಗಳಿಗೆ, ದೆಹಲಿ ಮತ್ತು ಮುಂಬೈನಲ್ಲಿನ ಬೇಡಿಕೆಯು ಮೂರನೇ ಸ್ಥಾನದಲ್ಲಿರುವ ಪುಣೆಯೊಂದಿಗೆ ಮೊದಲನೇ ಸ್ತರದ ನಗರಗಳಿಂದ ಸುಮಾರು ಶೇ.50ರಷ್ಟು ಹುಡುಕಾಟಗಳಿಗೆ ಕೊಡುಗೆ ನೀಡಿದೆ. ಇಂದೋರ್, ಜೈಪುರ, ಚಂಡೀಗಢ, ನಾಗ್ಪುರ ಮತ್ತು ಪಾಟ್ನಾ ಟಾಪ್-5 ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳು ಭಾಷಾ ತರಗತಿಗಳಿಗೆ ಗರಿಷ್ಠ ಬೇಡಿಕೆಯನ್ನು ಕಂಡಿವೆ. 

ಮುಂಬೈ ಸಂಗೀತ ತರಗತಿಗಳ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ ಮತ್ತು ಮೊದಲನೇ ಸ್ತರದ ನಗರಗಳಿಂದ ಶೇ.20ರಷ್ಟು ಹುಡುಕಾಟಗಳಿಗೆ ಕೊಡುಗೆ ನೀಡಿದೆ. ನಂತರ ದೆಹಲಿ ಮತ್ತು ಚೆನ್ನೈ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ಲಕ್ನೋ, ಇಂದೋರ್, ನಾಗ್ಪುರ, ಚಂಡೀಗಢ ಮತ್ತು ಕೊಯಮತ್ತೂರು ಸಂಗೀತ ತರಗತಿಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ ಟಾಪ್-5 ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಾಗಿವೆ. 

ಏರುತ್ತಿರುವ ತಾಪಮಾನದ ಪರಿಣಾಮವಾಗಿ ಮುಂಬೈ ಈಜು ತರಗತಿಗಳಿಗೆ ಗರಿಷ್ಠ ಬೇಡಿಕೆ ಇವೆ. ಮುಂಬೈನಲ್ಲಿ ಈಜು ತರಗತಿಗಳಿಗಾಗಿ ಹುಡುಕಾಟಗಳು ಅತ್ಯಧಿಕವಾಗಿದ್ದು, ದೆಹಲಿ ಮತ್ತು ಬೆಂಗಳೂರು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿರುವ ಮೊದಲನೇ ಸ್ತರದ ನಗರಗಳಿಂದ ಬೇಡಿಕೆಯ ಶೇ.30ರಷ್ಟು ನಗರವು ಕೊಡುಗೆ ನೀಡಿದೆ. ಜೈಪುರ ಲಕ್ನೋ, ಇಂದೋರ್, ಚಂಡೀಗಢ ಮತ್ತು ಕೊಯಮತ್ತೂರುಗಳು ಈಜು ತರಗತಿಗಳಿಗೆ ಗರಿಷ್ಠ ಬೇಡಿಕೆಯನ್ನು ಹೊಂದಿರುವ ಟಾಪ್-5 ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಾಗಿವೆ. 

ಯೋಗ ತರಗತಿಗಳಿಗೆ ಬಂದಾಗ, ಮುಂಬೈ ಕೂಡಾ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ಮೊದಲನೇ ಸ್ತರದ ನಗರಗಳಿಂದ ಶೇ.25ಕ್ಕಿಂತ ಹೆಚ್ಚು ಹುಡುಕಾಟಗಳನ್ನು ಉತ್ಪಾದಿಸುತ್ತದೆ. ದೆಹಲಿ ಮತ್ತು ಚೆನ್ನೈ ಟಾಪ್ -3ರಲ್ಲಿವೆ. ಚಂಡೀಗಢ, ಜೈಪುರ, ಲಕ್ನೋ, ಸೂರತ್ ಮತ್ತು ಇಂದೋರ್ ಎರಡನೇ ಸ್ತರದ ಪಟ್ಟಣಗಳು ಮತ್ತು ನಗರಗಳಲ್ಲಿ ಬೇಡಿಕೆಯಲ್ಲಿ ಅಗ್ರಸ್ಥಾನದಲ್ಲಿವೆ.

ಇತ್ತೀಚಿನ ಸುದ್ದಿ

ಜಾಹೀರಾತು